ತುಮಕೂರು(ಆ.16): ಈಗಲೇ ಮದುವೆ ಬೇಡ ಅಂದಿದ್ದಕ್ಕೆ ಪಾಗಲ್‌ ಪ್ರೇಮಿಯೊಬ್ಬ ಪ್ರೇಯಸಿಯನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನರೆ ತುಮಕೂರಿನಲ್ಲಿ ನಡೆದಿದೆ. ಈಗ ಮದ್ವೆ ಬೇಡ ಅಂದಿದ್ದಕ್ಕೇ ಪಾಗಲ್ ಪ್ರೇಮಿ ಹುಚ್ಚಾಟ ತೋರಿಸಿಬಿಟ್ಟಿದ್ದಾನೆ. ಅದೃಷ್ಟವಶಾತ್ ಯುವತಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಯುವತಿ ಚಿತ್ರದುರ್ಗದಲ್ಲಿ ನರ್ಸಿಂಗ್ ಓದುತ್ತಿದ್ದಳು. ಆಕೆ ಹಾಗೂ ಮದಲೂರು ಜಿಲ್ಲಾ ಪಂಚಾಯತು ಸದಸ್ಯೆ ಲಕ್ಷ್ಮೀದೇವಮ್ಮ ಎಂಬವರ ಮಗ ಮಹಾವೀರ್ ಭಕ್ತ ಗುರುನಾನಕ್ ಪರಸ್ಪರ ಪ್ರೀತಿಸುತ್ತಿದ್ದರು.

ಪರಸ್ತ್ರೀ ವ್ಯಾಮೋಹ: ಇಬ್ಬರು‌ ಹೆಣ್ಣು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಯುವತಿಯನ್ನು ಮದಲೂರು ಬಳಿ ಇರುವ ಲಿಂಗದಹಳ್ಳಿ ಗೇಟ್ ಬಳಿ ಕರೆದೊಯ್ದ ಮಹಾವೀರ್‌ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಾನೆ.  ಯುವತಿ ಈಗಲೇ ಮದುವೆ ಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ಪಾಗಲ್ ಪ್ರೇಮಿ ವೇಲ್ ಬಿಗಿದು ಕೊಲ್ಲಲು ಪ್ರಯತ್ನಿಸಿದ್ದಾನೆ.

ಯುವತಿ ಸತ್ತಿದ್ದಾಳೆಂದು ಸ್ಥಳದಿಂದ ಕಾಲ್ಕಿತ್ತ ಪಾಗಲ್ ಪ್ರೇಮಿ:

ಸಡನ್ ದಾಳಿಯಿಂದ ಶಾಕ್‌ಗೆ ಒಳಗಾಗಿದ್ದ ಯುವತಿ ಪ್ರಜ್ಷೆ ತಪ್ಪಿ ಬಿದ್ದಿದ್ದಾಳೆ. ಯುವತಿ ಸತ್ತಿದ್ದಾಳೆಂದು ಮಹಾವೀರ್ ಓಡಿ ಹೋಗಿದ್ದ. ಕೆಲ ಸಮಯದ ಬಳಿಕ ಎಚ್ಚರಗೊಂಡಿದ್ದ ಯುವತಿ‌ ತಮ್ಮ ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಳು. 

ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ನಟಿ!

ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಶಿರಾ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.