Asianet Suvarna News Asianet Suvarna News

ವಿಷ ಪ್ರಸಾದ ದುರಂತ ಪ್ರಕರಣದ ತನಿಖೆ ಚುರುಕು: 6 ಜನ ವಶಕ್ಕೆ

ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ದುರಂತ ಪ್ರಕರಣದ ತನಿಖೆ ಚುರುಕಾಗಿ ನಡೆದಿದ್ದು, ಈ ಸಂಬಂಧ ಆರು ಶಂಕಿತ ಆರೋಪಿಗಳನ್ನು ಪೊಲೀಸರು ವಶಪಡೆದುಕೊಂಡಿದ್ದಾರೆ. 

6 arrested for prasadam poisoning tragedy in Chamarajanagar district
Author
Bengaluru, First Published Dec 15, 2018, 7:46 PM IST

ಚಾಮರಾಜನಗರ, [ಡಿ.15]: ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ದುರಂತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸರ್ಕಾರ ಮಟ್ಟದಲ್ಲಿ ತನಿಖೆ ಜೋರಾಗಿದೆ. 

ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟ ಮಾದಯ್ಯ ನೇತೃತ್ವದಲ್ಲಿ ತನಿಖೆಗಾಗಿ ವಿಶೇಷ ತಂಡ ರಚನೆಯಾಗಿದ್ದು, ಪ್ರಕರಣ ಸಂಬಂಧ ಈಗಾಗಲೇ ಬೆಳ್ಳಿ ಅರ್ಚಕರು, ದೊಡ್ಡಪ್ಪಿ‌ಅರ್ಚಕರು, ಮಹದೇವ್ ಸ್ವಾಮಿ ಮತ್ತು ಮಾದೇಶ ಮೇನೇಜರ್ಸ್, ದುಮ್ಮಜ್ಜ ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ.

ಅಪ್ಪ ಮಾಡಿದ್ದ ಪ್ರಸಾದವೇ ಮಗಳ ಬಾಳಿನ ಕೊನೆಯ ತುತ್ತಾಯ್ತು..!

ಇದಕ್ಕೂ ಮುನ್ನ ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ, ಸುಳ್ವಾಡಿ ಗ್ರಾಮಕ್ಕೆ ಭೇಟಿ ನೀಡಿ, ಇಬ್ಬರು ಆರೋಪಿಗಳ ಜೊತೆ ಮಾರಮ್ಮ ದೇವಸ್ಥಾನದ ಸ್ಥಳ ಪರಿಶೀಲನೆ ಮಾಡಿದರು. 

ಇದೇ ವೇಳೆ ಐಜಿಪಿಗೆ ಚಾಮರಾಜನಗರ ಎಸ್ಪಿ  ಧರ್ಮೇಂದ್ರ ಕುಮಾರ್ ಮೀನಾ ಸಾಥ್ ನೀಡಿದ್ದು, ಪ್ರಕರಣದ ತನಿಖೆ ಪ್ರಗತಿ ಕುರಿತು ಮಾಹಿತಿ ನೀಡಿದರು. ಇನ್ನು ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಚಿವ ಸಿ.ಎಸ್ ಪುಟ್ಟರಾಜು ದೇಗುಲದ ಆವರಣ, ಅಡುಗೆ ಮನೆ ಪರಿಶೀಲಿಸಿದರು.

ಮಾರಮ್ಮನ ಪ್ರಸಾದಕ್ಕೆ 10 ಮಂದಿ ಬಲಿ: ವಿಷವಿಕ್ಕಿದ ಇಬ್ಬರ ಬಂಧನ

ಒಟ್ಟಾರೆ ವಿಷ ಪ್ರಸಾದ ದುರಂತ ಪ್ರಕರಣದ ತನಿಖೆ ತೀವ್ರ ಚುರುಕುಗೊಂಡಿದ್ದು, ಈಗಾಗಲೇ ಒಟ್ಟು 6 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. 

Follow Us:
Download App:
  • android
  • ios