ಬೆಂಗಳೂರು [ಜ.21]:  ಮಹದೇವಪುರ ವಲಯದ ವ್ಯಾಪ್ತಿಯ ಕೆಲ ಇಂದಿರಾ ಕ್ಯಾಂಟಿನ್‌ಗಳಿಂದ ಬೆಂಗಳೂರು ಜಲಮಂಡಳಿಗೆ 5.25 ಲಕ್ಷ ರು. ನೀರಿನ ಶುಲ್ಕ ಬಾಕಿ ಉಳಿಸಿಕೊಳ್ಳಲಾಗಿದೆ.

ಈ ಸಂಬಂಧ ಇಂದಿರಾ ಕ್ಯಾಂಟಿನ್‌ ಗುತ್ತಿಗೆದಾರ ಬಲದೇವ್‌ ಸಿಂಗ್‌ ಮಹದೇವಪುರ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಜಲಮಂಡಳಿ ವಿಧಿಸುತ್ತಿರುವ ನೀರಿನ ಶುಲ್ಕ ದುಬಾರಿಯಾಗಿದ್ದು, ಪಾವತಿಸಲು ಹೊರೆಯಾಗಿದೆ. ಖಾಸಗಿ ಹೋಟೆಲ್‌ಗೆಗಳಿಗೆ ವಿಧಿಸುವ ವಾಣಿಜ್ಯ ಶುಲ್ಕವನ್ನೇ ಇಂದಿರಾ ಕ್ಯಾಂಟಿನ್‌ಗೂ ವಿಧಿಸಲಾಗುತ್ತಿದೆ.

ಬದಲಾಗುತ್ತಾ ಇಂದಿರಾ ಕ್ಯಾಂಟೀನ್‌ ಹೆಸರು : ಸಿಎಂ ನಿರ್ಧಾರವೇನು?

ಹೀಗಾಗಿ ಶುಲ್ಕ ಪಾವತಿಸಲು ಸಮಸ್ಯೆಯಾಗುತ್ತಿದೆ. ವಸತಿ ಕಟ್ಟಡಗಳಿಗೆ ವಿಧಿಸುವ ನೀರಿನ ಶುಲ್ಕವನ್ನೇ ಇಂದಿರಾ ಕ್ಯಾಂಟಿನ್‌ಗಳಿಗೂ ವಿಧಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ಗೆ ಸ್ಥಳೀಯರ ಹೆಸರು...

ಈ ನಡುವೆ ಜಲಮಂಡಳಿಯು ಮಹದೇವಪುರ ವಲಯ ವ್ಯಾಪ್ತಿಯ ಕೆಲ ಇಂದಿರಾ ಕ್ಯಾಂಟಿನ್‌ಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿದೆ. ರಾಧಾಕೃಷ್ಣ ವಾರ್ಡ್‌, ವಸಂತನಗರ, ಯಲಹಂಕ, ಬ್ಯಾಟರಾಯನಪುರ ಸೇರಿದಂತೆ ಕೆಲ ಕಡೆ ಸಮಸ್ಯೆಯಾಗಿದೆ.