ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಯತ್ನ: ಅಧಿಕಾರಿಗಳ ಕಣ್ಣಮುಚ್ಚಾಲೆ ಆಟಕ್ಕೆ ಪರದಾಡ್ತಿರೋ ಮಹಿಳೆ!
ನಕಲಿ ದಾಖಲೆ ಸೃಷ್ಠಿಸಿ ಸೈಟ್ ಮತ್ತು ಜಮೀನು ನುಂಗುವ ಖದೀಮರು, ನಗರ ಪ್ರದೇಶದಲ್ಲಿ ಮಾತ್ರ ಅಲ್ಲ, ಹಳ್ಳಿಗಳಲ್ಲೂ ಇರುತ್ತಾರೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ
ಬಳ್ಳಾರಿ (ಫೆ.18): ನಕಲಿ ದಾಖಲೆ ಸೃಷ್ಠಿಸಿ ಸೈಟ್ ಮತ್ತು ಜಮೀನು ನುಂಗುವ ಖದೀಮರು, ನಗರ ಪ್ರದೇಶದಲ್ಲಿ ಮಾತ್ರ ಅಲ್ಲ, ಹಳ್ಳಿಗಳಲ್ಲೂ ಇರುತ್ತಾರೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ತಮ್ಮ ಜಮೀನು ಮತ್ತೊಬ್ಬರು ಕಬಳಿಸಿದ್ದಾರೆಂದು ಅದನ್ನು ಉಳಿಸಿಕೊಡಿ ಎಂದು ಅಂಗಲಾಚಿದ್ರೂ ಕಿಮ್ಮತ್ತು ನೀಡದ ಇಲ್ಲಿಯ ಅಧಿಕಾರಿಗಳು, ಸಿಎಂ ಜನಸ್ಪಂದನ ಕಾರ್ಯಕ್ರಮದಲ್ಲಿ ಸಂತ್ರಸ್ತೆ ದೂರು ನೀಡಿದ ಬಳಿಕ ಎಚ್ಚತ್ತಕೊಂಡುಇದೀಗ ದೂರು ದಾಖಲಿಸಿ ಕೊಂಡಿದ್ದಾರೆ. ಬಳ್ಳಾರಿ ತಾಲೂಕಿನಲ್ಲಿ ಬೆಣಕಲ್ ಗ್ರಾಮದಲ್ಲಿ ನಡೆದ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.
ಅಧಿಕಾರಿಗಳ ಶಾಮೀಲು: ಹೌದು, ಹೀಗೆ ತಮ್ಮ ಜಮೀನಿನ ದಾಖಲೆ ಪತ್ರಗಳನ್ನು ಹಿಡಿದು ಕೊಂಡು ಕಣ್ಣಿರು ಹಾಕ್ತಿರೋ ಈ ಮಹಿಳೆ ಹೆಸರು ಅಯ್ಯಮ್ಮ.. ಬಳ್ಳಾರಿ ತಾಲೂಕಿನ ಬೆಣಕಲ್ ಗ್ರಾಮದ ನಿವಾಸಿಯಾಗಿರೋ ಅಯ್ಯಮ್ಮ ತಮಗೆ ಸೇರಿದ 1 ಎಕ್ಕರೆ 80 ಸೆಂಟ್ಸ್ ಭೂಮಿ ಉಳಿಸಿ ಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇದಕ್ಕೆ ಕಾರಣ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಭೂಮಿ ನುಂಗಲು ಯತ್ನಸಿರೋದಾಗಿದೆ. ಅಯ್ಯಮ್ಮ ಎನ್ನುವ ನಕಲಿ ಮಹಿಳೆಯನ್ನ ಸೃಷ್ಠಿಸಿ 1 ಎಕ್ಕರೆ 80 ಸೆಂಟ್ಸ್ ಜಮೀನು ಮಾರಾಟ ಮಾಡಲಾಗಿದೆ. ಇದರಲ್ಲಿ ಬೆಣಕಲ್ ಗ್ರಾಮದ ವಿಲೇಜ್ ಅಕೌಂಟೆಂಟ್, ರೆವಿನ್ಯೂ ಇನ್ಸ್‌ಪೆಕ್ಟರ್, ಸಬ್ ರಿಜಿಸ್ಟ್ರಾರ್ ಸೇರಿದಂತೆ ಎಲ್ಲರೂ ಶಾಮೀಲಾಗಿದ್ದಾರೆಂದು ಇದೀಗ ಒಟ್ಟು ಎಂಟು ಜನರ ವಿರುದ್ದ ಬಳ್ಳಾರಿ ತಾಲೂಕಿನ ಮೋಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ
