Tumakuru: ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಶವ ಪತ್ತೆ!

ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಶವ ಎರಡು ದಿನಗಳ ನಂತರ ಪತ್ತೆಯಾಗಿದೆ. ತುಮಕೂರು ಶಾಂತಿನಗರದ ನಿವಾಸಿ ಅಮ್ಜಾದ್‌ ಕಳೆದ ಶನಿವಾರ ತುಮಕೂರು ವರವರ್ತುಲ ರಸ್ತೆಯ ರೈಲ್ವೇ ಬ್ರಿಡ್ಜ್‌ ಬಳಿಯ ಚರಂಡಿಯಲ್ಲಿ ಬಿದ್ದು ನಾಪತ್ತೆಯಾಗಿದ್ದರು. 

dead body of auto driver found who was washed away in rajakaluve tumakuru gvd

ತುಮಕೂರು (ಜು.18): ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಶವ ಎರಡು ದಿನಗಳ ನಂತರ ಪತ್ತೆಯಾಗಿದೆ. ತುಮಕೂರು ಶಾಂತಿನಗರದ ನಿವಾಸಿ ಅಮ್ಜಾದ್‌ ಕಳೆದ ಶನಿವಾರ ತುಮಕೂರು ವರವರ್ತುಲ ರಸ್ತೆಯ ರೈಲ್ವೇ ಬ್ರಿಡ್ಜ್‌ ಬಳಿಯ ಚರಂಡಿಯಲ್ಲಿ ಬಿದ್ದು ನಾಪತ್ತೆಯಾಗಿದ್ದರು. ಅಮ್ಜಾದ್‌ ಬಿದ್ದ ಸ್ಥಳದಿಂದ ಬರೋಬರಿ ಎರಡು ಕಿಲೋ ಮೀಟರ್‌ ದೂರದಲ್ಲಿ ಶವ ಪತ್ತೆಯಾಗಿದೆ. 

ಕೊಳಚೆ ನೀರಿನ ಮಧ್ಯದಲ್ಲಿ ಶವ ಹೂತಿ ಹೋಗಿತ್ತು. ಜೆಸಿಬಿ ಬಳಸಿ ಹೂಳೇತ್ತುವ ಶವ ಪತ್ತೆಯಾಗಿದೆ. ಶವವನ್ನು ತುಮಕೂರು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಅಲ್ಲದೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಜಿಲ್ಲಾಡಳಿತ ನಿರ್ಧಾರ ಮಾಡಲಿದೆ ಎಂದು ತುಮಕೂರು ಪಾಲಿಕೆ ಕಮಿಷನರ್‌ ರೇಣುಕಾ ತಿಳಿಸಿದ್ದಾರೆ. 

ತುಮಕೂರಿನಲ್ಲಿ ಮಳೆ ಅವಾಂತರ: ಚರಂಡಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ

ಕಳೆದ ಶನಿವಾರ ಸುರಿದ ಅರ್ಧ ಗಂಟೆ ಮಳೆಯಿಂದ ಇಷ್ಟೇಲ್ಲಾ ಅವಾಂತರ ನಡೆದಿದೆ. ತುಮಕೂರು ನಗರದ ಬೆಂಗಳೂರು-ಶಿವಮೊಗ್ಗ ಹೊರವರ್ತುಲ ರಸ್ತೆಯ ರೈಲ್ವೇ ಬ್ರಿಡ್ಜ್‌ ಕಳೆಗೆ 5 ಅಡಿಗೂ ಹೆಚ್ಚಿನ ನೀರು ನಿಂತಿತ್ತು. ಇದೇ ಮಾರ್ಗದಲ್ಲಿ ಆಟೋ ಓಡಿಸಿಕೊಂಡು ಬಂದ ಚಾಲಕ ಅಮ್ಜಾದ್‌ ಬ್ರಿಡ್ಜ್‌ ದಾಟಿಸುವ ವೇಳೆ ಮೊಬೈಲ್‌ ನೀರಿನಲ್ಲಿ ಬಿದ್ದಿದೆ. ಆಟೋವನ್ನು ಮುಂದೆ ನಿಲ್ಲಿಸಿ ಮೊಬೈಲ್‌ ಹುಡುಕುತ್ತಾ ಬಂದ ಅಮ್ಜಾದ್‌ ಮೊರಿಯಲ್ಲಿ ಕೊಚ್ಚಿ ಹೋಗಿದ್ದರು. 

ಶನಿವಾರವೇ ತುಮಕೂರು ಅಗ್ನಿಶಾಮಕದಳ ಹಾಗೂ ಸ್ಥಳೀಯ ಪೊಲೀಸರು, ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ನಿರಂತರ ಶೋಧ ನಡೆಸಿದ್ದರು. ಆದ್ರೂ ಶವಪತ್ತೆಯಾಗಿರಲಿಲ್ಲ, ಕೊನೆಗೆ ಮಂಡ್ಯದಿಂದ ಎನ್‌ಡಿಆರ್‌ಎಫ್‌ ತಂಡ ಕರೆಸಲಾಗಿತ್ತು. ಎಲ್ಲರ ಪರಿಶ್ರಮದಿಂದಾಗಿ ಇದೀಗ ಶವ ದೊರೆತಿದೆ. ಒಟ್ಟಾರೆ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ 15 ಮಂದಿ ಸಿಬ್ಬಂದಿ, 20 ಎನ್‌ಡಿಆರ್‌ಎಫ್‌ ತಂಡದ ಮೆಂಬರ್‌, 15 ಜನ ಪಾಲಿಕೆ ಸಿಬ್ಬಂದಿ ಹಾಗೂ ಸ್ಥಳೀಯರ ಪೊಲೀಸರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. 

ಕೆನಡಾ ಸಂಸತ್‌ನಲ್ಲಿ ಕನ್ನಡತನ ಮೆರೆದಿದ್ದ ಸಂಸದ ಚಂದ್ರ ಆರ್ಯ ಹುಟ್ಟೂರಿಗೆ ಭೇಟಿ

ಸರಿಸುಮಾರು 2 ಕಿಲೋ ಮೀಟರ್‌ ದೂರದವರೆಗೂ ಚರಂಡಿಯನ್ನು ಶೋಧ ನಡೆಸಲಾಗಿತ್ತು. ಚರಂಡಿ ನೀರು ತಲುಪುವ ಭೀಮಸಂದ್ರ ಕರೆಯಲ್ಲೂ ಶವಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಕೊನೆಗೆ ಇಂದು ಮಧ್ಯಾಹ್ನ 2.30ರ ಸಮಯದಲ್ಲಿ ಶವ ದೊರೆತಿದೆ. ಯಾರೋ ಮಾಡಿದ ತಪ್ಪಿಗೆ ಮುಗ್ಧ ಆಟೋ ಡ್ರೈವರ್‌ ಪ್ರಾಣ ಬಿಟ್ಟಿದ್ದಾರೆ.

Latest Videos
Follow Us:
Download App:
  • android
  • ios