ಹಾಸನ(ಏ.25): ಬೇಲೂರು ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಮಂದಿಗೆ ಚಿಕೂನ್ ಗುನ್ಯಾ ರೋಗ ಕಾಣಿಸಿಕೊಂಡಿದ್ದು, ಚಳಿ ಜ್ವರ, ಮೈ ಕೈ ಊತದ ನೋವು ಹೆಚ್ಚಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಐದಾರು ದಿನಗಳಿಂದ ಚಳಿ ಜ್ವರ, ಮೈ ಕೈನೋವು ಕಾಣಿಸಿಕೊಳ್ಳುತ್ತಿದ್ದು, ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಲಿ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ಬಗ್ಗೆ ಹೆಚ್ಚಿನ ಗಮನ ನೀಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 17 ಕ್ಕೇರಿದ ಸೋಂಕಿತರು: ದಿನಸಿ ಕಿಟ್‌ ಪಡೆದಿದ್ದ 300 ಮಂದಿಗೆ ಆತಂಕ

ನಾರಾಯಣಪುರದ 50ಕ್ಕೂ ಹೆಚ್ಚು ಗ್ರಾಮಸ್ಥರಲ್ಲಿ ಈ ಚಿಕೂನ್ ಗುನ್ಯಾ ರೋಗ ಲಕ್ಷಣಗಳು ಕಂಡು ಬಂದಿದ್ದು, ಖಾಸಗಿ ಆಸ್ಪತ್ರೆಯ ವೈದ್ಯ ನಾರಾಯಣ ಸ್ವಾಮಿ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ನಾರಾಯಣ ಸ್ವಾಮಿ ಮಾತನಾಡಿ, ಕಳೆದ ಐದಾರು ದಿನಗಳಿಂದ ಐವತ್ತಕ್ಕೂ ಹೆಚ್ಚು ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ ಹಾಗೂ ಕೈ ಕಾಲು ಊತ ನೋವು ಈ ರೋಗದ ಪ್ರಮುಖ ಲಕ್ಷಣಗಳಾಗಿದ್ದು, ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತಿದೆ.

KSRTC ಬಸ್‌ ಸೇವೆ ಆರಂಭ, ಆದ್ರೆ ಶರತ್ತುಗಳು ಅನ್ವಯ!

ಸೊಳ್ಳೆಗಳಿಂದ ಹರಡುವ ಚಿಕೂನ್‌ಗುನ್ಯಾ ಕಾಯಿಲೆಗೆ ಪರಿಸರ ಸ್ವಚ್ಚವಾಗಿಡುವುದು ಉತ್ತಮ ಮದ್ದಾಗಿದೆ ಎಂದಿದ್ದಾರೆ. ನಾರಾಯಣಪುರದಲ್ಲಿ ಚಿಕೂನ್‌ ಗುನ್ಯಾ ಪ್ರಕರಣದ ಬಗ್ಗೆ ವೈದ್ಯಾಧಿಕಾರಿ ಡಾ. ವಿಜಯ್ ಮತ್ತು ಆಡಳಿತಾಧಿಕಾರಿ ನರಸೇಗೌಡ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.