ಮಂಡ್ಯ(ನ.28): ಉಪಚುನಾವಣೆ ಸಮೀಪಿಸಿದ್ದು, ಚುನಾವಣಾಧಿಕಾರಿಗಳು ತಮ್ಮ ಕಣ್ಗಾವಲನ್ನೂ ಹೆಚ್ಚಿಸಿದ್ದಾರೆ. ಮಂಡ್ಯ ಮದ್ದೂರು ಬಳಿಯ ಚುನಾವಣಾ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 52 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಡಿಸೆಂಬರ್ 5 ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣಾಧಿಕಾರಿಗಳು ಎಲ್ಲೆಡೆ ಭದ್ರತೆ ಹಾಗೂ ತಪಾಸಣೆಯನ್ನು ಹೆಚ್ಚಿಸಿದ್ದಾರೆ.

'ಎದೆ ಬಗೆದು ದೇವೇಗೌಡರ ತೋರಿಸಲು ನಾನು ಹನುಮಂತ ಅಲ್ಲ'..!

ಇಷ್ಟೊಂದು ತಪಾಸಣೆ ನಡುವೆಯೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 52 ಲಕ್ಷ ರೂಪಾಯಿಯನ್ನು ಮಂಡ್ಯದಲ್ಲಿ ಸೀಜ್ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ  ಚುನಾವಣಾ ಚೆಕ್ ಪೋಸ್ಟ್‌ನಲ್ಲಿ ನಗದು ವಶಪಡಿಸಿಕೊಳ್ಳಲಾಗಿದ್ದು, ತಮಿಳುನಾಡಿನ ಹೊಸೂರು ಮೂಲದ ಆದಿತ್ಯ ಎಂಬುವವರಿಗೆ ಸೇರಿದ ಕಾರಿನಲ್ಲಿ ನಗದು ಸಾಗಿಸಲಾಗುತ್ತಿತ್ತು.

‘ಸಮೀಕ್ಷೆಗಳ ಪ್ರಕಾರ ಎಂ.ಟಿ.ಬಿಗೆ ಸೋಲು ಖಚಿತ’

ಕಾರಿನಲ್ಲಿ ಯಾವುದೇ ದಾಖಲಾತಿ ಇಲ್ಲದೆ  ಸಾಗಿಸುತ್ತಿದ್ದ 52 ಲಕ್ಷ 60 ಸಾವಿರ ಹಣ ಪತ್ತೆಯಾಗಿದ್ದು, ಕಾರು ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಬರುತ್ತಿತ್ತು. ಮದ್ದೂರಿನ ನಿಡಗಟ್ಟ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡಿದಾಗ ಹಣ ಸಿಕ್ಕಿದೆ. 52.60ಲಕ್ಷ ರೂಪಾಯಿ ಹಣ, ಕಾರು ಹಾಗೂ ಕಾರಿನ ಮಾಲೀಕನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮದ್ದೂರು ಪೊಲೀಶ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

KSRTC ಬಸ್ಸಿಗೆ ಸೈಡ್ ಕೊಡಲು ಹೋಗಿ ಹಳ್ಳಕ್ಕೆ ಉರುಳಿದ ಖಾಸಗಿ ಬಸ್.