ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ; ಗಿಣಿ ಹುಡುಕಲು ಹೊರಟ ಕುಟುಂಬ!

ಸಾಕು ಪ್ರಾಣಿಗಳ ಮೇಲೆ ಕುಟುಂಬದವರು ಅದೇಷ್ಟು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಎಂಬುದಕ್ಕೆ ಇಲ್ಲೊಮದು ತಾಜಾ ಉದಹಾರಣೆ ಇದೆ. ಗಿಣಿ ಕಳೆದುಕೊಂಡ ಕುಟುಂಬ ಅದನ್ನು ಹುಡುಕುವುದುಕ್ಕೆ ನಗರದಲ್ಲೆಲ್ಲ ಸುತ್ತುತ್ತಿದ್ದಾರೆ. ಅಲ್ಲದೇ ಹುಡುಕಿಕೊಟ್ಟವರಿಗೆ 50,000 ಬಹುಮಾನ ಘೋಷಿಸಿದ್ದಾರೆ!

50000 reward for finding the parrot; The family went to find a parrot tumukuru rav

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್. 
 ತುಮಕೂರು (ಜು.19): ಮನೆಯಿಂದ ಕಣ್ಮರೆಯಾದ ಸಾಗಿದ ಗಿಣಿಯನ್ನು ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ನೀಡುವುದಾಗಿ ತುಮಕೂರು ನಗರ ನಿವಾಸಿ ಕುಟುಂಬವೊಂದು ಘೋಷಣೆ ಮಾಡಿದೆ.  ಗಿಣಿ ಹುಡುಕಿ ಕೊಡುವಂತೆ ನಗರದ ತುಂಬಾ 40 ಕಡೆಗಳಲ್ಲಿ ಬಹುಮಾನದ ಬ್ಯಾನರ್‌ ಕಟ್ಟಿ ಹಗಲಿರುಳೆನ್ನದೆ, ನೆಚ್ಚಿನ ಸಾಕು ಗಿಣಿಯ ಹುಡುಕಾಟ ನಡೆಸಲಾಗುತ್ತಿದೆ.

ತುಮಕೂರಿನ (Tumukuru) ಜಯನಗರ(Jayanagar)  ಬಡಾವಣೆಯ ನಿವಾಸಿ ರವಿ ಎಂಬುವರೇ ಸಾಕು ಗಿಣಿ(Parrot)ಯನ್ನು ಹುಡುಕಾಟ ನಡೆಸುತ್ತಿರುವ ವ್ಯಕ್ತಿ.  ಆಫ್ರೀನ್‌ ಗ್ರೇ(African grey parrot)ಜಾತಿಗೆ ಸೇರಿದ ಈ ಗಿಣಿಯು ರವಿಯವರ ಮನೆಯಿಂದ 16-07-22ರಂದು ತಪ್ಪಿಸಿಕೊಂಡಿದೆ. ಮನೆಯಿಂದ ಹೊರಗೆ ಹಾರಿ ಹೋದ ಗಿಣಿಯನ್ನು ಕುಟುಂಬಸ್ಥರು ಹಗಲಿರುಳು ಹುಡುಕಾಟ ನಡೆಸುತ್ತಿದ್ದಾರೆ. ಮನೆಯವರೊಂದಿಗೆ ಪ್ರೀತಿಯಿಂದ ಹೊಂದಿಕೊಂಡಿದ್ದ ಗಿಣಿ  ಕಣ್ಮರೆ  ರವಿ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಮನೆಯಲ್ಲೇ ಮಕ್ಕಳಂತೆ ಪ್ರೀತಿಯಿಂದ ಸಾಕಿರುವ, ಈ ಗಿಣಿಗೆ ಹೊರಗೆ ತಾನೇ ಸ್ವತಂತ್ರವಾಗಿ ಆಹಾರ ಹುಡುಕಿ ತಿನ್ನುವ ಅಭ್ಯಾಸವಿಲ್ಲವಂತೆ. ಈಗಾಗಿ ಗಿಣಿ ಇನ್ನು ಎರಡು ದಿನದಲ್ಲಿ ಪತ್ತೆಯಾಗದಿದ್ದರೆ ಸಾವನಪ್ಪಲಿದೆಯಂತೆ. ಗಿಣಿ ಕಣ್ಮರೆಯಾಗಿ ಮೂರು ದಿನಗಳು ಕಳೆದು ಹೋಗಿವೆ.  ಆದ್ದರಿಂದ ಕುಟುಂಬದ ಸದಸ್ಯರು ಗಿಣಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಒಂದು ವೇಳೆ ಸಂಜೆಯೊಳಗೆ ಗಿಣಿ ಸಿಗದಿದ್ದರೆ, ನಾಳೆ 25 ಸಾವಿರ ಪಾಂಪ್ಲೇಟ್‌ ಹಂಚಿ ಹುಡುಕಾಟ ನಡೆಸುವ ಯೋಜನೆ ಕುಟುಂಬಕ್ಕಿದೆ.

ಇದನ್ನೂ ಓದಿ: TUMAKURU: ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಶವ ಪತ್ತೆ!

