ಬೆಂಗಳೂರು, (ಆ.12): ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಶ್ರಿನಗರ ಬಸ್ ನಿಲ್ದಾಣದ ಬಳಿಯ ಮನೆಯಲ್ಲಿ ನಡೆದಿದೆ. 

ಮೃತರನ್ನು ತಾಯಿ ರಾಜೇಶ್ವರಿ ( 43), ಮಕ್ಕಳಾದ ಮಾನಸ (17 ) ಹಾಗೂ ಭೂಮಿಕ (15) ಎಂದು ಗುರುತಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಹನುಮಂತನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ನಟಿ!

ಕೌಟುಂಬಿಕ ಕಲಹ ಹಿನ್ನೆಲೆ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಂಡ ಹಾಗೂ ಹೆಂಡತಿ ನಡುವೆ ಪದೇ ಪದೇ ಜಗಳ ನಡೆದಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 

ಹೆಂಡ್ತಿ-ಮಕ್ಕಳ ಸಾವಿಗೆ ಕಾರಣವಾದ ಮನೆ ಯಜಮಾನ
ಸಿದ್ದಯ್ಯ (ರಾಜೇಶ್ವರಿಯ ಗಂಡ) ಪರಸ್ತ್ರಿಯಿಂದಿಗೆ ಅಕ್ರಮಸಂಬಂಧ ಹೊಂದಿದ್ದ. ಈ ಕಾರಣಕ್ಕೆ  ಪ್ರತಿನಿತ್ಯ ಮನೆಯಲ್ಲಿ ಸಿದ್ದಯ್ಯ, ಹೆಂಡತಿ ಹಾಗೂ ಮಕ್ಕಳ ನಡುವೆ ಜಗಳ ಮಾಡುತ್ತಿದ್ದ. ಇದ್ರಿಂದ ಬೇಸತ್ತು ಹೆಂಡತಿ-ಮಕ್ಕಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ರೋಹಿಣಿ ಸೆಪೆಟ್ ತಿಳಿಸಿದ್ದಾರೆ.

ಮೊಬೈಲ್ ಸ್ಟೇಟಸ್‌ನಲ್ಲಿ ಡೆತ್ ನೋಟ್
ಎಲ್ಲರಿಗೂ ಒಳ್ಳೆ ತಂದೆ ಸಿಗಬೇಕು. ನಮ್ಮ ಲೈಫ್‌ ಅನ್ನು  ಹಾಳು ಮಾಡಿಬಿಟ್ಟ ನಮ್ ಸಾವಿಗೆ ಸಿದ್ದ (ತಂದೆ)ನೇ ಕಾರಣ ಎಂದು ಮಾನಸ ಮೊಬೈಲ್ ಸ್ಟೇಟಸ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಬಗ್ಗೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.