Council Election : ರೇವಣ್ಣ ಪುತ್ರ ಸೂರಜ್ ಕೋಟಿ ಕೋಟಿ ಒಡೆಯ - ಉಳಿದವರ ಆಸ್ತಿ ಎಷ್ಟು..?
- ವಿಧಾನ ಪರಿಷತ್ ಚುನಾವಣೆಗೆ ವಿವಿಧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
- ನಾಮಪತ್ರ ಸಲ್ಲಿಸಿದವರಲ್ಲಿ ಅನೇಕರು ಕೋಟ್ಯಧೀಶರು -ಯಾರ ಆಸ್ತಿ ಎಷ್ಟು..?
ಬೆಂಗಳೂರು (ನ.24): ವಿಧಾನ ಪರಿಷತ್ ಚುನಾವಣೆಗೆ (MLC Election) ವಿವಿಧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿವಿಧ ಪಕ್ಷಗಳಿಂದ ನಾಮಪತ್ರ ಸಲ್ಲಿಸಿದವರಲ್ಲಿ ಅನೇಕರು ಕೊಟ್ಯಧಿಪತಿಗಳಾಗಿದ್ದಾರೆ. ನಾಮಪತ್ರ (Nomination) ಸಲ್ಲಿಕೆ ವೇಳೆ ತಮ್ಮ ಆಸ್ತಿ ಪಾಸ್ತಿಗಳ ಮಾಹಿತಿ ನೀಡಿದ್ದು, ಇದರಲ್ಲಿ ಬೆಂಗಳೂರು (Bengaluru) ಕಾಂಗ್ರೆಸ್ (Congress) ಎಂಎಲ್ಸಿ ಅಭ್ಯರ್ಥಿ ಸಾವಿರಾರು ಕೋಟಿ ಒಡೆಯರಾಗಿದ್ದಾರೆ. ಇನ್ನು ಹಾಸನದಿಂದ ರೇವಣ್ಣ ಪುತ್ರ ಸೂರಜ್ ರೇವಣ್ಣ (Suraj revanna) ನಾಮಪತ್ರ ಸಲ್ಲಿಕೆ ಮಾಡಿದ್ದು ಅವರು ಕೊಡ ಕೊಟ್ಯಂತರ ರು. ಆಸ್ತಿಯ ಒಡೆಯರಾಗಿದ್ದಾರೆ. ಇನ್ನು ಯಾರ ಯಾರ ಆಸ್ತಿ ಎಷ್ಟಿದೆ..?
ಎನ್.ಅಪ್ಪಾಜಿ ಗೌಡ ಪತ್ನಿ ಬಳಿ 1 ಕೆ.ಜಿ. ಚಿನ್ನಾ ಭರಣ
ಮಂಡ್ಯ: ಜೆಡಿಎಸ್ ಅಭ್ಯರ್ಥಿ ಎನ್.ಅಪ್ಪಾಜಿಗೌಡ 33 ಕೋಟಿ ರು. ಆಸ್ತಿಗೆ ಒಡೆಯ ರಾಗಿದ್ದರೆ, ಅವರ ಪತ್ನಿ ಡಿ.ಟಿ. ಮಧುರ ಮಣಿ 10.50 ಕೋಟಿ ರು. ಆಸ್ತಿಗೆ ರಾಣಿಯಾಗಿದ್ದಾರೆ. ಅಪ್ಪಾಜಿಗೌಡರು ₹20.70 ಕೋಟಿ ರು, ಪತ್ನಿ 7.44 ಕೋಟಿ ರು. ಚರಾಸ್ತಿಯನ್ನು ಹೊಂದಿದ್ದರೆ, 13.66 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಅಪ್ಪಾಜಿಗೌಡರ ಹೆಸರಿನಲ್ಲಿ 1.25 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ನಿ ಹೆಸರಿನಲ್ಲಿದೆ. ಒಟ್ಟಾರೆ 17.45 ಕೋಟಿ ರು. ಅಪ್ಪಾಜಿಗೌಡರಿಗೆ ಸಾಲವಿದ್ದರೆ, ಪತ್ನಿಗೆ 6.69 ಕೋಟಿ ರು. ಸಾಲವಿದೆ. ಅಪ್ಪಾಜಿ ಗೌಡರ ಬಳಿ ಒಂದು ಗ್ರಾಂ ಚಿನ್ನವೂ ಇಲ್ಲ. ಆದರೆ ಪತ್ನಿ ಬಳಿ 1 ಕೆಜಿ ಚಿನ್ನ, ವಜ್ರದ ನಕ್ಲೇಸ್, ವಜ್ರದ ಓಲೆಗಳು, ಅಪಾರ ಪ್ರಮಾಣದ ಆಭರಣಗಳಿವೆ.
