Asianet Suvarna News Asianet Suvarna News

Karnataka Council Election : ಶ್ರೀನಿವಾಸ ಪೂಜಾರಿಯ 4 ಸೇರಿ 7 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

  • ಕರ್ನಾಟಕ ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಒಟ್ಟು 8 ಮಂದಿ ಅಭ್ಯರ್ಥಿಗಳು 14 ನಾಮಪತ್ರ 
  • 13 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಒಬ್ಬರು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ
7 candidates contest From Dakshina kannada MLC Election  snr
Author
Bengaluru, First Published Nov 25, 2021, 9:37 AM IST

 ಮಂಗಳೂರು (ನ.25):  ಕರ್ನಾಟಕ ವಿಧಾನ ಪರಿಷತ್‌ಗೆ (Karnataka MLC Election) ದಕ್ಷಿಣ ಕನ್ನಡ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಒಟ್ಟು 8 ಮಂದಿ ಅಭ್ಯರ್ಥಿಗಳು 14 ನಾಮಪತ್ರ ಸಲ್ಲಿಸಿದ್ದರು. ಅವುಗಳ ಪರಿಶೀಲನೆ ಕಾರ್ಯ ಬುಧವಾರ ನಗರದ ಜಿಲ್ಲಾಧಿಕಾರಿ (DC) ಕಚೇರಿ ಸಭಾಂಗಣದಲ್ಲಿ ನಡೆಯಿತು. ಅವುಗಳಲ್ಲಿ 13 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಒಬ್ಬರು ಪಕ್ಷೇತರ ಅಭ್ಯರ್ಥಿಯ ನಾಮಪತ್ರ (Nomination)  ತಿರಸ್ಕೃತಗೊಂಡಿದೆ.  ಸಲ್ಲಿಕೆಯಾಗಿದ್ದ ಒಟ್ಟು 14 ನಾಮಪತ್ರಗಳಲ್ಲಿ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಡಿಸೆಂಬರ್ 10 ರಂದು ನಡೆಯುವ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು  ಚುನಾವಣಾ ತಯಾರಿ ನಡೆದಿದೆ. 

 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (Congress) ಪಕ್ಷದ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ (Majunath bandary) 3 ನಾಮಪತ್ರ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ (Koata Shrinivas Piijary) 4 ನಾಮಪತ್ರ, ಸೋಶಿಯಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಅಭ್ಯರ್ಥಿ ಇಸ್ಮಾಯಿಲ್‌ ಶಾಫಿ ಕೆ. ಒಂದು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೌಶಿಕ್‌ ಡಿ. ಶೆಟ್ಟಿಎರಡು ನಾಮಪತ್ರ, ಪಕ್ಷೇತರ ಅಭ್ಯರ್ಥಿ ನವೀನ್‌ ಕುಮಾರ್‌ ರೈ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ನಿತಿನ್‌ ಕುಮಾರ್‌ ಹಾಗೂ ಪಕ್ಷೇತರ ಅಭ್ಯರ್ಥಿ ಶಶಿಧರ್‌ ಎಂ. ಅವರು ಸಲ್ಲಿಸಿದ್ದ ಒಂದು ನಾಮಪತ್ರ ಕ್ರಮಬದ್ಧವಾಗಿದ್ದು, ಸ್ವೀಕೃತಗೊಂಡಿವೆ.

ಪಕ್ಷೇತರ ಅಭ್ಯರ್ಥಿ ಸುಪ್ರಿತ್‌ ಕುಮಾರ್‌ ಪೂಜಾರಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರಗಳನ್ನು ಹಿಂಪಡೆಯಲುನ.26ರ ವರೆಗೆ ಅವಕಾಶ ನೀಡಲಾಗಿದೆ. ಅಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ವಾಪಸ್‌ ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧೆ ಮಾಡಲಿರುವ ಬಿಜೆಪಿಎ ಅಭ್ಯರ್ಥಿಗಳ ಪಟ್ಟಿ : 

 ರಾಜ್ಯ ವಿಧಾನ ಪರಿಷತ್‌ನ (Legislative Council)25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ (BJP)ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.  ಹಲವಾರು ನಿರೀಕ್ಷೆಗಳು ತಲೆಕೆಳಗಾಗಿವೆ. ಬಿಜೆಪಿ ಮೊದಲ ಹಂತದಲ್ಲಿ  20 ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.

