ಚಂದ್ರಂಪಳ್ಳಿ ಪ್ರವಾಸಿ ತಾಣಕ್ಕೆ 5 ಕೋಟಿ ಮಂಜೂರು: ಶಾಸಕ ಜಾಧವ್‌

ಕಲಬುರಗಿ ಜಿಲ್ಲೆಯಲ್ಲಿಯೇ ಅರಣ್ಯಪ್ರದೇಶ ಇರುವುದು ಕೇವಲ ಕುಂಚಾವರಂನಲ್ಲಿ ಮಾತ್ರ. ಅರಣ್ಯದ ಬಗ್ಗೆ ಗ್ರಾಮಸ್ಥರಿಗೆ ಕಾಳಜಿ ಇರಬೇಕು. ಅರಣ್ಯ ಪ್ರದೇಶದಿಂದ ನಮಗೇನು ಪ್ರಯೋಜನೆ ಇದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಇರಬೇಕಾಗಿದೆ: ಶಾಸಕ ಡಾ.ಅವಿನಾಶ ಜಾಧವ 

5 Crore Sanctioned for Chandrampalli Tourist Spot Says MLA Dr Avinash Jadhav grg

ಚಿಂಚೋಳಿ(ಡಿ.25): ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶಕ್ಕೆ ಒಳಪಟ್ಟಿರುವ ಚಂದ್ರಂಪಳ್ಳಿ ಜಲಾಶಯ ಹತ್ತಿರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗಾಗಿ ಪ್ರವಾಸಿತಾಣ ಮಾಡುವುದಕ್ಕಾಗಿ ಸರ್ಕಾರದಿಂದ 5 ಕೋಟಿ ರು. ಮಂಜೂರಾಗಿದೆ ಎಂದು ಶಾಸಕ ಡಾ.ಅವಿನಾಶ ಜಾಧವ ಹೇಳಿದರು. ತಾಲೂಕಿನ ಚಿಕ್ಕನಿಂಗದಳ್ಳಿ ಗ್ರಾಮದಲ್ಲಿ ತಾಲೂಕು ವನ್ಯಜೀವಿಧಾಮ, ಗ್ರಾಮ ಅರಣ್ಯಸಮಿತಿ ವತಿಯಿಂದ ಗ್ರೀನ್‌ ಇಂಡಿಯಾ ಮಿಷನ್‌ ಯೋಜನೆ ಅಡಿಯಲ್ಲಿ ವಿವಿಧ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲಬುರಗಿ ಜಿಲ್ಲೆಯಲ್ಲಿಯೇ ಅರಣ್ಯಪ್ರದೇಶ ಇರುವುದು ಕೇವಲ ಕುಂಚಾವರಂನಲ್ಲಿ ಮಾತ್ರ. ಅರಣ್ಯದ ಬಗ್ಗೆ ಗ್ರಾಮಸ್ಥರಿಗೆ ಕಾಳಜಿ ಇರಬೇಕು. ಅರಣ್ಯ ಪ್ರದೇಶದಿಂದ ನಮಗೇನು ಪ್ರಯೋಜನೆ ಇದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಇರಬೇಕಾಗಿದೆ. ಕುಂಚಾವರಂ ವನ್ಯಜೀವಿಧಾಮ ಅರಣ್ಯ ಪ್ರದೇಶದಲ್ಲಿ ಅತ್ಯಂತ ಸುಂದರ ಪ್ರವಾಸಿತಾಣಗಳನ್ನು ನಾವು ನೋಡಬಹುದಾಗಿದೆ. ಕುಂಚಾವರಂ ವನ್ಯಜೀವಿಧಾಮ ಮತ್ತು ಪ್ರವಾಸಿತಾಣ ಚಂದ್ರಂಪಳ್ಳಿ, ಗೊಟ್ಟಂಗೊಟ್ಟ, ಎತ್ತಪೋತ ಜಲಧಾರೆ ಬೆಳಕಿಗೆ ಬಂದಿವೆ ಎಂದು ಶಾಸಕರು ಹರ್ಷವ್ಯಕ್ತಪಡಿಸಿದರು.