ಮಾರಾಟ ಮಾಡಿರೋದೇ ಅಯ್ಯಮ್ಮಗೆ ಗೊತ್ತಿರಲಿಲ್ಲ: ಬೆಣಕಲ್ ಗ್ರಾಮದ ಹೊರವಲಯದಲ್ಲಿರೋ ಭೂಮಿಯ ಮೂಲ ಮಾಲೀಕರಾದ ಅಯ್ಯಮ್ಮ ಅಕಸ್ಮಾತ್ತಾಗಿ ಜನವರಿಯಲ್ಲಿ ಪಹಣಿ ಚೆಕ್ ಮಾಡಿದಾಗ ಬೇರೆಯವರ ಹೆಸರಿಗೆ ವರ್ಗಾವಣೆಯಾಗಿರೋದು ಗೊತ್ತಾಗಿದೆ. ಕೂಡಲೇ ಆನ್ ಲೈನ್ ನಲ್ಲಿ ಚೆಕ್ ಮಾಡಿದಾಗ ಅಯ್ಯಮ್ಮ ಅವರ ಜಮೀನು ಮಾರಾಟವಾಗಿ ಹದಿನೈದು ದಿನ ಕಳೆದಿರೋದು ಬೆಳಕಿಗೆ ಬಂದಿದೆ. ನಕಲಿ ದಾಖಲಾತಿ, ನಕಲಿ ಅಯ್ಯಮ್ಮ ಎನ್ನುವ ಮಹಿಳೆ ಸೃಷ್ಟಿಸಿ ಬೇರೆಯವರಿಗೆ ಪರಭಾರೆ ಮಾಡಲಾಗಿದೆ. ಕೂಡಲೇ ವಿಲೇಜ್ ಅಕೌಂಟೆಂಟ್, ರೆವಿನ್ಯೂ ಇನ್ಸ್‌ಪೆಕ್ಟರ್, ಸಬ್ ರಿಜಿಸ್ಟ್ರಾರ್ ರನ್ನ ಕೇಳಿದಾಗ ದಾರಿ ತಪ್ಪಿಸಿದ ಅಧಿಕಾರಿಗಳು ಯಾರೊಬ್ಬರೂ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ನೀಡಲು ಹೋದಾಗಲು ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಇದರಿಂದ ಮನನೊಂದ ಅಯ್ಯಮ್ಮ ಮೊನ್ನೆ ಸಿಎಂ ಜನಸ್ಪಂದ ಕಾರ್ಯಕ್ರಮದಲ್ಲಿ ದೂರು ನೀಡಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಆಡಿದ ಮಾತಿನಲ್ಲಿ ತಪ್ಪೇನಿದೆ?: ಶಾಸಕ ಎಚ್.ಸಿ.ಬಾಲಕೃಷ್ಣ
ಸಿಎಂ ಕಚೇರಿಯಿಂದ ದೂರಿನ ಪ್ರತಿ ಬಂದ ಕೂಡಲೇ ಎಚ್ಚತ್ತ ಅಧಿಕಾರಿಗಳು: ಇನ್ನೂ ಜನಸ್ಪಂದನ ಕಾರ್ಯಕ್ರದಲ್ಲಿ ಅಯ್ಯಮ್ಮ ದೂರು ನೀಡಿರುವುದನ್ನು ಬೆಂಗಳೂರಿನಿಂದ ಬಳ್ಳಾರಿಗೆ ವರ್ಗಾವಣೆ ಮಾಡಲಾಗಿದೆ. ಕೂಡಲೇ ಎಚ್ಚತ್ತುಕೊಂಡ ಪೊಲೀಸರು ಅಯ್ಯಮ್ಮ ಅವರನ್ನು ಕರೆಸಿ ದೂರನ್ನು ದಾಖಲಿಸಿ ಕೊಂಡಿದ್ದಾರೆ. ಮಾರಾಟ ಮಾಡಿದವರು ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಿಲ್ಲ. ಅದರೆ ಇದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾಥ್ ನೀಡಿರೋ ಉಪನೋದಣಾಧಿಕಾರಿ ರವಿ ಕುಮಾರ, ಕಂದಾಯ ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ ಮತ್ತು ಗ್ರಾಮ ಲೆಕ್ಕಗ ಶಿವಕುಮಾರ ಸೇರಿದಂತೆ ಒಟ್ಟು 8 ಜನರ ವಿರುದ್ದ ದೂರನ್ನು ದಾಖಲಿಸಿಕೊಂಡಿದ್ದಾರೆ. ತಮ್ಮದೆ ಜಮೀನು. ಇದ್ರೂ ಅದನ್ನು ತಮಗರಿವಿಲ್ಲದೇ ಮತ್ತೊಬ್ಬರು ಮಾರಾಟ ಮಾಡಿದ ಹಿನ್ನೆಲೆ ಇದೀಗ ಅಯ್ಯಮ್ಮ ಪೊಲೀಸ್ ಠಾಣೆ ಅಲೆಯುವ ಹಾಗೇ ಆಗಿರೋದು ಮಾತ್ರ ದುರ್ದೈವದ ಸಂಗತಿಯಾಗಿದೆ.