ಬೆಳಗಾವಿ, ಹುಬ್ಬಳ್ಳಿ, ಬೀದರ್‌ನಲ್ಲಿ ಸಂಭ್ರಮದ 74 ನೇ ಗಣರಾಜ್ಯೋತ್ಸವ ಆಚರಣೆ

74 ನೇ ಧ್ವಜಾರೋಹಣ ನೆರವೇರಿಸಿ ಬೆಳಗಾವಿಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕಳಸಾ-ಬಂಡೂರಿ ನಾಲಾ ಯೋಜನೆಯ ವಿಸ್ಕೃತ ವರದಿಗೆ ಕೇಂದ್ರದ‌ ಅನುಮೋದನೆ ಸಿಕ್ಕಿದೆ. ಅತೀ ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲು ಸರ್ಕಾರದ ಉದ್ದೇಶಿಸಿದೆ ಎಂದರು.

74th Republic Day celebration in Belagavi Hubballi and Bidar gow

ಬೆಳಗಾವಿ (ಜ.26): 74 ನೇ ಧ್ವಜಾರೋಹಣ ನೆರವೇರಿಸಿ ಬೆಳಗಾವಿಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕಳಸಾ-ಬಂಡೂರಿ ನಾಲಾ ಯೋಜನೆಯ ವಿಸ್ಕೃತ ವರದಿಗೆ ಕೇಂದ್ರದ‌ ಅನುಮೋದನೆ ಸಿಕ್ಕಿದೆ. ಅತೀ ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲು ಸರ್ಕಾರದ ಉದ್ದೇಶಿಸಿದೆ. ಕೋವಿಡ್, ಪ್ರವಾಹ, ಆರ್ಥಿಕ ಹಿಂಜರಿತ ಮಧ್ಯೆಯೇ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು. ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ, ದೇಶಕ್ಕೆ ಮಾದರಿಯಾಗಿ ಪರಿಹಾರ. ನವೋದ್ಯಮಗಳ ಸ್ಥಾಪನೆ, ಕೈಗಾರಿಕಾ ಸೌಲಭ್ಯಗಳ ವಿಸ್ತರಣೆ, ಬಂಡವಾಳ ಹೂಡಿಕೆಗೆ ಅನುಕೂಲಕರ ವಾತಾವರಣ. ಜಿಎಸ್‌ಟಿ ಸಂಗ್ರಹದಲ್ಲೂ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು.

ಕರ್ನಾಟಕ ರಾಜ್ಯ ಚಳಿಗಾಲ ಅಧಿವೇಶನ ವೇಳೆ ಉತ್ತರ ‌ಕರ್ನಾಟಕ ಭಾಗದ 13 ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ನಮ್ಮ ಕ್ಲಿನಿಕ್ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ 21 ಕ್ಲಿನಿಕ್ ಮಂಜೂರು, 6 ಕ್ಲಿನಿಕ್‌ಗೆ ಚಾಲನೆ ನೀಡಿದೆ ಎಂದು ಹೇಳಿದರು.

 

ಬೀದರ್ ನಲ್ಲಿ 74 ನೇ ಗಣರಾಜ್ಯೋತ್ಸವ ಆಚರಣೆ 
74 ನೇ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಬೀದರ್ ನಗರದ ನೇಹರು ಕ್ರಿಡಾಂಗಣದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ  ಧ್ವಜಾರೋಹಣ ನೇರವೇರಿಸಿದರು. ಜಿಲ್ಲಾಧಿಕಾರಿಗಳಿಗೆ ವಿವಿಧ ಶಾಲಾ ಮಕ್ಕಳು ಹಾಗೂ ವಿವಿಧ ತುಕಡಿಗಳಿಂದ ಗೌರವ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿದರು.

Republic Day 2023: ಕೋಮು ಶಕ್ತಿಗಳ ಅಡಗಿಸಲು ನಾವೆಲ್ಲಾ ಒಟ್ಟಾಗಿ ಹೋರಾಡಬೇಕು: ಡಿಕೆಶಿ

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರ  ರಘುನಾಥ್ ಮಲ್ಕಾಪುರೆ, ಶಾಸಕ ರಹಿಂಖಾನ. ಬಂಡೆಪ್ಪಾ ಖಾಶೆಂಪುರ, ಬುಡಾ ಅಧ್ಯಕ್ಷ ಬಾಬು ವಾಲಿ, ಕೆಎಸ್ಐಐಡಿ ರಾಜ್ಯ ಅದ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಹಲವರು ಭಾಗಿಯಾಗಿದ್ದರು.

RAICHUR: ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿ ಸಾವು: ಹೃದಯಾಘಾತಕ್ಕೆ ಬಲಿ

ಹುಬ್ಬಳ್ಳಿಯಲ್ಲಿ 74 ನೇ ಗಣರಾಜ್ಯೋತ್ಸವ ಆಚರಣೆ : 74 ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಹುಬ್ಬಳ್ಳಿ ತಾಲೂಕು ತಹಶೀಲ್ದಾರ ಶಶಿಧರ್ ಮಾಡ್ಯಾಳ್. ಧ್ವಜಾರೋಹಣ ನೆರವೇರಿಸುವ ಮೂಲಕ ಗೌರವ ಸಲ್ಲಿಸಿದ ಅಧಿಕಾರಿಗಳು ಹಾಗೂ ಗಣ್ಯರು. ಧ್ವಜಾರೋಹಣ ನಂತರ ಪೊಲೀಸರು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಫಥಸಂಚಲನ. ವಿಶೇಷ ಪಥಸಂಚಲನದ ಮೂಲಕ ಗಮನ ಸೆಳೆದ ಪೊಲೀಸ್ ಪಡೆ ಹಾಗೂ ವಿದ್ಯಾರ್ಥಿಗಳು.

 

Latest Videos
Follow Us:
Download App:
  • android
  • ios