Asianet Suvarna News

ಕ್ವಾರಂಟೈನ್‍ನಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು

ಕ್ವಾರಂಟೈನ್‍ನಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

A Man Commits Suicide Who Is In quarantine at Bidar
Author
Bengaluru, First Published May 26, 2020, 9:59 PM IST
  • Facebook
  • Twitter
  • Whatsapp

ಬೀದರ್, (ಮೇ 26): ಮುಂಬೈನಿಂದ ಹಿಂದಿರುಗಿ ಕ್ವಾರಂಟೈನ್‍ನಲ್ಲಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ. 

ಸಚಿನ್ ಜಾದವ್ (21) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಎಂಟು ದಿನಗಳ ಹಿಂದೆ ಮುಂಬೈನಿಂದ ಪತ್ನಿಯ ಜತೆ ಬೀದರ್‌ಗೆ ಹಿಂದಿರುಗಿದ್ದ.

ರಾಜ್ಯದಲ್ಲಿ ಬೆಳಗ್ಗೆ ಶತಕ ಬಾರಿಸಿದ್ದ ಕೊರೋನಾ, ಸಂಜೆ ಕೇವಲ 1

ಮುಂಬೈನಿಂದ ಬಂದ ಕಾರಣ ದಂಪತಿಯನ್ನು ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದ್ರೆ, ಜಾದವ್ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಮಾಹಿತಿ ತಿಳಿದ ಔರಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾದವ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Follow Us:
Download App:
  • android
  • ios