Asianet Suvarna News Asianet Suvarna News

ಚಿಕ್ಕಮಗಳೂರಿಗೆ ಆಗಮಿಸಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥ

ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಗೆ ಕನ್ನಡ ರಥ ಆಗಮಿಸಿತ್ತು. ನಗರಕ್ಕೆ ಆಗಮಿಸಿದ ರಥದ ಮೆರವಣಿಗೆಗೆ ಪುಷ್ಪಾರ್ಪಣೆ ಮೂಲಕ ಗಣ್ಯರು ಚಾಲನೆ ನೀಡಿದರು.  

86th Kannada Sahitya Sammelana chariot arrived at Chikkamagaluru gow
Author
First Published Dec 23, 2022, 8:33 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.23): ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಗೆ ಕನ್ನಡ ರಥ ಆಗಮಿಸಿತ್ತು. ನಗರಕ್ಕೆ ಆಗಮಿಸಿದ ರಥದ ಮೆರವಣಿಗೆಗೆ ಪುಷ್ಪಾರ್ಪಣೆ ಮೂಲಕ ಗಣ್ಯರು ಚಾಲನೆ ನೀಡಿದರು. ನಗರದ ತಾಲೂಕು ಕಚೇರಿಯಿಂದ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಹೊರಟ ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ತಮಟೆವಾದ್ಯ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ವಿದ್ಯಾರ್ಥಿಗಳು, ಶಿಕ್ಷಕರು, ಕವಿಗಳು, ಸಾಹಿತಿಗಳು ಭಾಗವಹಿಸಿ ಮೆರಗು ನೀಡಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ : ಸಿ,ಟಿ ರವಿ
ನಾಡು, ನುಡಿ ಅಭಿಮಾನದಿಂದ ಮಾತ್ರ ನಾವುಗಳು ಒಂದಾಗಿ ಉಳಿಯಲು ಸಾಧ್ಯ ಅಭಿಮಾನ ಕಳೆದುಕೊಂಡಾಗ ನಮ್ಮತನದ ಅಸ್ತಿತ್ವವೂ ಹೋಗಿ ನಾವು ಕೂಡ ಇದ್ದು ಇಲ್ಲದ ಜೀವಂತ ಶವಗಳಂತಾಗಿಬಿಡುತ್ತೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರಕ್ಕೆ ಆಗಮಿಸಿದ ರಥದ ಮೆರವಣಿಗೆಗೆ ಪುಷ್ಪಾರ್ಪಣೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅದು ನಮ್ಮ ಮನ ಮತ್ತು ಮನೆಗಳಲ್ಲಿ ಮತ್ತೆ ಮತ್ತೆ ವಿಜೃಂಭಿಸಲಿ. ಹಾವೇರಿಯಲ್ಲಿ ನಡೆಯುವ ಸಮ್ಮೇಳನ ಅನುಕೂಲವಾಗಿರುವ ಸಂದರ್ಭದ ಸಾಕ್ಷಿಯಾಗಿ ಇಂದಿನ ಕಾಲಘಟ್ಟದಲ್ಲಿ ಕನ್ನಡವನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದಕ್ಕೆ ಚಿಂತನ ಮಂತನದ ಮೂಲಕ ತಾಯಿ ಭಾರತೀಯ ಮಗಳಾಗಿರುವ ಕನ್ನಡತಾಯಿ ಭುವನೇಶ್ವರಿ ಭುವನದ ಉದ್ದಗಲಕ್ಕೆ ತನ್ನ ಪ್ರಭಾವ ಪಸರಿಸುವಂತೆ ಆ ಕನ್ನಡ ಸಾಹಿತ್ಯ ಜಾತ್ರೆ ಯಶಸ್ವಿಯಾಗಲಿ ಎಂದರು.

ಬೆಟಗೇರಿಯಲ್ಲಿ ಜನವರಿ 28 ರಂದು ಮಡಿಕೇರಿ ತಾಲೂಕು ಕಸಾಪ ಸಮ್ಮೇಳನ

ಜಿಲ್ಲೆಯಲ್ಲಿ ಮುಂದಿನ ಸಮ್ಮೇಳನಕ್ಕೆ ಬೇಡಿಕೆ 
ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ಮಾತನಾಡಿ, ಚಿಕ್ಕಮಗಳೂರು ಗಡಿ ಭಾಗ ಹಲ್ಮಿಡಿಯಲ್ಲಿ ಸಾಹಿತ್ಯ ರಥವನ್ನು ಸ್ವಾಗತಿಸಿದ್ದು ನಗರದಲ್ಲಿ ಮೆರವಣಿಗೆ ನಂತರ ಸಖರಾಯಪಟ್ಟಣ, ಕಡೂರು, ಬೀರೂರು, ತರೀಕೆರೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸಂಜೆ ಭದ್ರಾವತಿಯಲ್ಲಿ ಬೀಳ್ಕೊಡಲಾಗುತ್ತದೆ. ಭುವನೇಶ್ವರಿ ತಾಯಿ ಕಾಫಿನಾಡು ಸೇರಿದಂತೆ ರಾಜ್ಯದ ಜನಕ್ಕೆ ಶಾಂತಿ ನೆಮ್ಮದಿ ಕರುಣಿಸಲಿ. ಜಿಲ್ಲೆಯ ಇತಿಹಾಸ ಅವಲೋಕಿಸಿದರೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು 42 ವರ್ಷಗಳಾಗಿವೆ. ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು ಸಾತ್ ನೀಡುವ ಮೂಲಕ ಮುಂದಿನ ಸಮ್ಮೇಳನಕ್ಕೆ ಅವಕಾಶ ಕಲ್ಪಿಸಿ ಕನ್ನಡಮ್ಮನ ಸೇವೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.

ಹಾವೇರಿ: ಸಾಹಿತ್ಯ ಸಮ್ಮೇಳನಕ್ಕೆ ಮತ್ತೆ ಕೊರೋನಾ ಕಾರ್ಮೋಡ

ರಥದ ಮುಂದೆ ಕನ್ನಡ ಪೂಜಾರಿ ಡ್ಯಾನ್ಸ್ 
ನಗರದ ತಾಲೂಕು ಕಚೇರಿಯಿಂದ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಹೊರಟ ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ತಮಟೆವಾದ್ಯ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ವಿದ್ಯಾರ್ಥಿಗಳು, ಶಿಕ್ಷಕರು, ಕವಿಗಳು, ಸಾಹಿತಿಗಳು ಭಾಗವಹಿಸಿದರು., ಇದೇ ವೇಳೆಯಲ್ಲಿ ಕನ್ನಡ ರಥದ ಮುಂದೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್  ಡ್ಯಾನ್ಸ್ ಮಾಡುವ ಮೂಲಕ ಜನರ ಗಮನ ಸೆಳೆದರು.ಚಂಡೆ ವಾದ್ಯಕ್ಕೆ ಕನ್ನಡ ಪೂಜಾರಿ ನೃತ್ಯ ಮಾಡಿದ್ದರು, ಅವರೊಂದಿಗೆ ಸಾಹಿತಿಗಳು ಅಧಿಕಾರಿಗಳು ಕೂಡ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

Follow Us:
Download App:
  • android
  • ios