Asianet Suvarna News Asianet Suvarna News

Gadag: ಹುಟ್ಟುಹಬ್ಬಕ್ಕೆ ಬಿಂಕದಕಟ್ಟಿಯ ಭೀಮಾ ಹೆಸರಿನ ಚಿರತೆಯನ್ನು ದತ್ತು ಪಡೆದ ಬಾಲಕ

ಬಿಂಕದಕಟ್ಟಿ ಮೃಗಾಲಯದ ಭೀಮಾ ಎಂಬ ಚಿರತೆಯನ್ನ ಶೌರ್ಯ ಮರೆಣ್ಣವರ್ ಎಂಬ ಐದು ವರ್ಷದ ಬಾಲಕ ದತ್ತು ಪಡೆದಿದ್ದಾರೆ. ಬಿಂಕದಕಟ್ಟಿ ಮೃಗಾಲಯದ ಅಧಿಕಾರಿಯಾಗಿರೋ ಆರ್‌ಎಫ್‌ಒ ಮಹೇಶ್ ಮರೆಣ್ಣವರ್ ಅವರ ಪುತ್ರ ಶೌರ್ಯ ಅವರ ಐದನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ದತ್ತು ಪಡೆಯಲಾಗಿದೆ. 

5 year boy adopts leopard in gadag binkadakatti zoo gvd
Author
First Published Sep 15, 2022, 1:29 PM IST

ಗದಗ (ಸೆ.15): ಬಿಂಕದಕಟ್ಟಿ ಮೃಗಾಲಯದ ಭೀಮಾ ಎಂಬ ಚಿರತೆಯನ್ನ ಶೌರ್ಯ ಮರೆಣ್ಣವರ್ ಎಂಬ ಐದು ವರ್ಷದ ಬಾಲಕ ದತ್ತು ಪಡೆದಿದ್ದಾರೆ. ಬಿಂಕದಕಟ್ಟಿ ಮೃಗಾಲಯದ ಅಧಿಕಾರಿಯಾಗಿರೋ ಆರ್‌ಎಫ್‌ಒ ಮಹೇಶ್ ಮರೆಣ್ಣವರ್ ಅವರ ಪುತ್ರ ಶೌರ್ಯ ಅವರ ಐದನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ದತ್ತು ಪಡೆಯಲಾಗಿದೆ. ದತ್ತು ಪಡೆಯಲು ನಿಗದಿ ಪಡೆಸಿದ 50 ಸಾವಿರ ರೂಪಾಯಿ ಪಾವತಿಸಿ ವರ್ಷದ ಮಟ್ಟಿಗೆ ಚಿರತೆಯನ್ನ ದತ್ತು ಪಡೆಯಲಾಗಿದೆ. ಶೌರ್ಯನಿಗೆ ಚಿರತೆ ಅಂದ್ರೆ ಇಷ್ಟ. ಹೀಗಾಗಿ ಹುಟ್ಟುಹಬ್ಬದ ಉಡುಗೊರೆ ರೂಪದಲ್ಲಿ ಶೌರ್ಯನಿಗೆ ಚಿರತೆ ದತ್ತು ಪಡೆದಿದ್ದೇನೆ ಅಂತಾರೆ ಶೌರ್ಯ ಅವರ ತಂದೆ ಮಹೇಶ್.

ಮಹೇಶ್‌ ಅರಣ್ಯ ಇಲಾಖೆ ಅಧಿಕಾರಿಯಾಗಿರುವುದರಿಂದ ಶೌರ್ಯ ಅವರಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತ. ಮಹೇಶ್ ಅವರು ಈ ಹಿಂದೆ ಬ್ಯಾಡಗಿ ರೇಂಜ್‌ನಲ್ಲಿದ್ದಾಗ ಚಿರತೆ ಗಣತಿ, ಕ್ಯಾಮರಾ ಅಳವಡಿಸುವ ಕೆಲಸಕ್ಕೆ ಶೌರ್ಯ ಜೊತೆಗೆ ಹೋಗ್ತಿದ್ದ. ಅಲ್ಲದೇ ಚಿರತೆ ರಕ್ಷಣೆ ಮಾಡಿದಾಗ ಸ್ಥಳಕ್ಕೆ ಭೇಟಿ ಕೊಟ್ಟು ಚಿರತೆ ಬಗ್ಗೆ ಅತೀವ ಆಸಕ್ತಿಯಿಂದ ಮಾಹಿತಿ ಪಡೀತಿದ್ನಂತೆ. ಹೀಗಾಗಿ ಮಗನ ಆಸೆಯಂತೆ ಬಿಂಕದಕಟ್ಟಿ ಮೃಗಾಲಯದಲ್ಲಿ ಪ್ರಾಣಿಯನ್ನು ದತ್ತು ಪಡೆಯಲಾಗಿದೆ.

