Asianet Suvarna News Asianet Suvarna News

Corona Crisis: ಸತತ 2ನೇ ದಿನ ಶೇ.2ಕ್ಕಿಂತ ಅಧಿಕ ಕೊರೋನಾ ಪಾಸಿಟಿವಿಟಿ ದರ

ರಾಜಧಾನಿಯಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಸತತ ಎರಡನೇ ದಿನ 90ರ ಆಸುಪಾಸಿನಲ್ಲಿ ಮುಂದುವರೆದಿದ್ದು, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಕೂಡಾ ಶೇ.2ಕ್ಕಿಂತ ಹೆಚ್ಚಿದೆ. 

85 new coronavirus cases on april 22nd in bengaluru gvd
Author
Bangalore, First Published Apr 23, 2022, 3:15 AM IST

ಬೆಂಗಳೂರು (ಏ.23): ರಾಜಧಾನಿಯಲ್ಲಿ (Bengaluru) ಕೊರೋನಾ ಸೋಂಕು (Corona Cases) ಹೊಸ ಪ್ರಕರಣಗಳು ಸತತ ಎರಡನೇ ದಿನ 90ರ ಆಸುಪಾಸಿನಲ್ಲಿ ಮುಂದುವರೆದಿದ್ದು, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ (Positivity Rate) ಕೂಡಾ ಶೇ.2ಕ್ಕಿಂತ ಹೆಚ್ಚಿದೆ. ನಗರದಲ್ಲಿ ಶುಕ್ರವಾರ 85 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 39 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1,520 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 3667 ನಡೆದಿದ್ದು, ಪಾಸಿಟಿವಿಟಿ ದರ ಶೇ.2.3 ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು ಆರು ಇಳಿಕೆಯಾಗಿವೆ. (ಗುರುವಾರ 91 ಕೇಸ್‌, ಸಾವು ಶೂನ್ಯ).

ಸದ್ಯ ಸಕ್ರಿಯ ಸೋಂಕಿತರ ಪೈಕಿ 8 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ವೆಂಟಿಲೇಟರ್‌ ಒಬ್ಬರು, ಆಕ್ಸಿಜನ್‌ ಹಾಸಿಗೆಯಲ್ಲಿ ಇಬ್ಬರು, ಸಾಮಾನ್ಯ ಹಾಸಿಗೆಗಳಲ್ಲಿ ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 1,512 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು ಹೆಚ್ಚಳವಾಗದಿದ್ದರೂ ಸತತ ಎರಡನೇ ದಿನ ಸೋಂಕು ಪ್ರಕರಣಗಳು 90 ಆಸುಪಾಸಿನಲ್ಲಿವೆ. ಪಾಸಿಟಿವಿಟಿ ದರವು ಶೇ.2ರಷ್ಟಿದ್ದು, ಆತಂಕ ಮೂಡಿಸಿದೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.6 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,964 ಇದೆ ಎಂದು ಬಿಬಿಎಂಪಿ (BBMP) ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

Covid cases ದೆಹಲಿ, ಪಂಜಾಬ್ ಬಳಿಕ ಮತ್ತೊಂದು ರಾಜ್ಯದಲ್ಲಿ ಕೊರೋನಾ ನಿರ್ಬಂಧ ಜಾರಿ!

ಒಂದೊಂದೇ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ಜೋಪಾನ: ಭಾರತದಲ್ಲಿ ಮತ್ತೆ ಕೊರೋನಾ ಆರ್ಭಟ ಶುರುವಾಗಿದೆ. ಚೀನಾ, ಯೂರೋಪ್ ಸೇರಿದಂತೆ ವಿದೇಶಗಳಲ್ಲಿ ಹೊಸ ತಳಿಗಳ ಆತಂಕ ಹೆಚ್ಚಾಗುತ್ತಿದ್ದಂತೆ ಭಾರತದಲ್ಲೂ ಇದೀಗ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಪರಿಣಾಮ ಒಂದೊಂದೆ ರಾಜ್ಯಗಳಲ್ಲಿ ಕಠಿಣ ನಿರ್ಬಂಧಗಳು ಜಾರಿಯಾಗುತ್ತಿದೆ. ಇದೀಗ ದೆಹಲಿ ಬಳಿಕ ಪಂಜಾಬ್‌ನಲ್ಲೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೊರೋನಾ ಇಳಿಕೆಯಾಗಿ ಸಹಜಸ್ಥಿತಿಗೆ ಮರಳಿದ ಕಾರಣ ಪಂಜಾಬ್ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಕೊರೋನಾ ನಿರ್ಬಂಧ ಸಡಿಲಗೊಳಿಸಲಾಗಿತ್ತು. 

