ಹೊಸಪೇಟೆ ಜಂಬುನಾಥೇಶ್ವರ ರಥದ ಚಕ್ರಕ್ಕೆ ಸಿಲುಕಿ ಭಕ್ತ ದುರ್ಮರಣ
ಹೊಸಪೇಟೆ ಹೊರವಲಯದ ಶ್ರೀ ಜಂಬುನಾಥೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥ ಎಳೆಯುವ ವೇಳೆ ಚಕ್ರಕ್ಕೆ ಸಿಲುಕಿ ಭಕ್ತನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ರಾಮಪ್ಪ (49) ಮೃತ ದುರ್ದೈವಿ. ರಥ ಕಟ್ಟುವ ಕೆಲಸ ಮಾಡುತ್ತಿದ್ದ ರಾಮು. ಜಾತ್ರೆಯಲ್ಲಿ ರಥ ಎಳೆಯುವ ವೇಳೆ ಕಿಕ್ಕಿರಿದು ಸೇರಿದ್ದ ಭಕ್ತ ಸಮೂಹ ಈ ವೇಳೆ ರಥದ ಬಳಿಯಲ್ಲಿದ್ದ ಮೃತ ರಾಮಪ್ಪ.
ವಿಜಯನಗರ (ಏ.21): ಹೊಸಪೇಟೆ ಹೊರವಲಯದ ಶ್ರೀ ಜಂಬುನಾಥೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥ ಎಳೆಯುವ ವೇಳೆ ಚಕ್ರಕ್ಕೆ ಸಿಲುಕಿ ಭಕ್ತನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ರಾಮಪ್ಪ (49) ಮೃತ ದುರ್ದೈವಿ. ರಥ ಕಟ್ಟುವ ಕೆಲಸ ಮಾಡುತ್ತಿದ್ದ ರಾಮು. ಜಾತ್ರೆಯಲ್ಲಿ ರಥ ಎಳೆಯುವ ವೇಳೆ ಕಿಕ್ಕಿರಿದು ಸೇರಿದ್ದ ಭಕ್ತ ಸಮೂಹ ಈ ವೇಳೆ ರಥದ ಬಳಿಯಲ್ಲಿದ್ದ ಮೃತ ರಾಮಪ್ಪ.
ರಥಕ್ಕೆ ಎಸೆದ ಬಾಳೆ ಹಣ್ಣಿನ ಮೇಲೆ ಕಾಲಿಟ್ಟು ಜಾರಿ ರಥದ ಚಕ್ರದಡಿ ಬಿದ್ದಿದ್ದಾನೆ. ಈ ವೇಳೆ ಮೈಮೇಲೆ ಹರಿದ ರಥ. ಅವಘಡ ನಡೆದ ಕೂಡಲೇ ಸ್ಥಳೀಯರು ಅಂಬುಲೈನ್ಸ್ ಗೆ ಕರೆಸಿ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಗೆ ಹೊಸಪೇಟೆ ಗ್ರಾಮೀಣ ಪೊಲೀಸರು ದೌಡಾಯಿಸಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ಘಟನೆ ಬಳಿಕ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಈ ವರ್ಷ ಒಳ್ಳೇದಕ್ಕಿಂತ ಕೆಟ್ಟದ್ದು ಕೇಳೋದೇ ಜಾಸ್ತಿ ಆಗ್ತೈತಿ, ಮಳೆ ಬೆಳೆಯೂ ಉತ್ತಮ ಐತಿ: ಕೊಡೆಕಲ್ ಕಾರ್ಣಿಕ ಭವಿಷ್ಯ