Gadag: ಶಾಲೆಗೆ ಕಟ್ಟಬೇಕೆಂದು ಕೂಡಿಟ್ಟಿದ್ದ ಸ್ಕೂಲ್ ಫೀಜ್‌ ಹಣವನ್ನೇ ದೋಚಿದ ಖದೀಮರು..!

ಮೃಗಾಲಯದ ಪ್ರಾಣಿಗಳನ್ನ ನೀವೂ ದತ್ತು ಪಡೆಯಬಹುದು: ಮೃಗಾಲಯದ ನಿರ್ವಹಣೆ, ಪ್ರಾಣಿ ಪಕ್ಷಿಗಳ ಆಹಾರ ಪೂರೈಕೆಗೆ ದತ್ತು ಸ್ವೀಕಾರಕ್ಕೆ ಪಡೆದ ಹಣ, ಎಂಟ್ರಿ ಫೀಜ್‌ಗೆ ಬಂದ ಹಣವನ್ನ ಮೃಗಾಲಯ ನಿರ್ವಹಣೆಗೆ ವ್ಯಯ ಮಾಡಲಾಗುತ್ತೆ. ಮೃಗಾಲಯದ ನಿರ್ವಹಣೆಗೆ ವಾರ್ಷಿಕ ಅಂದಾಜು 1 ಕೋಟಿ 50 ಲಕ್ಷ ಬೇಕಾಗುತ್ತೆ. ಜೀವನದ ಮಹತ್ವದ ದಿನದಂದು ಪ್ರಾಣಿಗಳ ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು.

Gadag: ಮಕ್ಕಳ ಕಳ್ಳರ ವದಂತಿ ನಂಬಬೇಡಿ, ವೀಡಿಯೋ ಶೇರ್ ಮಾಡ್ಬೇಡಿ: ಎಸ್‌ಪಿ ಶಿವಪ್ರಕಾಶ್

ಸಾವಿರ ರೂಪಾಯಿ ಪಾವತಿಸಿ ದತ್ತು ಸ್ವೀಕಾರ ಮಾಡಬಹುದು: ಕೋವಿಡ್ ನಂತರ ದತ್ತು ಸ್ವೀಕಾರ ಮಾಡೋದಕ್ಕೆ ಜನ ಮುಂದೆ ಬರ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಮಟ್ಟಿಗೆ ದತ್ತು ಸ್ವೀಕಾರ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ದತ್ತು ಪ್ರಕ್ರಿಯೆಯಿಂದಾಗಿ ಸುಮಾರು 70 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಸಾವಿರ ರೂಪಾಯಿಯಿಂದ ದತ್ತು ಪಡೆಯಲು ಅವಕಾಶ ಇದೆ. ಹುಲಿ, ಸಿಂಹಗಳಿಗೆ 2 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಆಹಾರ ಕ್ರಮ ನಿರ್ವಹಣೆಗೆ ಅನುಸಾರವಾಗಿ ದರ ನಿಗದಿ ಮಾಡಲಾಗಿದೆ. ಆಸಕ್ತರು  ಮೃಗಾಲಯಕ್ಕೆ ಭೇಟಿ ನೀಡಿ ವಿವರ ಪಡೆಯಬಹುದು. ಚೆಕ್, ಆರ್‌ಟಿಜಿಎಸ್ ಮೂಲಕ ಹಣ ಪಾವತಿಸಿ ರಶೀದಿಯನ್ನು ಪಡೆಯಬಹುದು. ಆನ್‌ಲೈನ್ ಮೂಲಕವೂ ಕೂಡಾ ದತ್ತು ಸ್ವೀಕಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.

Follow Us:
Download App:
  • android
  • ios