ಬೆಂಗಳೂರು, (ಮೇ.25): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ರೆ, ಮರಣ ಮೃದಂಗ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

ಇಂದು (ಮಂಗಳವಾರ) ಹೊಸದಾಗಿ 22,758 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 588 ಸೋಂಕಿತರು ಮೃತಪಟ್ಟಿದ್ದಾರೆ. ಇನ್ನು ಇವತ್ತು 38,224 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಹಳ್ಳಿಗಳಲ್ಲಿ ಕೊರೋನಾ ಕಂಟ್ರೋಲ್‌ಗೆ ಮುಂದಾದ ಸಿಎಂ ಬಿಎಸ್‌ವೈ!

 ಒಟ್ಟು ಸೋಂಕಿತರ ಸಂಖ್ಯೆ 24,72,973 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 26,399 ಜನ ಸಾವನ್ನಪ್ಪಿದ್ದಾರೆ.  ಕೊರೋನಾದಿಂದ ಒಟ್ಟು 20,22,172 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸದ್ಯ 4,24,381 ಸಕ್ರಿಯ ಪ್ರಕರಣಗಳು ಇವೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ  6243 ಜನರಿಗೆ ಸೋಂಕು ತಗುಲಿದ್ದು,  350 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.  ಪ್ರಸ್ತುತ ಸಿಲಿಕಾನ್ ಸಿಟಿಯಲ್ಲಿ 2,19,551 ಸಕ್ರಿಯ ಪ್ರಕರಣಗಳು ಇವೆ.