ಚಿಕ್ಕಮಗಳೂರು(ಆ.10): ಮಲೆನಾಡು, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಮಲೆನಾಡಿನಲ್ಲೂ ಭಾರೀ ಮಲೆಯಾಗುತ್ತಿದ್ದು, ಬಾಳೆ ಹೊನ್ನೂರು ಸಮೀಪದ ಮಾಗುಂಡಿಯಲ್ಲೂ ಪ್ರವಾಹದಿಂದ ಜನರ ತತ್ತರಿಸಿದ್ದಾರೆ.

ಬಾಳೆಹೊನ್ನೂರು ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದಾಗಿ ಸಮೀಪದ ಮಾಗುಂಡಿಯಲ್ಲೂ ಪ್ರವಾಹ ಸ್ಥಿತಿ ಮಿತಿಮೀರಿದ್ದು, ಶುಕ್ರವಾರ ರಾತ್ರಿ ವೇಳೆಗೆ ಭದ್ರಾನದಿಯ ದಡದಲ್ಲಿದ್ದ ಆರು ಮನೆಗಳಿಗೆ ಪ್ರವಾಹ ನುಗ್ಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾತ್ರಿ 8 ಗಂಟೆ ವೇಳೆಗೆ ಭದ್ರಾನದಿಯಲ್ಲಿ ಮತ್ತಷ್ಟುಪ್ರವಾಹ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಆ ಆರು ಮನೆಗಳ ಸದಸ್ಯರನ್ನು ಸ್ಥಳಾಂತರಿಸಲಾಗಿದೆ. ಕುಟುಂಬಸ್ಥರಿಗೆಲ್ಲಾ ಮಾಗುಂಡಿಯ ಮಸೀದಿಯಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಾಳೆಹೊನ್ನೂರು ಪಿಎಸ್‌ಐ ತೇಜಸ್ವಿ ತಿಳಿಸಿದ್ದಾರೆ. ಯಾವುದೇ ರೀತಿಯ ಅನಾಹುತಗಳು ಇಲ್ಲಿ ಸಂಭವಿಸಿಲ್ಲ ಎಂದೂ ತಿಳಿಸಿದ್ದಾರೆ.

ಚಿಕ್ಕಮಗಳೂರು: ಮಂಗಳೂರು- ಶೃಂಗೇರಿ ಸಂಪರ್ಕ ಕಡಿತ