KALABURAGI CRIME: ಮತ್ತಿಬ್ಬರು ರೌಡಿ ಶೀಟರ್‌ ಗಡಿಪಾರು

ಐನಾಪೂರ ಏತನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ತಾಲೂಕಿನಲ್ಲಿ ಹರಿಯುವ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಅನೇಕ ಕಡೆಗಳಲ್ಲಿ ಬ್ರಿಡ್ಜ್‌ ಕಮ ಬ್ಯಾರೇಜ್‌ ನಿರ್ಮಿಸಲಾಗಿದೆ. ಬ್ಯಾರೇಜ ನಿರ್ಮಾಣದಿಂದಾಗಿ ನೀರಿನ ಅಂರ್ತಜಲಮಟ್ಟಹೆಚ್ಚುವುದರಿಂದ ಗಿಡಮರಗಳಿಗೆ ಅನುಕೂಲವಾಗಲಿದೆ. ಅರಣ್ಯ ಇಲಾಖೆಯಿಂದ ನಡೆಸುತ್ತಿರುವ ಹೊಲಿಗೆ, ಕಂಪ್ಯೂಟರ್‌ ಮತ್ತು ವಾಹನ ಚಾಲನಾ ತರಬೇತಿಯಿಂದ ತಮ್ಮ ಆರ್ಥಿಕ ಜೀವನಮಟ್ಟಸುಧಾರಣೆ ಆಗಲಿದೆ ಎಂದರು.

ವನ್ಯಜೀವಿ ವಲಯ ಅರಣ್ಯಾ​ಧಿಕಾರಿ ಸಂಜೀವಕುಮಾರ ಚವ್ಹಾಣ ಮಾತನಾಡಿ, ಅರಣ್ಯ ಇಲಾಖೆಯಿಂದ ನಿರುದ್ಯೋಗ ಯುವ ಜನರಿಗೆ ಗ್ರಾಮ ಅರಣ್ಯ ರಕ್ಷಣಾ ಸಮಿತಿ ಮೂಲಕ ಹೊಲಿಗೆ, ಕಂಪ್ಯೂಟರ, ವಾಹನ ಚಾಲನೆ ತರಬೇತಿ ಕೊಡಲಾಗುತ್ತಿದೆ. ಕುಂಚಾವರಂ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಒಟ್ಟು 34 ಗ್ರಾಮ ಅರಣ್ಯರಕ್ಷಣಾ ಸಮಿತಿ ಇವೆ. ಇವುಗಳಲ್ಲಿ ಚಿಕ್ಕನಿಂಗದಳ್ಳಿ, ಜವಾಹರನಗರ ತಾಂಡಾ, ಕುಸರಂಪಳ್ಳಿ, ಸೇರಿಭಿಕನಳ್ಳಿ ತಾಂಡಾಗಳನ್ನು ಆಯ್ಕೆಗೊಳಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯಸಂರಕ್ಷಣಾ​ಕಾರಿ ಸುನೀಲ ಚವ್ಹಾಣ, ವಲಯ ಅರಣ್ಯಾ​ಕಾರಿ ನಟರಾಜ ರಾಠೋಡ,ತರಬೇತಿದಾರ ಲಕ್ಷಿತ್ರ್ಮಸಿಂಪಿ ಮಾತನಾಡಿದರು. ಜಗದೀಶಸಿಂಗ ಠಾಕೂರ,ಭೀಮಶೆಟ್ಟಿಮುರುಡಾ, ಲಕ್ಷತ್ರ್ಮಣ ಆವಂಟಿ, ದೇವೇಂದ್ರಪ್ಪ ಕುಸರಂಪಳ್ಳಿ, ಭಿಕ್ಕು ರಾಠೋಡ, ನಾಮದೇವ ಪವಾರ, ಪಾರ್ವತಮ್ಮ, ರಾಣೆಮ್ಮ, ರವಿರಾಠೋಡ, ಭಾರತಿ, ಪಿಎಸ್‌ಐ ಸುವಣಾ ಮಲಶೆಟ್ಟಿ, ಅಶೋಕ ಚವ್ಹಾಣ, ರಾಜೂಪವಾರ, ಪ್ರೇಮಸಿಂಗ ಜಾಧವ್‌, ಹಾಲೇಶ ಕೊರವೇರ, ನೀಲಕಂಠ ಇನ್ನಿತರಿದ್ದರು.

Latest Videos
Follow Us:
Download App:
  • android
  • ios