Asianet Suvarna News Asianet Suvarna News

ಬಿಎಂಟಿಸಿ ಬಸ್‌ನಲ್ಲಿ ಆ.15 ರಂದು 61 ಲಕ್ಷ ಮಂದಿ ಉಚಿತ ಪ್ರಯಾಣ..!

ಬಿಎಂಟಿಸಿ ಅಂಕಿ ಅಂಶಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ, 5051 ಬಸ್‌ ಕಾರ್ಯಾಚರಣೆ, ನಿತ್ಯ 28 ಲಕ್ಷ, 15ರಂದು 61 ಲಕ್ಷ ಜನ ಪ್ರಯಾಣ

61 Lakh People Will Travel Free on BMTC Bus on August 15th in Bengaluru grg
Author
Bengaluru, First Published Aug 19, 2022, 6:37 AM IST

ಬೆಂಗಳೂರು(ಆ.19):  ಈ ಬಾರಿಯ ಸ್ವಾತಂತ್ರ್ಯ ದಿನದಂದು (ಆ.15) ನೀಡಿದ್ದ ಉಚಿತ ಪ್ರಯಾಣ ಸೇವೆಯನ್ನು 61 ಲಕ್ಷ ಮಂದಿ ಪಡೆದುಕೊಂಡಿದ್ದಾರೆ ಎಂದು ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಬಿಎಂಟಿಸಿ ಸ್ಥಾಪನೆಯಾಗಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನದಂದು ಉಚಿತ ಬಸ್‌ ಪ್ರಯಾಣದ ಕೊಡುಗೆಯನ್ನು ನೀಡಿತ್ತು. ಆ ದಿನ 5,051 ಬಸ್‌ಗಳು ಕಾರ್ಯಾಚರಣೆ ನಡೆಸಿದ್ದು, 61,47,323 ಮಂದಿ ಪ್ರಯಾಣಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ನಿತ್ಯ ಸರಾಸರಿ 28 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದರು. ಆ ದಿನ ಹೆಚ್ಚಿನ ಮಂದಿ ಉಚಿತ ಪ್ರಯಾಣ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ಬಿಎಂಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ ಸಖತ್ ರೆಸ್ಪಾನ್ಸ್

ಉಚಿತ ಪ್ರಯಾಣ ಎಂಬ ಕಾರಣಕ್ಕೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಆ.15 ರಂದು ಬಸ್‌ಗಳು ಕಡಿಮೆ ಸಂಚರಿಸಿದ್ದವು ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು. ನಗರದ ಹೊರಭಾಗಗಳಲ್ಲಿ ಬಸ್‌ಗಾಗಿ ಗಂಟೆಗಟ್ಟಲೆ ಕಾದಿದ್ದವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು. ಸದ್ಯ ಉಚಿತ ಪ್ರಯಾಣ ಕುರಿತು ಬಿಎಂಟಿಸಿ ನೀಡಿದ ಅಂಕಿ ಕುರಿತು ಸಾರ್ವಜನಿಕರು ಮಾತ್ರವಲ್ಲದೇ ಸ್ವತಃ ಸಿಬ್ಬಂದಿ ವರ್ಗವೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರ ಸಂಖ್ಯೆಯು ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಎರಡೂವರೆ ಪಟ್ಟು ಹೆಚ್ಚಾಗಿದ್ದು, ಆ ದಿನ ಹಲವು ಕಡೆ ಬಸ್‌ಗಳೇ ಕಾರ್ಯಾಚರಣೆ ಮಾಡಿಲ್ಲ. ಹೇಗೆ ಇಷ್ಟೊಂದು ಮಂದಿ ಸಂಚರಿಸಿದ್ದರು, ಉಚಿತ ಎಂದು ಹೆಚ್ಚು ಮಂದಿಯ ಲೆಕ್ಕ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕಿಸಿದ್ದಾರೆ.
 

Follow Us:
Download App:
  • android
  • ios