ಕೊಟ್ಟೂರು(ಅ.30): ಅಡುಗೆ ಮಾಡುವ ವೇಳೆ ದಿಢೀರನೆ ಸಿಲಿಂಡರ್‌ ಅವಘಡ ಸಂಭವಿಸಿ 5 ಜನರು ಗಾಯಗೊಂಡ ಘಟನೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದ ಮುದುಕನಕಟ್ಟೆ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಪಟ್ಟಣದ ಮುದುಕನಕಟ್ಟೆಯ ಪ್ರದೇಶದ ಮನೆಯೊಂದರಲ್ಲಿ ಈ ಅವಘಡ ಸಂಭವಿಸಿದ್ದು, ದಿಢೀರನೆ ನಡೆದ ಈ ಅವಘಡದ ರಭಸಕ್ಕೆ ಮನೆಯ ಬಾಗಿಲು ಮುರಿದು ಬಿದ್ದಿದೆ. ಅಲ್ಲದೆ ಮನೆಯವರು ಸೇರಿದಂತೆ ಇತರರಿಗೆ ಇದು ತಗುಲಿ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. 

ಬಳ್ಳಾರಿ: ಹೊಲದಲ್ಲಿ ಬೆಳೆದಿದ್ದ 1.75 ಲಕ್ಷ ರು. ಮೌಲ್ಯದ ಗಾಂಜಾ ವಶ

ಲತಾ (34), ಕರಿಬಸಪ್ಪ (35), ದೇವಿರಮ್ಮ (55) ಸಂತೋಷ (29) ಚೈತ್ರ (24) ಇವರಿಗೆ ಗಾಯಗೊಂಡಿದ್ದರೆ ಒಬ್ಬ ಗಾಯಾಳನ್ನು ಹರಪನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್‌ ಎಸ್‌.ಐ. ಎಚ್‌. ನಾಗಪ್ಪ ಮತ್ತು ಅಗ್ನಿ ಶಾಮಕ ದಳದವರು ಭೇಟಿ ನೀಡಿ ಪರಿಶೀಲಿಸಿದರು.