ಸರ್ಕಾರಕ್ಕೆ ಸೇರಿದ ಬ್ಯಾಂಕ್ ಹಣವನ್ನು ಕಾಪಾಡುವ ವೇಳೆ ಬಲಿಯಾದ ಗಿರಿ ಕುಟುಂಬಕ್ಕೆ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ದೊರಕಬೇಕಾದ ಎಲ್ಲ ಸಹಾಯ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದು: ಸಚಿವ ಈಶ್ವರ ಖಂಡ್ರೆ
ಬೀದರ್(ಜ.18): ನಗರದಲ್ಲಿ ಗುರುವಾರ ಬೆಳಗ್ಗೆ ಎಸ್‌ಬಿಐ ಬಳಿ ಗುಂಡಿನ ದಾಳಿ ನಡೆಸಿ ಎಟಿಎಂಗಳಿಗೆ ಸಾಗಿಸಬೇಕಿದ್ದ ವಾಹನದಿಂದ 93 ಲಕ್ಷ ರು.ದೋಚಿ ಪರಾರಿಯಾದ ದುಷ್ಕರ್ಮಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಜೊತೆ ಶುಕ್ರವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಚಿವರು, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರಿ ಶೇಖರನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದು, ತನಿಖೆಯನ್ನು ತ್ವರಿತಗೊಳಿ ಸುವಂತೆ ಸೂಚನೆ ನೀಡಿದರು.
ಬೀದರ್‌ನಲ್ಲಿ ಎಟಿಎಂ ಸಿಬ್ಬಂದಿ ಮೇಲೆ ದಾಳಿ, ಲಕ್ಷ ಲಕ್ಷ ರೂಪಾಯಿ ದರೋಡೆ: ಇಬ್ಬರು ಸಾವು
ಬಳಿಕ, ಲೂಟಿಕೋರರ ಗುಂಡೇಟಿಗೆ ಬಲಿಯಾದ ಬೆಮಳಖೇಡ ಗ್ರಾಮದ ಗಿರಿ ವೆಂಕಟೇಶ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿ, ಸರ್ಕಾರಕ್ಕೆ ಸೇರಿದ ಬ್ಯಾಂಕ್ ಹಣವನ್ನು ಕಾಪಾಡುವ ವೇಳೆ ಬಲಿಯಾದ ಗಿರಿ ಕುಟುಂಬಕ್ಕೆ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ದೊರಕಬೇಕಾದ ಎಲ್ಲ ಸಹಾಯ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯಿಂದ 8 ಲಕ್ಷ ರು.ಪರಿಹಾರ ಹಾಗೂ ಅವರ ತಾಯಿಗೆ 5 ಸಾವಿರ ಮಾಸಾಶನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸಮಾಜ ಕಲ್ಯಾಣ ಇಲಾಖೆಯಡಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಲಾಗುವುದು ಎಂದರು.
ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ ಕುಟುಂಬಕ್ಕೆ ಹೆಚ್ಚುವರಿಯಾಗಿ 10 ಲಕ್ಷ ರು.ಗಳನ್ನು ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ಹೈದ್ರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಅವರ ಚಿಕಿತ್ಸೆ ವೆಚ್ಚ ಭರಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಟಿಎಂ ಏಜೆನ್ಸಿ ಜಾಗೃತೆ ವಹಿಸದ ಕಾರಣ ಈ ಘಟನೆ ಆಗಿದೆ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಬೀದರ್‌ನಲ್ಲಿ ಹಾಡಹಗಲೇ ಎಸ್‌ಬಿಐ ಬ್ಯಾಂಕ್‌ನ ಎದುರುಗಡೆ ಎಟಿಎಂಗೆ ಹಣ ತುಂಬುವ ಸಿಎಂಎಸ್ ಏಜೆನ್ಸಿಯ ವಾಹನದ ಮೇಲೆ ದಾಳಿ ನಡೆಸಿ ಓರ್ವನ ಹತ್ಯೆಯಾಗಿದೆ. ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ದುಷ್ಕರ್ಮಿಗಳು ಕೈಯಲ್ಲಿ ಗನ್ ಹಿಡಿದುಕೊಂಡು ದಾಳಿ ಮಾಡಿರುವ ಸಿಸಿಟಿವಿ ವಿಡಿಯೋ ಹಾಗೂ ಪ್ರತ್ಯಕ್ಷದರ್ಶಿಗಳ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಎಟಿಎಂ ಏಜೆನ್ಸಿಗಳು ಜಾಗೃತೆ ವಹಿಸದ ಕಾರಣ ಈ ರೀತಿಯ ಘಟನೆ ನಡೆಯುತ್ತದೆ ಎಂದು ಹೇಳಿದ್ದಾರೆ. ಇಂತಹ ಘಟನೆ ಆದಾಗ ಸಮಾಜಕ್ಕೆ ಕೆಟ್ಟ ಮೆಸೇಜ್ ಹೋಗುತ್ತದೆ. ಎಟಿಎಂ ಏಜೆನ್ಸಿ ಅವರೂ ಕೂಡ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದರು.
