ಶಿವಮೊಗ್ಗ (ನ.03): ಹಂದಿ ಹೊಡೆಯಲು ಸಂಗ್ರಹಿಸಿದ್ದ ಕಚ್ಚಾ ಬಾಂಬ್‌ ಸ್ಫೋಟಗೊಂಡು 9 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಕುಂಚೇನಹಳ್ಳಿಯಲ್ಲಿ  ನಡೆದಿದೆ.

 ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಇಲ್ಲಿನ ತಮಿಳ್‌ ಕುಮಾರ್‌ ಎಂಬುವರ ಮನೆಯಲ್ಲೇ ಘಟನೆ ನಡೆದಿದೆ.

 ಕಾಡುಹಂದಿ ಬೇಟೆಯಾಡಲು ನಾಡಬಾಂಬ್‌ ಅನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಅದನ್ನು ಬಿಸಲಿಗೆ ಒಣಗಿಸಲು ಹಾಕಿದ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಕೊಟ್ಟೂರು: ಸಿಲಿಂಡರ್ ಸ್ಫೋಟ, ಐವರಿಗೆ ಗಾಯ ...

ಈ ರೀತಿಯ ಘಟನೆಗಳು ವಿವಿಧೆಡೆ ಸಂಭವಿಸುತ್ತಲೇ ಇದ್ದು ಪ್ರಾಣಿಗಳು ಇದರಿಂದ ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ.