ಚಾಮರಾಜನಗರ(ಆ.16): ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ಬಳಿ ಶುಕ್ರವಾರ ಬೆಳಗ್ಗೆ  ನಡೆದಿದೆ.

ಮೈಸೂರಿನಲ್ಲಿ ಡಾಟಾ ಬೇಸ್ ಕಂಪನಿ‌ ನಡೆಸುತ್ತಿದ್ದ  ಭಟ್ಟಾಚಾರ್ಯ ಹಾಗೂ ಓಂಕಾರ್ ಪ್ರಸಾದ್ ಅವರ ಕುಟುಂಬ ಗುರುವಾರ ನಂದಿ ರೆಸಿಡೆನ್ಸಿನಲ್ಲಿ ‌ಉಳಿದುಕೊಂಡಿತ್ತು. ರಾತ್ರಿ ಎರಡು ಗಂಟೆಯ ವೇಳೆಗೆ ರೆಸಾರ್ಟ್‌ ಬಳಿಯ ಜಮೀನಿಗೆ ಬಂದು ಪಿಸ್ತೂಲ್ ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪರಸ್ತ್ರೀ ವ್ಯಾಮೋಹ: ಇಬ್ಬರು‌ ಹೆಣ್ಣು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದು, ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಮೈಸೂರಿನ ದಟ್ಟಗಳ್ಳಿ ವಾಸಿಗಳಾದ
ಓಂಕಾರ ಪ್ರಸಾದ್( 35) ಹೇಮಾಲತಾ ( 50) ನಾಗರಾಜಭಟ್ರು(60)ಸೇರಿದಂತೆ ಐವರು ಸಾವನಪ್ಪಿದ್ದಾರೆ.

ಮದ್ವೆ ಈಗ ಬೇಡ ಅಂದಿದ್ದಕ್ಕೆ ಕೊಲೆಗೆ ಯತ್ನಿಸಿದ ಪಾಗಲ್ ಪ್ರೇಮಿ..!

ವಾರದ ಹಿಂದೆಯೇ ಮನೆ ಬಿಟ್ಟಿರುವ ಓಂಪ್ರಕಾಶ್

ವಾರದ ಹಿಂದೆಯೇ ಮನೆ ಬಿಟ್ಟಿದ್ದ ಓಂಪ್ರಕಾಶ್ ಮನೆ ಶ್ರೀ ಅನಂತ ಪದ್ಮನಾಭ ನಿಲಯ ಬಿಕೋ ಎನ್ನುತ್ತಿದೆ. ಮನೆಯಲ್ಲಿ ಯಾರೊಬ್ಬರೂ ವಾಸವಿಲ್ಲ.‌ ಆತ್ಮಹತ್ಯೆಗೆ ಆರು ತಿಂಗಳ ಹಿಂದೆಯೇ ಪ್ಲ್ಯಾನ್ ಮಾಡಿಕೊಂಡಿದ್ದರಾ ಎಂಬ ಸಂದೇಹವೂ ಮೂಡಿದೆ. ಜಿ.ವಿ‌. ಇನ್‌ಫೋಟೆಕ್ ಕಂಪನಿ ನಡೆಸುತ್ತಿದ್ದ ಓಂಪ್ರಕಾಶ್ ದುಬಾರಿ ವಸ್ತುಗಳು, ಪೀಠೋಪಕರಣವನ್ನೂ ಮಾರಾಟ ಮಾಡಿದ್ದರು. ಕಂಪನಿ ವಸ್ತುಗಳೇ 5 ಕೋಟಿ ರೂ.ಗಳಿಗೆ ಸೇಲ್ ಆಗಿತ್ತು. ಕಂಪನಿ ಲಾಸ್ ಆಗಿದ್ದ ಕಾರಣಕ್ಕಾಗಿ ದುಬೈ ಮೂಲದ ವ್ಯಕ್ತಿಗೆ ವಸ್ತುಗಳನ್ನು ಮಾರಾಟ ಮಾಡಿದ್ದರು.

ಪೇಪರ್, ಹಾಲು ಬೇಡ ಎಂದಿದ್ರು:

ವಾರದಿಂದ ಹಿಂದೆಯೇ ಮನೆಗೆ ಪೇಪರ್, ಹಾಲು ಹಾಕುವವರಲ್ಲಿ ಹಾಲು, ಪೇಪರ್ ಬೇಡ ಎಂದು ಹೇಳಿದ್ದರು. ಕುಟುಂಬ ಸದಸ್ಯರು ಜೊತೆಗೇ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಕ್ಕೆ ಕೊಲೆ ಬೆದರಿಕೆ ಇತ್ತಾ ಎಂಬ ಸಂಶಯ ಮೂಡಿದೆ. ಓಂಪ್ರಕಾಶ್ ಸಾದಾ ಐವರು ಗನ್ ಮ್ಯಾನ್ ಗಳನ್ನು ಇಟ್ಟುಕೊಂಡಿದ್ದರು.

ಮಗ ಆಡುತ್ತಿದ್ದರೂ ಗನ್‌ ಮ್ಯಾನ್‌ಗಳು ಜೊತೆಗಿರುತ್ತಿದ್ರು:

ಮೃತ ಓಂಪ್ರಕಾಶ್  ಐದು ವರ್ಷ ಕಳೆದರೂ ಮಗನನ್ನು ಶಾಲೆಗೆ ದಾಖಲಿಸಿರಲಿಲ್ಲ. ಮಗನು ಮನೆ ಬಳಿ ಆಟವಾಡುತಿದ್ದಾಗಲೂ ಗನ್‌ಮ್ಯಾನ್‌ಗಳು ಜೊತೆಗೇ ಇರುತ್ತಿದ್ದರು. ಕಳೆದೊಂದು ವಾರಕ್ಕೂ ಹೆಚ್ಚು ದಿನಗಳಿಂದ ಮನೆಯಿಂದ ಹೊರ ಹೋಗಿದ್ದರು. ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದರು. ಮೃತ ಓಂಪ್ರಕಾಶ್ ಪತ್ನಿ ನಿಖಿತಾ ಐದು ತಿಂಗಳ ಗರ್ಭಿಣಿ ಎನ್ನಲಾಗ್ತಿದೆ‌. ಘಟನಾ ಸ್ಥಳಕ್ಕೆ ಮೃತರ ಸಂಬಂಧಿಕರು ಭೇಟಿ ನೀಡಿದ್ದಾರೆ. ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮೃತ ದೇಹಗಳು ಹಸ್ತಾಂತರವಾಗಲಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

"