ಶೇ.50ರಷ್ಟು ರಿಯಾಯಿತಿ: ಬೆಂಗಳೂರಿನಲ್ಲಿ 2ನೇ ದಿನ 6.8 ಕೋಟಿ ಟ್ರಾಫಿಕ್‌ ದಂಡ ಸಂಗ್ರಹ

ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಶೇ.50ರ ರಿಯಾಯಿತಿ ಬಾಕಿ ದಂಡ ಮೊತ್ತ ಪಾವತಿಗೆ ಎರಡನೇ ದಿನವೂ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಒಂದೇ ದಿನ 2.52 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 6.80 ಕೋಟಿ ದಂಡದ ಮೊತ್ತ ಸಂಗ್ರಹವಾಗಿದೆ.

6 8 crore traffic fine collected in 2 days at bengaluru gvd

ಬೆಂಗಳೂರು (ಫೆ.05): ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಶೇ.50ರ ರಿಯಾಯಿತಿ ಬಾಕಿ ದಂಡ ಮೊತ್ತ ಪಾವತಿಗೆ ಎರಡನೇ ದಿನವೂ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಒಂದೇ ದಿನ 2.52 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 6.80 ಕೋಟಿ ದಂಡದ ಮೊತ್ತ ಸಂಗ್ರಹವಾಗಿದೆ.

ಪೊಲೀಸ್‌ ಠಾಣೆಗಳಲ್ಲಿ 1,14,685 ಪ್ರಕರಣಗಳಿಂದ .2.72 ಕೋಟಿ, ಪೇಟಿಎಂನಿಂದ 1,06,980 ಪ್ರಕರಣಗಳಿಂದ .3.27 ಲಕ್ಷ ಸಂಚಾರ ನಿರ್ವಹಣಾ ಕೇಂದ್ರದ(ಟಿಎಂಸಿ) ಕೌಂಟರ್‌ನಲ್ಲಿ 724 ಪ್ರಕರಣಗಳಿಂದ 1.86 ಲಕ್ಷ, ಬೆಂಗಳೂರು ಒನ್‌ ವೆಬ್‌ಸೈಟ್‌ನಲ್ಲಿ 30,131 ಪ್ರಕರಣಗಳಿಂದ .78.58 ಲಕ್ಷ ಸೇರಿದಂತೆ ಒಟ್ಟು 2,52,520 ಪ್ರಕರಣಗಳಿಂದ .6.80 ಕೋಟಿ ದಂಡ ಸಂಗ್ರಹವಾಗಿದೆ. ಈ ಮೂಲಕ ಕಳೆದ ಎರಡು ದಿನಗಳಲ್ಲಿ 4,77,298 ಪ್ರಕರಣಗಳಿಂದ .13.81 ಕೋಟಿ ಬಾಕಿ ದಂಡ ಮೊತ್ತ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.50ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ: 2 ದಿನದಲ್ಲಿ 14.6 ಕೋಟಿ ಟ್ರಾಫಿಕ್‌ ದಂಡ ಸಂಗ್ರಹ!

ರಾಜ್ಯ ಸರ್ಕಾರ ಒಂದು ಬಾರಿಗೆ ಮಾತ್ರ ಫೆ.11ರ ವರೆಗೆ ಬಾಕಿ ದಂಡ ಮೊತ್ತ ಪಾವತಿಗೆ ಶೇ.50ರ ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ನಗರ ಸಂಚಾರ ಪೊಲೀಸ್‌ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ) ಹಾಗೂ ಬೆಂಗಳೂರು ಒನ್‌ ಕೇಂದ್ರಗಳಿಗೆ ತೆರಳಿ ಬಾಕಿ ದಂಡದ ಮೊತ್ತ ಪಾವತಿಸಿದರು. ಇದರ ಜತೆಗೆ ಕರ್ನಾಟಕ ಒನ್‌ ವೆಬ್‌ಸೈಟ್‌, ಪೆಟಿಎಂ ಆ್ಯಪ್‌ಗಳಲ್ಲಿಯೂ ಬಾಕಿ ದಂಡ ಪಾವತಿಸಿದರು. ಅಷ್ಟೇ ಅಲ್ಲದೆ, ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳು, ಜಂಕ್ಷಗಳಲ್ಲಿ ಎಎಸ್‌ಐಗಳು ಹಾಗೂ ಸಬ್‌ಇನ್ಸ್‌ಪೆಕ್ಟರ್‌ಗಳು ಸಾರ್ವಜನಿಕರಿಂದ ಬಾಕಿ ದಂಡ ಕಟ್ಟಿಸಿಕೊಳ್ಳುವ ದೃಶ್ಯಗಳು ಹಲವೆಡೆ ಕಂಡು ಬಂದಿತು.

