ಐದು ಯೋಜನೆಗಳಿಗೆ 60 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ, ದೇಶದಲ್ಲಿ ಯಾವ ರಾಜ್ಯದಲ್ಲಿಯು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಲಿಲ್ಲ ಸಿದ್ದರಾಮಯ್ಯ ಅವರ ಈ ಸಾಧನೆಯನ್ನು ಸಹಿಸದೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್‌ ಹೇಳಿದರು.

ರಾವಂದೂರು : ಐದು ಯೋಜನೆಗಳಿಗೆ 60 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ, ದೇಶದಲ್ಲಿ ಯಾವ ರಾಜ್ಯದಲ್ಲಿಯು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಲಿಲ್ಲ ಸಿದ್ದರಾಮಯ್ಯ ಅವರ ಈ ಸಾಧನೆಯನ್ನು ಸಹಿಸದೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್‌ ಹೇಳಿದರು.

ಪಿರಿಯಾಪಟ್ಟಣದ ಮಾಕೋಡು ಗ್ರಾಮದಲ್ಲಿ ನಡೆ ಕುಂದುಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಬಡವರ ಪರ, ದೀನದಲಿತರ ಪರ, ಅಲ್ಪಸಂಖ್ಯಾತರ ಪರವಾಗಿದ್ದು, ಮುಂದೆ ಬರುವ ಜಿಪಂ, ತಾಪಂ ಮತ್ತು ಸಂಸತ್‌ ಸದಸ್ಯರು ಆಯ್ಕೆ ಚುನಾವಣೆಯಲ್ಲಿಯೂ ಜನರು ಕಾಂಗ್ರೆಸ್‌ನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

ಮಲಗನಕೆರೆ ಗ್ರಾಮಕ್ಕೆ 1.15 ಕೋಟಿ ಹಣ ಬಿಡುಗಡೆಯಾಗಿದ್ದು, ಗ್ರಾಮದ ಸಂಪೂರ್ಣ ಅಭಿವೃದ್ದಿಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಡಿಜಿಟಲ್‌ ಗ್ರಾಂಥಾಲಯವನ್ನು ಉದ್ಘಾಟಿಸಲಾಯಿತು.

ನಾಲೆ ನೀರು ಸರಬರಾಜು ಮಾಡು ವಿಚಾರದಲ್ಲಿ ಕರಡಿಲೆಕ್ಕನ ಕೆರೆಯಿಂದ ನೀರು ಬಿಡುಸಲಾಗುವುದು, ಇಂತಹ ಚಾಲನ್‌ಗಳಿಗೆ ಹಾನಿ ಮಾಡುವವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕಾಗುವುದು ಎಂಬ ಎಚ್ಚರಿಕೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಹಮತ್‌ಜಾನ್‌ ಬಾಬು, ಡಿ.ಟಿ. ಸ್ವಾಮಿ,ಕೆಪಿಸಿಸಿ ಸದಸ್ಯ ನಿತಿನ್‌ವೆಂಕಟೇಶ್‌, ಮಾಜಿ ಎಪಿಎಂಸಿ ಅಧ್ಯಕ್ಷ ಲೋಕೇಶ್‌, ಗ್ರಾಪಂ ಅಧ್ಯಕ್ಷೆ ಶೈಲಜಾ ಲೋಕೇಶ್‌, ಗ್ರಾಪಂ ಮಾಜಿ ಅಧ್ಯಕ್ಷರಾದ ಕೃಷ್ಣೇಗೌಡ, ರಮೇಶ್‌, ಸದಸ್ಯೆ ಮುಮಿಮ್‌ತಾಜ್‌ ಇದ್ದರು. 