ಮೂರು ವರ್ಷದ ಹಿಂದೆ 20 ಸಾವಿರಕ್ಕೆ ಖರೀದಿ ಬೆಂಗಳೂರಿನಿಂದ  ಮೂರು ವರ್ಷದ ಹಿಂದೆ ಈ ಗಿಣಿ ಮರಿಯನ್ನು ತಂದು ಮನೆಯಲ್ಲಿ ಸಾಕಲಾಗಿತ್ತು. ಬರೋ ಬರಿ 20 ಸಾವಿರ ರೂಪಾಯಿಗೆ ಈ ಗಿಣಿಯನ್ನು ಖರೀದಿ ಮಾಡಲಾಗಿತ್ತು. ಮನೆಯ ಕುಟುಂಬಸ್ಥರ ಸದಸ್ಯನಂತೆ ಪ್ರೀತಿಯಿಂದ ಗಿಣಿ ಮರಿಯನ್ನು ಸಾಕಲಾಗಿತ್ತು. 80 ವರ್ಷ ಜೀವಿತಾವಧಿ ಹೊಂದಿರುವ ಈ  ಆಫ್ರೀಕನ್‌ ಗ್ರೇ ಗಿಣಿ ಮರಿಗೆ ಇದೀಗ 3 ವರ್ಷ ವಯಸ್ಸಾಗಿದೆ.  ಗಿಣಿಯೊಂದಿಗೆ ಕುಟುಂಬದ ಸದಸ್ಯರು ಹೃದಯಬಾಂಧವ್ಯೆ ಹೊಂದಿದ್ದು, ಅದರ ನೆಚ್ಚಿನ ತುಂಟಾದ ಕ್ಷಣಗಳನ್ನು ಕುಟುಂಬದ ಸದಸ್ಯರು ಮೊಬೈಲ್‌ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿದ್ಯುತ್ ಶಾಕ್ ತಗುಲಿ ಎಮ್ಮೆ ಸಾವು; ವಾಟರ್ ಮನ್ ಬಚಾವ್:

ವಿದ್ಯುತ್ ಶಾಕ್ ಗೆ ಎಮ್ಮೆಯೊಂದು ಬಲಿಯಾಗುವ ಮೂಲಕ ಇತರ ಜಾನುವಾರುಗಳನ್ನು ರಕ್ಷಿಸಿದ ಘಟನೆಯೊಂದು ಸಾಗರ ತಾಲೂಕಿನ
ತ್ಯಾಗರ್ತಿ ಸಮೀಪದ ವೀರಾಪುರ ಗ್ರಾಮದಲ್ಲಿ ನಡೆದಿದೆ. ವೀರಾಪುರ ಗ್ರಾಮದ ಕುಡಿಯುವ ನೀರು ಸರಬರಾಜು ಕೊಳವೆ ಬಾವಿ ಬಳಿ ವಿದ್ಯುತ್ ಶಾಕ್ ತಗುಲಿ ಎಮ್ಮೆಯೊಂದು ಮೃತಪಟ್ಟಿದೆ.

ಇದನ್ನೂ ಓದಿ: ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ ಲಭ್ಯತೆ ಖಾತ್ರಿಪಡಿಸಿ: ಅಧಿಕಾರಿಗಳಿಗೆ DC ಡಾ.ಸೆಲ್ವಮಣಿ ಸೂಚನೆ

ಗ್ರಾಮ ಪಂಚಾಯಿತಿ ನೀರು ಸರಬರಾಜು ಕೊಳವೆ ಬಾವಿಯ ಸ್ವಿಚ್ ಬಾಕ್ಸ್ ಬಳಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಪಕ್ಕದಲ್ಲಿ ಇದ್ದ ಕೆರೆ ತುಂಬಿ ಆ ರಸ್ತೆಯಲ್ಲಿ ನೀರು ನಿಂತಿದೆ ಆ ರಸ್ತೆಯಲ್ಲಿ ವೀರಾಪುರ ಮಠ(Veerapuru matt)ದ ಜಾನುವಾರುಗಳನ್ನು ಮೇಯಲು  ಹೊಡೆದುಕೊಂಡು ಹೋಗುವಾಗ ಎಮ್ಮೆ(Buffalo) ಮುಂದೆ ಹೋಗಿದೆ. ಆಗ ನೀರಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ(Short circuit) ಸಾವನ್ನಪ್ಪಿದೆ . ಇದರಿಂದಾಗಿ ಇತರ ಜಾನುವಾರುಗಳನ್ನು ಹೊಡೆದು ಕೊಂಡು ಹೋಗುತ್ತಿದ್ದವರು ತಕ್ಷಣವೇ ತಡೆದು ನಿಲ್ಲಿಸಿದ್ದಾರೆ. ಹೀಗಾಗಿ ಇತರೆ ಜಾನುವಾರು ಗಳ ಸಾವು ಸಂಭವಿಸುವುದು ತಡೆದಂತಾಗಿದೆ ಅದೃಷ್ಟವಶಾತ್ ಅದೇ ಸಮಯಕ್ಕೆ  ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವಾಟರ್ ಮನ್(Waterman) ಕೊಡ ನೀರು ಸರಬರಾಜಿಗೆ ಪಂಪ್ ಆನ್ ಮಾಡಲು ಹೋದಾಗ ಶಾಕ್ ತಗುಲಿ ತಕ್ಷಣ ವಾಪಸ್ ಬಂದು ಬಚಾವ್ ಆಗಿದ್ದಾರೆ. ಇಲ್ಲದಿದ್ದರೆ ಆತನೂ ಕೂಡ ವಿದ್ಯುತ್ ಶಾಕ್ ಗೆ ಬಲಿಯಾಗ ಬೇಕಿತ್ತು.

50000 reward for finding the parrot; The family went to find a parrot tumukuru rav

 

Latest Videos
Follow Us:
Download App:
  • android
  • ios