ಚಾಮರಾಜನಗರ,[ಡಿ.14]: ಜಿಲ್ಲೆಯ ಹನೂರು ಸಮೀಪದ ಸುಳ್ವಾಡಿ ಗ್ರಾಮ ಮಾರಮ್ಮನ ಪ್ರಸಾದ ಸೇವಿಸಿದ ಸುಮಾರು 65ಕ್ಕೂ ಹೆಚ್ಚು ಭಕ್ತರು ಆಸ್ಪತ್ರೆ ಸೇರಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ದೇವಸ್ಥಾನದ ಗೋಪುರ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿಯೇ ವಿಷ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸಂಬಂಧ ಚಾಮರಾಜನಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಚಾಮರಾಜನಗರ: ಏರುತ್ತಿರುವ ಸಾವಿನ ಸರಣಿ, ಪ್ರಸಾದದಲ್ಲಿ ವಿಷ ಹಾಕಿದ್ರಾ ಪಾಪಿಗಳು..?

ದೇವಾಲಯ ಆಡಳಿತ ಮಂಡಳಿ ಸದಸ್ಯ ಗೌಡರ್​ ಚಿನ್ನತ್ತಿ ಹಾಗೂ ದೇವಾಲಯ ಮ್ಯಾನೇಜರ್ ಮಾದೇಶ್ ಎನ್ನುವ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ದೇವಾಲಯ ಮ್ಯಾನೇಜರ್ ಮಾದೇಶ್​​ನೇ ಈ ಹೀನಾ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮೈಸೂರಿನ ಕೆಆರ್​ ಆಸ್ಪತ್ರೆಯ ಡಿಹೆಚ್​ಒ ಬಸವರಾಜ್, ​ ಪ್ರಸಾದದಲ್ಲಿ ಓಪಿ ಪಾಯ್ಸನ್ ಮಿಕ್ಸ್​ ಆಗಿರಬಹುದು. ಇದು ಒಂದು ರೀತಿಯ ಕೀಟ ನಾಶಕ. ಈ ಕೀಟ ನಾಶಕವನ್ನು  ಜಮೀನಿಗೆ ಸಿಂಪಡಿಸಲಾಗುತ್ತದೆ.ಆದರೆ ಈ ಬಗ್ಗೆ ಖಚಿತವಾಗಿ ಹೇಳಲಾಗುವುದಿಲ್ಲ. ಈ ಬಗ್ಗೆ ಫೊರೆನ್ಸಿಕ್​ ಲ್ಯಾಬ್​ ರಿಪೋರ್ಟ್​ ಬಳಿಕ ಖಚಿತ ಪಡಿಸಲಾಗುವುದು ಎಂದರು.