Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ ಕೊರೋನಾ ಧಿಡೀರ್‌ ಹೆಚ್ಚಳ: ದೇಶದಲ್ಲಿ ಸೋಂಕು, ಸಾವು ಎರಡೂ ಏರಿಕೆ

* ರಾಜ್ಯದಲ್ಲಿ ಪರೀಕ್ಷೆ ಹೆಚ್ಚಿಸದಿದ್ದರೂ ಹೊಸ ಪ್ರಕರಣ ಏರಿಕೆ

* ಬೆಂಗಳೂರಿನಲ್ಲಿಯೇ ಧಿಡೀರ್‌ ಹೆಚ್ಚಳ

* ದೇಶದಲ್ಲೂ ಸೋಂಕು, ಸಾವು ಎರಡೂ ಏರಿಕೆ

* 2,380 ಹೊಸ ಕೇಸ್‌, 56 ಸಾವು

Karnataka reports 100 new cases in last 24 hours pod
Author
Bangalore, First Published Apr 22, 2022, 9:46 AM IST

ಬೆಂಗಳೂರು(ಏ.22): ಹೆಚ್ಚು ಕಡಿಮೆ ಒಂದು ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಮೂರಂಕಿಗೆ (100ಕ್ಕೆ) ಹೆಚ್ಚಳವಾಗಿವೆ.

ಗುರುವಾರ 100 ಮಂದಿಗೆ ಸೋಂಕು ತಗುಲಿದ್ದು, 49 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ಸತತ 13 ದಿನದಿಂದ ವರದಿಯಾಗಿಲ್ಲ. ಸದ್ಯ 1,550 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 9714 ನಡೆದಿದ್ದು, ಪಾಸಿಟಿವಿಟಿ ದರ ಶೇ.1.02 ದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಹೆಚ್ಚಿನ ವ್ಯತ್ಯಯವಾಗಿಲ್ಲ, ಆದರೂ ಹೊಸ ಪ್ರಕರಣಗಳು 39 ಏರಿಕೆಯಾಗಿದೆ. (ಬುಧವಾರ 61 ಪ್ರಕರಣ, ಸಾವು ಶೂನ್ಯ)

ಈ ಹಿಂದೆ ಮಾಚ್‌ರ್‍ 24 ರಂದು 109 ಹೊಸ ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಇಳಿಕೆಯಾಗುತ್ತಾ ಸಾಗಿ 29ಕ್ಕೆ ತಲುಪಿದ್ದವು. ಕಳೆದ ಒಂದು ವಾರದಿಂದ ಬೆರಳಣಿಕೆಯಷ್ಟುಹೆಚ್ಚಳವಾಗುತ್ತಿದ್ದು, ಗುರುವಾರ ಒಮ್ಮೆಗೆ 39 ಏರಿಕೆಯಾಗಿ ಅಂದಾಜು ಒಂದು ತಿಂಗಳ ಬಳಿಕೆ 100ಕ್ಕೆ ತಲುಪಿದೆ. ಸೋಂಕು ಪರೀಕ್ಷೆಗಳು ಹೆಚ್ಚಳವಾಗದಿದ್ದರೂ, ಹೊಸ ಪ್ರಕರಣಗಳು ಹೆಚ್ಚಳವಾಗಿರುವುದು ಒಂದಿಷ್ಟುಆತಂಕ ಮೂಡಿಸಿದೆ. ಕಳೆದ 13 ದಿನಗಳಿಂದ ಕೊರೋನಾ ಸೋಂಕಿತರ ಸಾವು ದಾಖಲಾಗಿಲ್ಲ.

24 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಬೆಂಗಳೂರು 91, ಚಿತ್ರದುರ್ಗ, ಕೋಲಾರ, ಮೈಸೂರು, ಶಿವಮೊಗ್ಗ ತಲಾ ಒಬ್ಬರಿಗೆ ವಿಜಯಪುರದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿಯೇ ಪ್ರಕರಣಗಳು 36 ಏರಿಕೆಯಾಗಿದ್ದು, ಹೀಗಾಗಿಯೇ ಹೊಸ ಪ್ರಕರಣಗಳು 100ಕ್ಕೆ ತಲುಪಿವೆ. ಇನ್ನು ಒಟ್ಟಾರೆ ರಾಜ್ಯದಲ್ಲಿ ಈವರೆಗೆ ಒಟ್ಟಾರೆ 39.46 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.04 ಲಕ್ಷ ಮಂದಿ ಗುಣಮುಖರಾಗಿದ್ದು, 40,057 ಮಂದಿ ಸಾವಿಗೀಡಾಗಿದ್ದಾರೆ.

ದೇಶದಲ್ಲಿ ಸೋಂಕು, ಸಾವು ಎರಡೂ ಏರಿಕೆ

ಭಾರತದಲ್ಲಿ ದೈನಂದಿನ ಸೋಂಕು ಮತ್ತು ಸಾವು ಎರಡೂ ಏರುಮುಖವಾಗಿದ್ದು, ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 2,380 ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ 56 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.30 ಕೋಟಿಗೆ ಏರಿಕೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 5,22,062ಕ್ಕೆ ತಲುಪಿದೆ.

ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 13,433ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.76ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.0.53 ಮತ್ತು ವಾರದ ಪಾಸಿಟಿವಿಟಿ ದರ ಶೇ.0.43ರಷ್ಟಿದೆ. ಒಟ್ಟು ಸೋಂಕಿತರ ಪೈಕಿ 4.25 ಕೋಟಿ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ನಡುವೆ 187.07 ಕೋಟಿ ಡೋಸ್‌ ಕೊರೋನಾ ಲಸಿಕೆ ವಿತರಣೆ ಮಾಡಲಾಗಿದೆ.

Follow Us:
Download App:
  • android
  • ios