ಅಬಕಾರಿ ಇಲಾಖೆಯಿಂದ 6 ಸಾವಿರ ಲೀಟರ್ ಬಿಯರ್ ನಾಶ
ಸಾವಿರಾರು ಲೀಟರ್ ಮದ್ಯವನ್ನು ನಾಶ ಮಾಡಲಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ನಾಶ ಮಾಡಿದ್ದು, ಅನಾರೋಗ್ಯ ಉಂಟಾಗುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ಚಿತ್ರದುರ್ಗ [ಮಾ.05]: ನಗರದ ಕೆಎಸ್‌ಬಿಸಿಎಲ್ (ಕರ್ನಾಟಕ ಪಾನೀಯ ನಿಗಮ) ಡಿಪೋ ನಿಗಮದ ಮಳಿಗೆಯಲ್ಲಿನ ಅವಧಿ ಮೀರಿದ ಬಿಯರ್ ದಾಸ್ತಾನನ್ನು ಚಿತ್ರದುರ್ಗ ಜಿಲ್ಲೆ ಅಬಕಾರಿ ಉಪ ಆಯುಕ್ತರ ಅವರ ಆದೇಶ ಮೇರೆಗೆ ಬುಧವಾರ ನಾಶಪಡಿಸಲಾಯಿತು.
ಇಲ್ಲಿನ ಕೆಎಸ್‌ಬಿಸಿಎಲ್ (ಕರ್ನಾಟಕ ಪಾನೀಯ ನಿಗಮ) ಡಿಪೋ ಹೊರಭಾಗದ ಆವರಣದಲ್ಲಿ ಅಬಕಾರಿ ಅಧಿಕಾರಿಗಳು, ಅವಧಿ ಮೀರಿದ ಒಟ್ಟು 686 ಪೆಟ್ಟಿಗೆಗಳಲ್ಲಿನ 5970 ಲೀಟರ್, ಅಂದಾಜು ರು.12.40ಲಕ್ಷ ಮೌಲ್ಯದ ಬಿಯರ್ ದಾಸ್ತಾನನ್ನು ಗಾಜಿನ ಬಾಟಲಿಗಳ ಮುಚ್ಚಳ ತೆರೆದು ಚೆಲ್ಲುವ ಮೂಲಕ ನಾಶಪಡಿಸಲಾಯಿತು. ಬಿಯರ್ ತಯಾರಾದ ಬಳಿಕ 6 ತಿಂಗಳ ಅವಧಿಯವರೆಗೆ ಬಳಸಲು ಅವಕಾಶವಿರುತ್ತದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೀಗಾಗಿ, ನಿಗಮದ ಮಳಿಗೆಯಲ್ಲಿ ದಾಸ್ತಾನಿದ್ದ ಸುಮಾರು 5970 ಲೀ. ಬಿಯರ್ ಅವಧಿ ಮೀರಿದ್ದರಿಂದ ನಿಯಮಾನುಸಾರ ಇಲಾಖೆಯಿಂದ ನಾಶಪಡಿಸಲಾಗಿದೆ. ಬ್ಲಾಕ್ ಪರ್ಲ್ ಟ್ರಿಪಲ್ ಸೂಪರ್ ಸ್ಟ್ರಾಂಗ್ ಬಿಯರ್-115 ಲೀ, ಬೆಕ್ಸ್‌ಐಸ್- 571 ಬಾಕ್ಸ್ ನಾಶಪಡಿಸಲಾಯಿತು.
ಕರ್ನಾಟಕ ಬಜೆಟ್ 2020: ಅಬಕಾರಿ ಮೇಲಿನ ಸುಂಕ ಹೆಚ್ಚಳ, ಎಣ್ಣೆ ಪ್ರಿಯರಿಗೆ ಬಿಗ್ ಶಾಕ್...
ಚಿತ್ರದುರ್ಗ ಉಪವಿಭಾಗ ಅಬಕಾರಿ ಉಪ ಅಧೀಕ್ಷಕ ಎಸ್.ಎಂ.ಶಿವಹರಳಯ್ಯ, ಕೆಎಸ್‌ಬಿಸಿಎಲ್ ಡಿಪೋ ಮ್ಯಾನೇಜರ್ ಕೆ.ಸೋಮಶೇಖರಪ್ಪ, ಅಬಕಾರಿ ಉಪನಿರೀಕ್ಷಕ ಎನ್.ನಾಗರಾಜ, ಅಬಕಾರಿ ನಿರೀಕ್ಷಕರಾದ ಪಿ.ವಸಂತ, ಶಿವಪ್ರಸಾದ್, ಅಬಕಾರಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು
#Newsin100Seconds I ಕ್ಷಣದ ಪ್ರಮುಖ ಸುದ್ದಿಗಳು
"