ಕರ್ನಾಟಕ ಬಜೆಟ್ 2020: ಅಬಕಾರಿ ಮೇಲಿನ ಸುಂಕ ಹೆಚ್ಚಳ, ಎಣ್ಣೆ ಪ್ರಿಯರಿಗೆ ಬಿಗ್ ಶಾಕ್

ಕರ್ನಾಟಕ ಬಜೆಟ್ 2020ನಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಬಕಾರಿ ಮೇಲಿನ  ತೆರಿಗೆ ಸುಂಕ ಹೆಚ್ಚಿಸಿದ್ದು, ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಿದೆ.

karnataka Budget 2020: 6 percent Tax Hikes On liquor

ಬೆಂಗಳೂರು, (ಮಾ.05): ಕರ್ನಾಟಕ ಬಜೆಟ್ 2020ನಲ್ಲಿ  ಅಬಕಾರಿ ಮೇಲಿನ ತೆರಿಗೆ ಸುಂಕವನ್ನ ಶೇ.6ಷ್ಟು ಹೆಚ್ಚಳ ಮಾಡಲಾಗಿದೆ

ಈ ಹಿನ್ನೆಲೆಯಲ್ಲಿ ಮದ್ಯ ಬೆಲೆ ಏರಿಕೆಯಾಗಲಿದ್ದು, ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ.

Karnataka Budget 2020 Live | ಮದ್ಯ ಪ್ರಿಯರಿಗೆ ಮತ್ತೆ ಶಾಕಿಂಗ್ ನ್ಯೂಸ್!

ಅಬಕಾರಿ ಇಲಾಖೆಗೆ ಮುಂದಿನ ಹಣಕಾಸು ವರ್ಷಕ್ಕೆ 25 ಸಾವಿರ ಕೋಟಿ ರೂಪಾಯಿ ಗುರಿ ನಿಗದಿಪಡಿಸಲು ಹಣಕಾಸು ಇಲಾಖೆ ಹೊಂದಿರುವ ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಂಡಿದ್ದು ಅಬಕಾರಿ ತೆರಿಗೆಯನ್ನು ಶೇಕಡ 6 ರಷ್ಟು ಹೆಚ್ಚಳ ಮಾಡಿದೆ.

ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಒಂದಾಗಿರುವ ಅಬಕಾರಿ ಇಲಾಖೆ ಆದಾಯ ಗುರಿ ಹೆಚ್ಚಿಸಲು ತೆರಿಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದ್ದು, 2020ನೇ ಸಾಲಿನಲ್ಲಿ 20,950 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ. 

2019ನೇ ಸಾಲಿನಲ್ಲಿ ಇಲಾಖೆ 16,187.95 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ.  2018ಕ್ಕೆ ಹೋಲಿಕೆ ಮಾಡಿದರೆ ಅಬಕಾರಿ ಇಲಾಖೆ ಲಾಭವನ್ನೇ ಗಳಿಸಿದೆ.

Latest Videos
Follow Us:
Download App:
  • android
  • ios