Asianet Suvarna News Asianet Suvarna News

ಚಿಕ್ಕಮಗಳೂರು: ಯುಗಾದಿ ಹಬ್ಬದಂದೇ ಮನೆಗೆ ನುಗ್ಗಿ ಬೆಕ್ಕಿನ ಮರಿ ನುಂಗಿದ ನಾಗರಹಾವು!

ಯುಗಾದಿ ಹಬ್ಬದಂದು ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಇರುವಾಗಲೇ ಮನೆಯೊಳಗೆ ನುಗ್ಗಿದ ನಾಗರಹಾವೊಂದು ಬೆಕ್ಕಿನ ಮರಿಯನ್ನ ನುಂಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರಿ ತಾಲೂಕಿನಲ್ಲಿ ನಡೆದಿದೆ

A cobra swallowed kitten in mudigere at chikkamagaluru rav
Author
First Published Apr 10, 2024, 12:19 AM IST

ಚಿಕ್ಕಮಗಳೂರು (ಏ.10) ನಾಡಿದ್ಯಾಂತ ಜನರು ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಬೇವು ಬೆಲ್ಲ ಸವಿದಿದ್ದಾರೆ. ಇನ್ನೊಂದೆಡೆ ಹಬ್ಬದ ದಿನವೇ ದುರಂತಗಳು ಸಂಭವಿಸಿವೆ.  ಯುಗಾದಿ ಹಬ್ಬದಂದು ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಇರುವಾಗಲೇ ಮನೆಯೊಳಗೆ ನುಗ್ಗಿದ ನಾಗರಹಾವೊಂದು ಬೆಕ್ಕಿನ ಮರಿಯನ್ನ ನುಂಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರಿ ತಾಲೂಕಿನಲ್ಲಿ ನಡೆದಿದೆ

ಯುಗಾದಿ ಹಬ್ಬದ ದಿನವೇ ದೀಕ್ಷಿತ್ ಎಂಬುವವರ ಮನೆಗೆ ನುಗ್ಗಿರುವ ನಾಗರಹಾವು. ಹಬ್ಬದಲ್ಲಿ ಮನೆಯ ಸದಸ್ಯರು ಬ್ಯುಸಿಯಾಗಿದ್ದ ವೇಳೆ ಮನೆಯೊಳಗೆ ಎಂಟ್ರಿ ಕೊಟ್ಟಿರುವ ನಾಗರ. ಈ ವೇಳೆ ಮಂಚದ ಕೆಳಗಿದ್ದ ಬೆಕ್ಕಿನ ಮರಿಯನ್ನು ನುಂಗಿ ಹೊರಬಂದಿರೋ ಹಾವು. ಬೆಕ್ಕಿನ ಮರಿ ನುಂಗಿದ ಬಳಿಕ ಸಾರಾಗವಾಗಿ ಸಂಚರಿಸದೇ ಮನೆಯ ಮುಂಭಾಗ ತೆವಳುತ್ತ ಬಿದ್ದಿದ್ದ ಹಾವು. ಬಳಿಕ ಉರಗ ತಜ್ಞ ಆರೀಫ್ ಗೆ ಮಾಹಿತಿ ನೀಡಿದ್ದಾರೆ.

ದೇವರ ಫೋಟೊ ತೊಳೆಯಲು ಕಾವೇರಿ ನದಿಗೆ ಇಳಿದು ಇಬ್ಬರು ಯುವಕರು ಸಾವು
 
ಸ್ಥಳಕ್ಕೆ ಬಂದ ಉರಗ ತಜ್ಞ ಆರೀಫ್, ಬೆಕ್ಕಿನ ಮರಿಯನ್ನು ಕಕ್ಕಿಸಿ ನಾಗರಹಾವನ್ನು ಸೆರೆಹಿಡಿದು ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕಳೆದ ವರ್ಷಕ್ಕಿಂತ ಈ ಬಾರಿ ಮಲೆನಾಡು ಬಿಸಿಲ ತಾಪಕ್ಕೆ ತತ್ತರಿಸಿದೆ. ತಾಪಮಾನ ಹೆಚ್ಚಳದಿಂದ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಕಾಫಿನಾಡು ಈ ವರ್ಷ ಬರಡಾಗಿದೆ. ಹೀಗಾಗಿ ಮನುಷ್ಯರಿಗಷ್ಟೇ ಅಲ್ಲ ನಾಗರಹಾವುಗಳು ಸಹ ಆಹಾರ, ನೀರಿಗೆ ಪರಿತಪಿಸುವಂತಾಗಿದೆ ಬಿಸಿಲ ತಾಪಕ್ಕೆ ಆಹಾರ ಆರಿಸಿ ಮನೆಗೆ ಮನೆಗೆ ಬರುತ್ತಿವೆ.

Follow Us:
Download App:
  • android
  • ios