ಬೀದರ್ ಘಟನೆಯ ಕುರಿತು ಇನ್ನಷ್ಟು ಮಾಹಿತಿ ಪಡೆಯಬೇಕಿದೆ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಘಟನೆಯ ಬಗ್ಗೆ ನಾನಿನ್ನೂ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಘಟನೆ ನಡೆದು ಗಂಟೆಗಳಾದ್ರೂ ರಾಜ್ಯದ ಗೃಹ ಸಚಿವರಿಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಿಗೆ ಬಂದಿದೆ.
ಸರ್ಕಾರದ ಭಯವಿಲ್ಲ, ಪೊಲೀಸರ ಕ್ಯಾರೇ ಇಲ್ಲ; ರಾಜಾರೋಷವಾಗಿ ಕೊಲೆ ಮಾಡಿ 93 ಲಕ್ಷ ATM
ಎಟಿಎಂಗಳಿಗೆ ಅನೇಕ ಗೈಡ್‌ಲೈನ್ಸ್ ಕೊಟ್ಟಿರುತ್ತೇವೆ. ಅದನ್ನು ಫಾಲೋ ಮಾಡಿಲ್ವಾ? ಲ್ಯಾಪ್ಸ್ ಆಗಿದ್ಯಾ ಅನ್ನೋ ಮಾಹಿತಿ ತೆಗೆದುಕೊಳ್ಳಬೇಕಿದೆ. ಎಸ್‌ಪಿಗೆ ತನಿಖೆ ಮಾಡಲು ಹೇಳಿದ್ದೇನೆ. ಪೂರ್ತಿ ಮಾಹಿತಿ ತೆಗೆದುಕೊಂಡು ಇದರ ಬಗ್ಗೆ ಮಾತನಾಡುತ್ತೇನೆ ಎಂದು ಗೃಹ ಸಚಿವರು ಹೇಳಿದ್ದರು.
ಬೀದರ್ ನಲ್ಲಿ ಹಾಡಹಗಲೇ ಕೊಲೆ, ದರೋಡೆ ಪ್ರಕರಣದಲ್ಲಿ ಮೃತಪಟ್ಟ ಗಿರಿ ವೆಂಕಟೇಶ್ ಮನೆಗೆ ನಾಳೆ ಉಸ್ತುವಾರಿ ಸಚಿವರು ಭೇಟಿ ನೀಡಲಿದ್ದಾರೆ. ನಾಳೆ ಗಿರಿ ವೆಂಕಟೇಶ್ ಮನೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಚಿವ ಈಶ್ವರ್ ಖಂಡ್ರೆ ಸಾಂತ್ವನ ಹೇಳಲಿದ್ದಾರೆ. ಘಟನೆ ಬಗ್ಗೆ ಅಘಾತವ್ಯಕ್ತಪಡಿರುವ ಈಶ್ವರ್ ಖಂಡ್ರೆ, ಕೂಡಲೇ ಆರೋಪಿಗಳ ಬಂಧಿಸಲು ತುರ್ತು ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಭಧ್ರತಾ ಸಿಬ್ಬಂದಿ ನಿಯೋಜಸಬೇಕಿತ್ತು, ಲೋಪದೋಷಗಳ ಕುರಿತು ತನಿಖೆ ನಡೆಸಲಾಗುವುದು. ಮೃತ ಕುಟುಂಬಸ್ಥರ ಜೊತೆ ಸರ್ಕಾರ ಇದೆ ಎಂದು ಭರವಸೆ ನೀಡಿದ್ದರು.