ಅಭ್ಯರ್ಥಿಗಳ ಪಟ್ಟಿ ಹೀಗಿದೆ;
* ಕೊಡುಗು- ಸುಜಾ ಕುಶಾಲಪ್ಪ
* ದಕ್ಷಿಣ ಕನ್ನಡ- ಕೋಟಾ ಶ್ರೀನಿವಾಸ ಪೂಜಾರಿ
* ಚಿಕ್ಕಮಗಳೂರು- ಎಂ.ಕೆ. ಪ್ರಾಣೇಶ್ 
* ಶಿವಮೊಗ್ಗ- ಡಿ.ಎಸ್. ಅರುಣ್
* ಧಾರವಾಡ- ಪ್ರದೀಪ್ ಶೆಟ್ಟರ್
* ಬೆಳಗಾವಿ- ಮಹಂತೇಶ ಕವಟಗಿಮಠ
* ಕಲಬುರಗಿ- ಬಿ.ಜಿ. ಪಾಟೀಲ್
* ಚಿತ್ರದುರ್ಗ- ಕೆ.ಎಸ್.ನವೀನ್
* ಮೈಸೂರು- ರಘು ಕೌಟಿಲ್ಯ
* ಹಾಸನ- ವಿಶ್ವನಾಥ್
* ಉತ್ತರ ಕನ್ನಡ-ಗಣಪತಿ ಉಳ್ವೇಕರ್
* ಬೀದರ್- ಪ್ರಕಾಶ್ ಖಂಡ್ರೆ 
ಬೆಂಗಳೂರು- ಗೋಪಿನಾಥ್ ರೆಡ್ಡಿ
* ಮಂಡ್ಯ- ಮಂಜು ಕೆ.ಆರ್. ಪೇಟೆ 
* ಕೋಲಾರ- ಕೆ.ಎನ್. ವೇಣುಗೋಪಾಲ್ 
* ರಾಯಚೂರು- ವಿಶ್ವನಾಥ್ ಎ ಬನಹಟ್ಟಿ
*  ಬೆಂಗಳೂರು ಗ್ರಾಮಾಂತರ-ಬಿ.ಎಂ. ನಾರಾಯಣಸ್ವಾಮಿ
* ಬಳ್ಳಾರಿ- ವೈ.ಎಂ. ಸತೀಶ್
* ತುಮಕೂರು- ಎನ್. ಲೋಕೇಶ್ 
ವಿಜಯಪುರ- ಪಿ.ಎಚ್. ಪೂಜಾರ್.

ದಕ್ಷಿಣ ಕನ್ನಡದಿಂದ (Dakshina Kannada) ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರೇ ಮುಂದುವರಿಯಲಿದ್ದಾರೆ.  ಎಂಕೆ ಪ್ರಾಣೇಶ್ ಅವರಿಗೂ ಅವಕಾಶ ಸಿಗುತ್ತಿದೆ.  ಮಾಜಿ ಸಭಾಪತಿ, ಹಿರಿಯ ರಾಜಕಾರಣಿ  ಶಂಕರಮೂರ್ತಿ(Shivamogga)ಅವರ ಪುತ್ರ ಡಿಎಸ್ ಅರುಣ್ ಅವರಿಗೆ ಶಿವಮೊಗ್ಗದಿಂದ ಅವಕಾಶ ಸಿಕ್ಕಿದೆ.  ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅವರಿಗೂ ಅವಕಾಶ ಲಭ್ಯವಾಗಿದೆ.

ಪರಿಷತ್​​ನ 25 ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆ ದಿನ.

ರಾಜಕೀಯ ಜಿದ್ದಾಜಿದ್ದಿ; ಉಪಚುನಾವಣೆ ನಂತರ ವಿಧಾನ ಪರಿಷತ್ ಚುನಾವಣೆ ಸಹ  ಕರ್ನಾಟಕದಲ್ಲಿ ರಾಜಕಾರಣ ಜಿದ್ದಾಜಿದ್ದಿಗೆ ವೇದಿಕೆ ಮಾಡಿಕೊಟ್ಟಿದೆ.  ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿ ಒಂದು ಹಂತದಲ್ಲಿ ಮುಂದೆ ಇದ್ದು ಇದೀಗ ಕಾಂಗ್ರೆಸ್ (Congress)ಮತ್ತು ಜೆಡಿಎಸ್(JDS) ಯಾವ ತಂತ್ರಗಾರಿಕೆ ಅನುಸರಿಸಲಿದೆ ಎಂದು ಕಾದು  ನೋಡಬೇಕಿದೆ. 

ಬಿಜೆಪಿ ನಾಯಕರು ಪಕ್ಷ ಸಂಘಟನೆ ಹೆಸರಿನಲ್ಲಿ ಜನ ಸ್ವರಾಜ್ ಯಾತ್ರೆ ನಡೆಸುತ್ತಿದ್ದು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಮೇಲ್ಮನೆಗೆ  ಅತಿ ಹೆಚ್ಚು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ. 

Latest Videos
Follow Us:
Download App:
  • android
  • ios