ಚಿಕ್ಕಮಗಳೂರು [ನ.28]: ಎದುರಿಗೆ ಬಂದ ಸಾರಿಗೆ ಬಸ್ಸಿಗೆ ಸೈಡ್ ಕೊಡಲು ಹೋಗಿ ಖಾಸಗಿ ಬಸ್ ಪಲ್ಟಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆ ಲಿಂಗದಹಳ್ಳಿ ಸಮೀಪದ ಕಲ್ಲತ್ತಗಿರಿ ಹಳ್ಳದ ಬಳಿ 30 ಮಂದಿ ಪ್ರಯಾಣಿಕರಿದ್ದ ಬಸ್ ಉರುಳಿ ಬಿದ್ದಿದೆ.

ಬಸ್ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ 30 ಮಂದಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತರೀಕೆರೆ ಆಸ್ಪತ್ರೆಗೆ ರವಾನಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತ್ಯಂತ ಕಿರಿದಾದ ಸೇತುವೆಯಲ್ಲಿ ಬಸ್ಸಿಗೆ ಸೈಡ್ ಕೊಡಲು ಹೋದಾಗ ಈ ಅವಘಡವಾಗಿದೆ.  

ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.