ಇದೀಗ  ಮತ್ತೆ ನಿರ್ಬಂಧಗಳು ಜಾರಿಯಾಗುತ್ತಿದೆ. ಪಂಜಾಬ್‌ನಲ್ಲಿ ಸಿನಿಮಾ ಹಾಲ್, ಸಾರ್ವಜನಿಕ ಸಾರಿಗೆ, ಶಾಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಶಾಲಾ ತರಗತಿ, ಕಚೇರಿ, ಒಳಾಂಗಣ ಸಭೆ, ಸಮಾರಂಭ, ಸಾರ್ವಜನಿಕ ಸಭೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಮಾಸ್ಕ್ ಕಡ್ಡಾಯ ಎಂದು ಆಮ್ ಆದ್ಮಿ ಸರ್ಕಾರ ಆದೇಶಿಸಿದೆ. ಪಂಜಾಬ್‌ನಲ್ಲೂ ಕೊರೋನಾ ಪ್ರಕರಣ ಗಣನೀಯ ಏರಿಕೆ ಕಂಡಿದೆ. 4ನೇ ಅಲೆ ಭೀತಿಯೂ ಎದುರಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ದೆಹಲಿಯಲ್ಲಿ ಕೊರೋನಾ ಪ್ರಕರಣ ದುಪ್ಪಟ್ಟಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದೆಹಲಿ ಸರ್ಕಾರ ಮಾಸ್ಕ್ ಕಡ್ಡಾಯ ಎಂದು ಘೋಷಿಸಿದೆ. ಈ ಮೂಲಕ ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇನ್ನು ಹರ್ಯಾಣದಲ್ಲೂ ಕೊರೋನಾ ಹೆಚ್ಚಾಗಿರುವ ಕಾರಣ ಗುರುಗ್ರಾಂ, ಫರೀದಾಬಾದ್, ಸೋನಿಪತ್ ಹಾಗೂ ಝಾಜರ್ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ರಾಜ್ಯದಲ್ಲಿ ಮತ್ತೆ ಕೊರೋನಾ ಧಿಡೀರ್‌ ಹೆಚ್ಚಳ: ದೇಶದಲ್ಲಿ ಸೋಂಕು, ಸಾವು ಎರಡೂ ಏರಿಕೆ

ದಿಲ್ಲಿಗೆ 4ನೇ ಅಲೆ ಆತಂಕ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಬುಧವಾರ 1009 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಕೋವಿಡ್‌ ಪಾಸಿಟಿವಿಟಿ ದರ ಶೇ.5.7ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಏ.11- 18ರ ಅವಧಿಗಿಂತ ಮೂರು ಪಟ್ಟು ಅಧಿಕವಾಗಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 2641ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಭಾನುವಾರ 517, ಸೋಮವಾರ 501, ಮಂಗಳವಾರ 632 ಕೊರೋನಾ ಕೇಸ್‌ ಪತ್ತೆಯಾಗಿದ್ದವು. ಆದರೆ ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ದೈನಂದಿನ ಕೋವಿಡ್‌ ಕೇಸುಗಳ ಪ್ರಮಾಣ ಏಕಾಏಕಿ ಶೇ.60ರಷ್ಟು ಏರಿಕೆಯಾಗಿದೆ.

Follow Us:
Download App:
  • android
  • ios