Asianet Suvarna News Asianet Suvarna News

Gadag: ಶಾಲೆಗೆ ಕಟ್ಟಬೇಕೆಂದು ಕೂಡಿಟ್ಟಿದ್ದ ಸ್ಕೂಲ್ ಫೀಜ್‌ ಹಣವನ್ನೇ ದೋಚಿದ ಖದೀಮರು..!

ಸ್ಕೂಲ್‌ ಫೀಜ್‌ಗೆ ಅಂತ ಇಟ್ಟಿದ್ದ ಹಣ ಹಾಗೂ ಮದುವೆಗೆಂದು ಕೂಡಿಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.

house theft including- RS 1 lakh rupees and gold ornaments In Gadag rbj
Author
First Published Sep 14, 2022, 4:25 PM IST

ಗದಗ, (ಸೆಪ್ಟೆಂಬರ್.14) : ಮಳೆಯ ಅಬ್ಬರದ ನಡುವೆ ವಿದ್ಯುತ್ ಸ್ಥಗಿತಗೊಂಡಿರುವ ಏರಿಯಾಗಳನ್ನೇ ಟಾರ್ಗೆಟ್ ಮಾಡಿ ಮನೆಯಲ್ಲಿ ಯಾರೂ ಇರದಿರುವ ಮನೆಗಳನ್ನ ಹುಡುಕಿ ಹಣ ಚಿನ್ನಕ್ಕೆ ಕನ್ನ ಹಾಕ್ತಿದ್ದಾರೆ..

ಗದಗ ನಗರದ ಹುಡ್ಕೋ ಕಾಲೋನಿಯ ದೀಪಕ್ ಪವಾರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಮನೆ ಮಂದಿಯಲ್ಲ ಹುಬ್ಬಳ್ಳಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರದಿರುವುದನ್ನ ಗಮನಿಸಿದ ಖದೀಮರು ಮಧ್ಯರಾತ್ರಿ 1 ಗಂಟೆಯಿಂದ 3 ಗಂಟೆಯ ಸುಮಾರಿಗೆ ಬೀಗ‌ಮುರಿದು ಮನೆಯಲ್ಲಿದ್ದ ಬೀರುನಲ್ಲಿದ್ದ 120 ಗ್ರಾಂ ಚಿನ್ನಾಭರಣ, ಮತ್ತು ಮಕ್ಕಳ ಪೀಜ್ ಗಾಗಿ ಇಟ್ಟಿದ್ದ ಒಂದು ಲಕ್ಷ ರೂಪಾಯಿಯನ್ನ ದೋಚಿಕೊಂಡು ಹೋಗಿದ್ದಾರೆ. 

ಬೆಂಗಳೂರಿನಲ್ಲಿ ಹೆಚ್ಚಾಗಿದೆ RX ಬೈಕ್ ಕಳ್ಳತನ: ಕಳ್ಳರಿಗೂ ಇಷ್ಟವಾಯ್ತು ಆರ್‌ ಎಕ್ಸ್ ಕ್ರೇಜ್!

ಪವಾರ್ ಕುಟುಂಬದಲ್ಲಿ ಮದುವೆಗಾಗಿ ಆಗಾಗ ಚಿನ್ನಾಭರಣ ಖರೀದಿಸಿ ಕೂಡಿಟ್ಟಿದ್ದರು. ಚಿನ್ನದ ಸರ, ಉಂಗುರ, ನೆಕ್ ಲೇಸ್ ಗಳನ್ನ ತಂದಿಟ್ಟಿದ್ದರು. ಆದ್ರೆ ಖದೀಮರು ಎಲ್ಲವನ್ನೂ ದೋಚಿ ಪರಾರಿಯಾಗಿದ್ದಾರೆ. ಅದೇ ಕಪಾಟಿನಲ್ಲಿ, ಪುಸ್ತಕದ ಕೆಳಗೆ 10 ಸಾವಿರ ರೂಪಾಯಿ ಇಟ್ಟಿದ್ದರು. ಆದ್ರೆ ಅವು ಮಾತ್ರ ಕಳ್ಳರ ಕಣ್ಣಿಗೆ ಬಿದ್ದಿಲ್ಲ. ಮತ್ತು ಚಿಲ್ಲರೆಗಳನ್ನೂ ಸಹ ಬಿಟ್ಟು ಹೋಗಿದ್ದಾರೆ. ಆದ್ರೆ ಬೆಳಗ್ಗೆ ಪಕ್ಕದ ಮನೆಯವರು ಗಮನಿಸಿದಾಗ ಮನೆಯ ಬಾಗಿಲು ತೆರೆದಿದ್ದು ನೋಡಿ ಮನೆಯ ಯಜಮಾನ ದೀಪಕ್ ಅವರಿಗೆ ಕರೆ ಮಾಡಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.. 

ಇನ್ನು ಕಳ್ಳತನವಾಗಿರೋ ಬಗ್ಗೆ ಮನೆಯ ಪಕ್ಕದ ಮನೆಯಲ್ಲಿನ ಸಿಸಿಟಿವಿಯಲ್ಲಿನ ದೃಶ್ಯಾವಳಿಗಳು ಕಳ್ಳರು ಓಡಾಡಿರೋ ಬಗ್ಗೆ ಸುಳಿವು ಸಿಕ್ಕಿದೆ. ಆದ್ರೆ ಅವರ ಮುಖ ಚರ್ಯೆ ಬಗ್ಗೆ ಸ್ಪಷ್ಟತೆ ಇಲ್ಲ.ಇನ್ನು ಈ ಸಂಬಂಧ ಗದಗ ನವರತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆದಷ್ಟು ಬೇಗ ನಮ್ಮ ಚಿನ್ನಾಭರಣ ಮತ್ತು ಹಣ ಪತ್ತೆ ಮಾಡಿಸಿಕೊಡಿ ಅಂತ ಕಣ್ಣೀರು ಹಾಕ್ತಿದ್ದಾರೆ..

Follow Us:
Download App:
  • android
  • ios