Kalaburagi Crime: ಮತ್ತಿಬ್ಬರು ರೌಡಿ ಶೀಟರ್‌ ಗಡಿಪಾರು

ರೌಡಿ ಶೀಟರ್‌ ಮುರ್ತುಜಾ ಅಲಿ ವಿರುದ್ಧ ಗಡಿಪಾರು ಕ್ರಮಕ್ಕೆ ಮುಂದಾದರೆ, ಇನ್ನೋರ್ವ ರೌಡಿ ಅದಿಲ್‌ಗೆ ಗೂಂಡಾ ಕಾಯ್ದೆಯಡಿ ಬೆಳಗಾವಿ ಸೆರೆಮನೆಗೆ ಅಟ್ಟಿದ್ದಾರೆ.

Two Rowdy Sheeters Exile From Kalaburagi grg

ಕಲಬುರಗಿ(ಡಿ.24): ಕಲಬುರಗಿ ಆಯುಕ್ತಾಲಯದ ಪೊಲೀಸರು ಇದೀಗ ಇನ್ನಿಬ್ಬರು ರೌಡಿ ಶೀಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಮನ ಸೆಳೆದಿದ್ದಾರೆ. ರೌಡಿ ಶೀಟರ್‌ ಮುರ್ತುಜಾ ಅಲಿ ವಿರುದ್ಧ ಗಡಿಪಾರು ಕ್ರಮಕ್ಕೆ ಮುಂದಾದರೆ, ಇನ್ನೋರ್ವ ರೌಡಿ ಅದಿಲ್‌ಗೆ ಗೂಂಡಾ ಕಾಯ್ದೆಯಡಿ ಬೆಳಗಾವಿ ಸೆರೆಮನೆಗೆ ಅಟ್ಟಿದ್ದಾರೆ. ಅಶೋಕ್‌ ನಗರ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿನ ರೌಡಿ ಶೀಟರ್‌, ಪೊಲೀಸ್‌ ಕಾಲೋನಿ ನಿವಾಸಿ ಮುರ್ತುಜಾ ಅಲಿ ತಂದೆ ಮೊಹ್ಮದ್‌ ಅಲಿ ರೋತೆ (26) ಎಂಬಾತನಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಮುರ್ತುಜಾ ಅಲಿ ಸಾರ್ವಜನಿಕರೊಂದಿಗೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುವುದು, ಕೊಲೆ, ಕೊಲೆಗೆ ಪ್ರಯತ್ನ, ದೊಂಬಿಯಂತಹ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪ ಎದುರಿಸುತ್ತಿದ್ದಾನೆ. ತನ್ನ ಸಹಚರರೊಂದಿಗೆ ಕೂಡಿಕೊಂಡು ಸಾರ್ವಜನಿಕರಿಗೆ ಹೆದರಿಸಿ ಹಲ್ಲೆ ಮಾಡುವುದು ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಆತನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರ ಪೋಲಿಸ್‌ ಆಯುಕ್ತಾಲಯದ ವ್ಯಾಪ್ತಿಯಿಂದ ಕೋಲಾರ ಜಿಲ್ಲೆ ಮಾಲೂರು ಪೋಲಿಸ್‌ ಠಾಣೆಯ ವ್ಯಾಪ್ತಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ.

Davanagere Crime: ಶಾದಿ ಮರ್ಡರ್: ನಿಖಾ ಆಗಲಿಲ್ಲ ಅಂತ ಚಿಕ್ಕಮ್ಮನ ಮಗಳನ್ನೇ ಕೊಂದು ಬಿಟ್ಟ!

ಗೂಂಡಾ ಕಾಯ್ದೆಯಡಿ ಬೆಳಗಾವಿ ಜೈಲಿಗೆ:

ಕಲಬುರಗಿ ನಗರದ ಅಶೋಕ್‌ ನಗರ ಪೋಲಿಸ್‌ ಠಾಣೆ ವ್ಯಾಪ್ತಿಯ ಕುಖ್ಯಾತ ರೌಡಿ ಶೀಟರ್‌ ಆದಿಲ್‌ ಅಲಿಯಾಸ್‌ ಸೈಯದ್‌ ತಂದೆ ಸೈಯದ್‌ ಶೌಕತ್‌ (32) ಎಂಬಾತನಿಗೆ ಗುಂಡಾ ಕಾಯ್ದೆಯಡಿ ಕ್ರಮ ಜರುಗಿಸಿ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಒಂದು ವರ್ಷದ ಅವಧಿಗೆ ಬಂಧನದಲ್ಲಿ ಇಡಲು ಆದೇಶಿಸಲಾಗಿದೆ.

ಆದಿಲ್‌ ತನ್ನ ಸಹಚರರೊಂದಿಗೆ ಕೂಡಿಕೊಂಡು ಜನನಿಬೀಡ ಪ್ರದೇಶವಾದ ನಗರದ ಕೇಂದ್ರ ಬಸ್‌ ನಿಲ್ದಾಣ, ಶರಣಬಸವೇಶ್ವರ ಕಾಲೇಜಿನ ಆವರಣ ಮತ್ತು ತಾಜನಗರದ ಮುಸ್ಲಿಂ ಸಂಘದಲ್ಲಿ ಅಪಾಯಕಾರಿ ಮಾರಕಾಸ್ತ್ರಗಳನ್ನು ಹಿಡಿದು ಮೂರು ಜನ ಸಾರ್ವಜನಿಕರನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಅಲ್ಲದೇ ಸಾಕ್ಷಿದಾರರಿಗೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕುವುದು ಮತ್ತು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡುವವನಾಗಿರುವುದರಿಂದ ಆತನ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕ್ರಮ ಜರುಗಿಸಿ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಒಂದು ವರ್ಷದ ಅವಧಿಗೆ ಬಂಧನದಲ್ಲಿ ಇಡಲು ಆದೇಶಿಸಲಾಗಿದೆ.

Latest Videos
Follow Us:
Download App:
  • android
  • ios