7 ತಿಂಗಳ ಗರ್ಭಿಣಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಂಗಳೂರು (ಏ.28): ದೇರಳಕಟ್ಟೆಕಣಚೂರು ಆಸ್ಪತ್ರೆಯಲ್ಲಿ ಸುಮಾರು 2 ವರ್ಷ ಕೆಲಸ ಮಾಡಿದ್ದ, ಪ್ರಸ್ತುತ 7 ತಿಂಗಳ ಗರ್ಭಿಣಿಯಾಗಿದ್ದ ವೈದ್ಯೆಯೊಬ್ಬರು ಸೋಮವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಬಲಿಯಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೇರಳದ ಮಲಪ್ಪುರಂ ಮೂಲದ ಈ ವೈದ್ಯೆ ಎಂಬಿಬಿಎಸ್ ಬಳಿಕ ಕಣಚೂರು ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಊರಾದ ಕೇರಳದ ಮಲಪ್ಪುರಂಗೆ ಹೋಗಿದ್ದರು.
ನಿಲ್ಲದ ಕೊರೋನಾ ಕಾಟ: ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಬೇಕಾ? ಇವರನ್ನು ಸಂಪರ್ಕಿಸಿ ..
ಅಲ್ಲಿ ಅವರ ಕುಟುಂಬದವರಿಗೆ ಕೋವಿಡ್ ಸೋಂಕು ತಗಲಿದ್ದು, ನಂತರ ಇವರಿಗೂ ಪಾಸಿಟಿವ್ ಆಗಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ 10 ದಿನಗಳ ಹಿಂದಷ್ಟೇ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಆಕ್ಸಿಜನ್ ಮಟ್ಟದಲ್ಲಿ ಏರುಪೇರು ಉಂಟಾಗಿದ್ದು ಅವರು ಮೃತಪಟ್ಟಿದ್ದಾರೆ.