ಗ್ಯಾರಂಟಿ ಯೋಜನೆಗಳಿಂದ ಸಮಾನ ಸಮಾಜ

ಪುತ್ತೂರು(ಆ.12): ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಏನೇ ಅಪಪ್ರಚಾರ ಮಾಡಿದರೂ ಜನತೆ ಗ್ಯಾರಂಟಿಗಳನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಯ ಉದ್ದೇಶ ಸಮಾನ ಸಮಾಜ ನಿರ್ಮಾಣ. ಪ್ರತಿಯೊಬ್ಬ ವ್ಯಕ್ತಿಯ ತಲಾ ಆದಾಯ ಹೆಚ್ಚಾಗಬೇಕು. ಆಗ ದೇಶ ನಿಜವಾಗಿಯೂ ಅಭಿವೃದ್ಧಿಯಾಗುತ್ತದೆ ಎನ್ನುವುದು ನಮ್ಮ ಕನಸು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಶುಕ್ರವಾರ ಪುತ್ತೂರು ಪುರಭವನದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಯಾದ 200 ಯುನಿಟ್‌ವರೆಗಿನ ಉಚಿತ ವಿದ್ಯುತ್‌ ಗೃಹಜ್ಯೋತಿ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಿ ಮಾತನಾಡಿದರು.ಅಂಗನವಾಡಿಗಳಲ್ಲಿ ಸನ್‌ಫ್ಲವರ್‌ ಎಣ್ಣೆ: ಕರಾವಳಿ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ಸಾಕಷ್ಟು ಉತ್ಸುಕರಾಗಿದ್ದು, ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪರಿವರ್ತಿಸಿ ಮತ್ತಷ್ಟು ತಾಲೂಕುಗಳನ್ನು ಸೇರ್ಪಡೆಗೊಳಿಸಿ ಹೆಚ್ಚಿನ ಅನುದಾನ ನೀಡುವ ಚಿಂತನೆ ನಡೆಸಲಾಗಿದೆ. ರಾಜ್ಯದ 15 ಆಸ್ಪತ್ರೆಗಳಲ್ಲಿ ಜನಾರೋಗ್ಯ ದೃಷ್ಟಿಯಿಂದ ಉಚಿತವಾಗಿ ಎಂಆರ್‌ಐ ಮತ್ತು ಸಿಟಿಸ್ಕ್ಯಾ‌ನ್‌ ವ್ಯವಸ್ಥೆ, ಮಕ್ಕಳ ಆರೋಗ್ಯಕ್ಕಾಗಿ ಅಂಗನವಾಡಿಗಳಲ್ಲಿ ಪಾಮೋಲಿನ್‌ ಎಣ್ಣೆ ಬದಲು ಸನ್‌ಫ್ಲವರ್‌ ಬಳಸಲಾಗುವುದು. ಜತೆಗೆ ಇನ್ನಷ್ಟುಕಾರ್ಯಕ್ರಮಗಳನ್ನುಜಾಾರಿಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.

ಬೆಲೆ ಏರಿಕೆಗೆ ತತ್ತರಿಸಿದ್ದ ಜನರಿಗೆ 5 ಗ್ಯಾರಂಟಿ ಅನುಕೂಲ: ಸಚಿವ ದರ್ಶನಾಪೂರ್‌

ಜಿಲ್ಲೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಾಕಷ್ಟುಅರ್ಜಿಗಳು ವಿಲೇವಾರಿಯಾಗದೆ ವರ್ಷಾನುಗಟ್ಟಲೆ ಬಾಕಿ ಉಳಿದಿದೆ. ಇದರಿಂದ ಬಡ ಜನತೆಗೆ ತೊಂದರೆ ಹಾಗೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಇಂತಹ ಬಾಕಿ ಉಳಿದಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದ ಸಚಿವ ದಿನೇಶ್‌ ಗುಂಡೂರಾವ್‌, ಜನರು ನೀಡಿದ ಯಾವುದೇ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ಇದು ಜಿಲ್ಲಾಡಳಿತದ ಜವಾಬ್ದಾರಿ. ಮುಂದಿನ ದಿನಗಳಲ್ಲಿ ನಾನು ಕಾಲ ಕಾಲಕ್ಕೆ ಈ ಬಗ್ಗೆ ಮೌಲ್ಯಮಾಪನ ಮಾಡಲಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್‌ ರೈ ಮಾತನಾಡಿ, ರಾಜ್ಯದಲ್ಲಿ ಆಡಳಿತ ಪಡೆದ ಒಂದು ತಿಂಗಳಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳಲ್ಲಿ 4ಕ್ಕೆ ಚಾಲನೆ ನೀಡಲಾಗಿದೆ. ಪುತ್ತೂರಿಗೆ ಕೆಎಂಎಫ್‌ ಪೂರ್ತಿಯಾಗಿ ಬರುವಂತಾಗಬೇಕು. ಕೊಯಿಲ ಪಶುಸಂಗೋಪನಾ ಫಾಮ್‌ರ್‍ನಲ್ಲಿ ನಿರ್ಮಿತವಾದ ಪಶುವೈದ್ಯಕೀಯ ಕಾಲೇಜಿಗೆ 20 ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ಅವರು ಹೇಳಿದರು.