ಎಂ.ಜಿ.ಗೂಳೀಗೌಡ
ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಎಂ.ಜಿ.ಗೂಳೀಗೌಡ 2.50 ಕೋಟಿ ರು. ಆಸ್ತಿಯನ್ನು ಹೊಂದಿದ್ದಾರೆ. ಗೂಳಿಗೌಡರ ಪತ್ನಿ 5.80 ಕೋಟಿ ರು. ಒಡತಿ ಯಾಗಿದ್ದರೂ 4.90 ಕೋಟಿ ರು. ಸಾಲವನ್ನು ಹೊಂದಿದ್ದಾರೆ. ಗೂಳಿಗೌಡ ಅವರು 18.64 ಲಕ್ಷ ರು. ಚರಾಸ್ತಿ ಹಾಗೂ 2.19 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದರೆ, ಪತ್ನಿ ಅಶ್ವಿನಿ 16.95 ಲಕ್ಷ ರು.ಚರಾಸ್ತಿ ಹಾಗೂ 5.67 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಗೂಳಿಗೌಡರ ಬಳಿ 26 ಸಾವಿರ ರು. ನಗದು ಇದ್ದರೆ, ಪತ್ನಿ ಬಳಿ 1,90,000 ರು. ಇದೆ. ವಿವಿಧ ಬ್ಯಾಂಕುಗಳಲ್ಲಿ 18,64,914 ರು. ಹಣವಿದ್ದರೆ, ಪತ್ನಿ ಹೆಸರಿನಲ್ಲಿ 16, 95,640 ರು. ಹಣವಿದೆ. ಗೂಳಿಗೌಡರ ಬಳಿ ಚಿನ್ನವಿಲ್ಲ, ಪತ್ನಿ ಬಳಿ 350 ಗ್ರಾಂ ಚಿನ್ನ, 650 ಗ್ರಾಂ ಬೆಳ್ಳಿ ಇ
ಬಿ.ಸೋಮ ಶೇಖರ್
ಚಿತ್ರದುರ್ಗ: ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ರಾಮನಗರ ಮೂಲದ ಬಿ.ಸೋಮ ಶೇಖರ್ ನೂರಾರು ಕೋಟಿ ರು. ಆಸ್ತಿಗೆ ಒಡೆಯರಾಗಿದ್ದು ರೇಂಜ್ ರೋವರ್ ಕಾರು ಇದೆ. ಸೋಮ ಶೇಖರ್ ಒಟ್ಟು 116 ಕೋಟಿ ರು. ಆಸ್ತಿ ಹೊಂದಿದ್ದರೆ, ಅವರ ಪತ್ನಿ 23 ಕೋಟಿ ರು.ರು. ಆಸ್ತಿಯ ಒಡತಿ. 80 ಕೋಟಿ ಸ್ಥಿರಾಸ್ತಿ ಹಾಗೂ 35 ಕೋಟಿ ರು. ಚರಾಸ್ತಿ ಹಾಗೂ ಐದು ಬ್ಯಾಂಕುಗಳಲ್ಲಿ 6.32 ಕೋಟಿ ಠೇವಣಿ ಇಟ್ಟಿ ದ್ದಾರೆ. ಅವರ ಬಳಿ 30 ಲಕ್ಷ ರು. ರೇಂಜ್ ರೋವರ್ ಕಾರು ಇದ್ದರೆ, ಪತ್ನಿ ಮಂಜುಳಾ ಬಳಿ ಇನ್ನೊವಾ ಕಾರಿದೆ. 8 ಲಕ್ಷ ರು. ಮೌಲ್ಯದ ಚಿನ್ನಾಭರಣ 22.4 ಕೋಟಿ ರು. ಮೌಲ್ಯದ ಕೃಷಿಯೇತರ ಭೂಮಿ ಇದೆ
ರೇವಣ್ಣ ಪುತ್ರ ಸೂರಜ್ ಆಸ್ತಿ 61 ಕೋಟಿ
ಹಾಸನ: ಜೆಡಿಎಸ್ ಅಭ್ಯರ್ಥಿ ಸೂರಜ್ ಆರ್. ಅವರ ಒಟ್ಟು ಆಸ್ತಿ ಮೌಲ್ಯ 61,68, 22,761 ರು. ಇದ್ದರೆ ಅವರ ಹೆಸರಲ್ಲಿ ಒಟ್ಟು 14,97,74,989 ರು. ಸಾಲ ಇದೆ. ವಿವಿಧ ಬ್ಯಾಂಕಿನ ಖಾತೆಗಳಲ್ಲಿ 42,04,744 ರು ಇದೆ. ವಿವಿಧ ಬಾಂಡುಗಳ ಮೇಲೆ 2,53,34,361 ರು ಹೂಡಿಕೆ ಮಾಡಿದ್ದಾರೆ. 5.65 ಲಕ್ಷ ಮೌಲ್ಯದ ಒಂದು ಟ್ರಾಕ್ಟರ್ ಮಾತ್ರ ಇದೆ. 18 ಕೆಜಿ ಬೆಳ್ಳಿ, 1 ಕೆಜಿ ಚಿನ್ನ, 36 ದನಗಳಿವೆ. 6 ಎತ್ತು ಹಾಗೂ 8 ಎಮ್ಮೆಗಳೂ ಇವೆ. ₹4,90,78,003 ಮೌಲ್ಯದ ಕೃಷಿ ಭೂಮಿ ಇದೆ. ₹13,53,97,612 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, 14,07,85,087 ರು. ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ.