Chitradurga: ವೈದ್ಯನ ಹೈಡೋಸ್ ಇಂಜೆಕ್ಷನ್‌ಗೆ 13 ವರ್ಷದ ಬಾಲಕಿ ಬಲಿ: ಏನಿದು ಘಟನೆ?
ವೈದ್ಯೋ ನಾರಯಣೋ ಹರಿ ಎನ್ನುವ ಗಾದೆ ಮಾತಿನಂತೆ ಜನರು ವೈದ್ಯರನ್ನು ದೇವರಿಗೆ ಹೋಲಿಕೆ ಮಾಡ್ತಾರೆ. ಆದ್ರೆ ಇಲ್ಲೊಬ್ಬ ವೈದ್ಯ ಕೇವಲ ಕೆಮ್ಮು, ಜ್ವರಕ್ಕೆ ಕೊಟ್ಟಿರುವ ಇಂಜೆಕ್ಷನ್ ರಿಯಾಕ್ಷನ್ ಆಗಿ ಪುಣ್ಣ ಬಾಲಕಿಯೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಫೆ.18): ವೈದ್ಯೋ ನಾರಯಣೋ ಹರಿ ಎನ್ನುವ ಗಾದೆ ಮಾತಿನಂತೆ ಜನರು ವೈದ್ಯರನ್ನು ದೇವರಿಗೆ ಹೋಲಿಕೆ ಮಾಡ್ತಾರೆ. ಆದ್ರೆ ಇಲ್ಲೊಬ್ಬ ವೈದ್ಯ ಕೇವಲ ಕೆಮ್ಮು, ಜ್ವರಕ್ಕೆ ಕೊಟ್ಟಿರುವ ಇಂಜೆಕ್ಷನ್ ರಿಯಾಕ್ಷನ್ ಆಗಿ ಪುಣ್ಣ ಬಾಲಕಿಯೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಈ ಕುರಿತು ವರದಿ ಇಲ್ಲಿದೆ ಎದೆ ಎತ್ತರಕ್ಕೆ ಬೆಳೆದಿದ್ದ ಮಗಳನ್ನು ಕಳೆದುಕೊಂಡು ರೋಧನೆ ಪಡ್ತಿರೋ ತಾಯಿ. ಮತ್ತೊಂದೆಡೆ ನಮಗೆ ನ್ಯಾಯ ಕೊಡಿಸಿ ಎಂದು ಖಾಸಗಿ ಆಸ್ಪತ್ರೆ ಮುಂದೆ ಆಕ್ರೋಶ ಹೊರ ಹಾಕ್ತಿರೋ ಮೃತ ಬಾಲಕಿ ಸಂಬಂಧಿಕರು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗುಡ್ಡದ ನೇರಲಕೆರೆ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ಕೃಪಾ(೧೨) ಬಾಲಕಿಗೆ ಪೋಷಕರು ಕೆಮ್ಮು,ಜ್ವರ ಎಂದು ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಡಾಕ್ಟರ್ ಶಶಿಕಿರಣ್ ಕೊಟ್ಟಿರುವ ಹೈಡೋಸ್ ಇಂಜೆಕ್ಷನ್ ಪರಿಣಾಮವಾಗಿ, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಆ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗದ ಖಾಸಗಿ ಆಸ್ಪತ್ರೆ ಬಸವೇಶ್ವರಕ್ಕೆ ದಾಖಲಿಸಲು ಡಾಕ್ಟರ್ ಸಲಹೆ ನೀಡಿದ್ದಾರೆ. ಅದರಂತೆ ಪೋಷಕರು ಮಗುವನ್ನು ದಾಖಲು ಮಾಡಿದ ಒಂದೇ ದಿನಕ್ಕೆ ಸಾವನ್ನಪ್ಪಿರುವುದು ಇಡೀ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.
ಎದೆ ಮಟ್ಟಕ್ಕೆ ಬೆಳೆದು ನಿಂತಿದ್ದ ಮಗಳು ಇಂದು ಸಾವನ್ನಪ್ಪಿರೋದು ನಮಗೆ ತುಂಬಲಾರದ ನೋವು ತಂದಿದೆ. ವೈದ್ಯ ಶಶಿಕಿರಣ್ ಮಾಡಿರುವ ಎಡವಟ್ಟೇ ಇಂದು ನನ್ನ ಮಗಳ ಸಾವಿಗೆ ಕಾರಣವಾಗಿದೆ. ಕೂಡಲೇ ಅವನನ್ನು ಬಂಧಿಸಿ ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಿ ಎಂದು ಮೃತ ಬಾಲಕಿ ತಾಯಿ ಆಕ್ರೋಶ ವ್ಯಕ್ತಪಡಿಸಿದಳು. ಇನ್ನೂ ಬಸವೇಶ್ವರ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಆದ ಕಾರಣವೂ ಮಗು ಸಾವನ್ನಪ್ಪಿರಬಹುದು ಎಂದು ಪೋಷಕರ ಸಂಬಂಧಿಕರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ MD ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬರುವ ಮುನ್ನವೇ ರೋಗಿಯ ಸ್ಥಿತಿ ಚಿಂತಾಜನಕವಾಗಿತ್ತು.
ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಯತ್ನ: ಅಧಿಕಾರಿಗಳ ಕಣ್ಣಮುಚ್ಚಾಲೆ ಆಟಕ್ಕೆ ಪರದಾಡ್ತಿರೋ ಮಹಿಳೆ!
ಆದರೂ ನಮ್ಮಲ್ಲಿ ಮಕ್ಕಳಿಗಾಗಿ ವಿಶೇಷ ಚಿಕಿತ್ಸಾ ವ್ಯವಸ್ಥೆ ಇದೆ. ಅಲ್ಲಿನ ವೈದ್ಯರು ಕೊಟ್ಟಿರುವ ಹೈ ಡೋಸ್ ನಿಂದಾಗಿ ಮಗುವಿನ ಅಂಗಾಂಗಗಳು ನಿಷ್ಕ್ರಿಯವಾಗಿವೆ. ನಮ್ಮ ಆಸ್ಪತ್ರೆ ವೈದ್ಯರು ಸರಿಯಾಗಿಯೇ ಚಿಕಿತ್ಸೆ ನೀಡಿದ್ರು ಬಾಲಕಿ ಸ್ಪಂದಿಸದ ಕಾರಣ ಈ ರೀತಿ ಸಾವಾಗಿದೆ ಇದ್ರಲ್ಲಿ ನಮ್ಮ ಆಸ್ಪತ್ರೆ ಸಿಬ್ಬಂದಿಗಳು, ವೈದ್ಯರ ನಿರ್ಲಕ್ಷ ಇಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಇಂಜೆಕ್ಷನ್ ಕೊಟ್ಟ ಪುಣ್ಯತ್ಮ ಡಾಕ್ಟರ್ ಯಾರ ಪೋನ್ ಸಂಪರ್ಕಕ್ಕೂ ಸಿಗದೇ ಇರುವುದು ದುರಂತ. ಒಟ್ಟಾರೆ ಬಾಳಿ ಬದುಕಬೇಕಿದ್ದ ಕಂದಮ್ಮ ವೈದ್ಯ ಮಾಡಿದ ತಪ್ಪಿಗೆ ಬಲಿಯಾಗಿರುವುದು ನಿಜಕ್ಕೂ ನೋವಿನ ಸಂಗತಿ. ಇದಕ್ಕೆ ಸಂಬಂದಿಸಿದ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಮಗುವಿನ ಕುಟುಂಬಕ್ಕೆ ನೆರವಾಗಲಿ ಎಂಬುದು ನಮ್ಮ ಕಳಕಳಿ.