ಆನ್‌ಲೈನ್‌ ಪಾವತಿ ಸುಸೂತ್ರ: ಶುಕ್ರವಾರ ಒಮ್ಮೆಗೇ ಭಾರೀ ಸಂಖ್ಯೆಯ ಜನರು ಸಂಚಾರ ಪೊಲೀಸ್‌ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಬಾಕಿ ದಂಡ ಮೊತ್ತ ಪಾವತಿಗೆ ಮುಂದಾದ ಹಿನ್ನೆಲೆಯಲ್ಲಿ ವೆಬ್‌ಸೈಟ್‌ ಸರ್ವರ್‌ ಡೌನ್‌ ಆಗಿತ್ತು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್‌ ಇಲಾಖೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸಂಚಾರ ಪೊಲೀಸ್‌ ವಿಭಾಗವು ಸರ್ವರ್‌ನ ತಾಂತ್ರಿಕ ಸಮಸ್ಯೆ ಬಗೆಹರಿಸಿ ಬಾಕಿ ದಂಡ ಪಾವತಿಗೆ ಅವಕಾಶ ಮಾಡಿಕೊಟ್ಟಿತ್ತು. ಶನಿವಾರ ಸಾರ್ವಜನಿಕರಿಗೆ ಸರ್ವರ್‌ ಸಮಸ್ಯೆ ಹೆಚ್ಚಾಗಿ ಕಾಡಲಿಲ್ಲ. ಹೀಗಾಗಿ ಆನ್‌ಲೈನ್‌ನಲ್ಲಿಯೇ ಹೆಚ್ಚಿನವರು ಬಾಕಿ ದಂಡ ಮೊತ್ತ ಪಾವತಿಸಿದರು.

ಟ್ರಾಫಿಕ್‌ ದಂಡ ಪಾವತಿಗೆ ಮುಗಿಬಿದ್ದ ಜನ: ಒಂದೇ ದಿನ 5.6 ಕೋಟಿ ಸಂಗ್ರಹ!

ಹಾಫ್‌ ರೇಟ್‌, ಚೀಫ್‌ ರೇಟ್‌!: ಶೇ.50ರ ರಿಯಾಯಿತಿ ಅವಕಾಶದ ಅಡಿಯ ಬಾಕಿ ದಂಡದ ಮೊತ್ತ ಸಂಗ್ರಹಕ್ಕೆ ಮುಂದಾಗಿರುವ ಸಂಚಾರ ಪೊಲೀಸರು, ಸಾಮಾಜಿಕ ಜಾಲತಾಣದಲ್ಲಿ ವಿಶಿಷ್ಟವಾಗಿ ಸಾರ್ವಜನಿಕರನ್ನು ಬಾಕಿ ದಂಡ ಪಾವತಿಸುವಂತೆ ಆಹ್ವಾನಿಸಿದ್ದಾರೆ. ಯಶವಂತಪುರ ಸಂಚಾರ ಪೊಲೀಸ್‌ ಠಾಣೆಯ ಟ್ವಿಟರ್‌ ಖಾತೆಯಲ್ಲಿ ‘ಹಾಫ್‌ ರೇಟ್‌ ಚೀಫ್‌ ರೇಟ್‌, ಯಾರಿಗುಂಟು ಯಾರಿಗಿಲ್ಲ, ಮರೆಯಬೇಡಿ, ಮರೆತು ನಿರಾಶರಾಗಬೇಡಿ, ಮತ್ತೆ ಚಾನ್ಸ್‌ ಬರಲಿಕ್ಕಿಲ್ಲ, ಕೊಡುಗೆ ಸೀಮಿತ ಅವಧಿಗೆ ಮಾತ್ರ ತ್ವರೆ ಮಾಡಿ, ಬೇಗ ಬನ್ನಿ’ ಎಂದು ಟ್ವಿಟ್‌ ಮಾಡುವ ಮುಖಾಂತರ ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಸಿನಿಮಾ ಪ್ರಚಾರ ಶೈಲಿಯಲ್ಲಿ ಅನುಸರಿಸಿ ಗಮನ ಸೆಳೆದಿದ್ದಾರೆ.

Latest Videos
Follow Us:
Download App:
  • android
  • ios