Mysuru: ಅನಿಲ ಸೋರಿಕೆ: 13 ಮಕ್ಕಳು ಸೇರಿ 40 ಮಂದಿ ಅಸ್ವಸ್ಥ

*   ಮೈಸೂರಿನ ಯಾದವಗಿರಿ ರೈಲ್ವೆ ಕ್ವಾಟ್ರಸ್‌ನಲ್ಲಿ ನಡೆದ ಘಟನೆ
*   ಕ್ಲೋರಿನ್‌ ಅನಿಲ ಸೋರಿಕೆಯಾದ ಸಿಲಿಂಡರ್‌
*   ಅನಿಲ ಸೋರಿಕೆ ತಡೆಯಲು ಸಜ್ಜಾಗುತ್ತಿರುವ ಸಿಬ್ಬಂದಿ
 

40 People Sick Due to Gas Leakage in Mysuru grg

ಮೈಸೂರು(ಮಾ.08):  ಕ್ಲೋರಿನ್‌ ಸಿಲಿಂಡರ್‌ನಲ್ಲಿದ್ದ(Chlorine Cylinder) ಅನಿಲ ಸೋರಿಕೆಯಾಗಿ 40 ಮಂದಿ ಅಸ್ವಸ್ಥರಾಗಿರುವ ಘಟನೆ ಮೈಸೂರಿನ(Mysuru) ಯಾದವಗಿರಿಯ ರೈಲ್ವೆ ಕ್ವಾಟ್ರಸ್‌ನಲ್ಲಿ ಸೋಮವಾರ ನಡೆದಿದೆ.
ನೀರು ಶುದ್ಧೀಕರಣಕ್ಕಾಗಿ ಬಳಸುತ್ತಿದ್ದ ಕ್ಲೋರಿನ್‌ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ(Gas Leakage) 13 ಮಕ್ಕಳು ಸೇರಿದಂತೆ 40 ಮಂದಿ ಅಸ್ವಸ್ಥರಾಗಿದ್ದು, ಇವರನ್ನು ಕೆ.ಆರ್‌. ಆಸ್ಪತ್ರೆ, ಮಕ್ಕಳನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಆಕ್ಸಿಜನ್‌(Oxygen) ನೀಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, 24 ಗಂಟೆ ಪರಿವೀಕ್ಷಣೆಯಲ್ಲಿ ಇರಿಸಲಾಗಿದೆ.

ಯಾದವಗಿರಿಯಲ್ಲಿರುವ ರೈಲ್ವೆ ಕ್ವಾಟ್ರಸ್‌ನಲ್ಲಿ ಮಧ್ಯಾಹ್ನ 3ಕ್ಕೆ ನೀರು ಶುದ್ಧೀಕರಣಕ್ಕಾಗಿ ಕೊಠಡಿಯೊಂದರಲ್ಲಿ ಇರಿಸಲಾಗಿದ್ದ ಕ್ಲೋರಿನ್‌ ಸಿಲಿಂಡರ್‌ ವಾಲ್‌ವನಲ್ಲಿ ಸೋರಿಕೆ ಆಗಿದೆ. ಈ ಅನಿಲವು ವಾತಾವರಣದಲ್ಲಿ ಬೆರೆತು ಅಕ್ಕಪಕ್ಕದ ಮನೆಯಲ್ಲಿದ್ದ ಮಕ್ಕಳು(Children), ವಯಸ್ಕರು ಸೇರಿದಂತೆ 40 ಮಂದಿ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಆಂಬ್ಯುಲೆನ್ಸ್‌ಗಳ ಮೂಲಕ ರೈಲ್ವೆ ಆಸ್ಪತ್ರೆಗಳಿಗೆ ದಾಖಲಿಸಿ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಲಾಯಿತು. ನಂತರ ಮಕ್ಕಳನ್ನು ಚೆಲುವಾಂಬ, ವಯಸ್ಕರನ್ನು ಕೆ.ಆರ್‌. ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯಲ್ಲಿ ಗ್ಯಾಸ್ ಲೀಕ್ ಆಗುತ್ತಿದ್ದರೆ, ಕೂಡಲೇ ಹೀಗ್ ಮಾಡಿ

ಅನಿಲ ಸೋರಿಕೆ ತಡೆಯಲು ಅಗ್ನಿಶಾಮಕ ದಳ(Fire Department) ಮತ್ತು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಪ್ರಯತ್ನ ಮುಂದುವರೆಸಿದ್ದು, ಘಟನಾ ಸ್ಥಳದ ಸುತ್ತಮುತ್ತಾ 200 ಮೀಟರ್‌ವರೆಗೂ ಸೀಲ್‌ ಮಾಡಲಾಗಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ದಾಸಪ್ಪ ವೃತ್ತದಿಂದ ಆಕಾಶವಾಣಿವರೆಗೆ ಕೆಆರ್‌ಎಸ್‌ ರಸ್ತೆಯನ್ನು ಬಂದ್‌ ಮಾಡಲಾಗಿದೆ. ರೈಲ್ವೆ ಕ್ವಾಟ್ರಸ್‌ಗೆ ತಜ್ಞರು ತಂಡವು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರೈಲ್ವೆ ಕ್ವಾಟ್ರಸ್‌ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅನಿಲ ಸೋರಿಕೆಯಾದ ಸ್ಥಳದ ಅಕ್ಕಪಕ್ಕದಲ್ಲಿರುವ ಕೆಲವು ಮನೆಯಲ್ಲಿದ್ದವರನ್ನು ಖಾಲಿ ಮಾಡಿಸಲಾಗಿದೆ.

ಏನಾಯಿತು?

ಕೆಆರ್‌ಎಸ್‌ ರಸ್ತೆ ಯಾದವಗಿರಿ ವಾಣಿ ವಿಲಾಸ ಕಾರ್ಯಾಗಾರ ಮುಂಭಾಗದ ರಸ್ತೆಯಲ್ಲಿರುವ ರೈಲ್ವೆ ಕ್ವಾಟ್ರಸ್‌ನ ಆವರಣದಲ್ಲಿ ಮಧ್ಯಾಹ್ನ 3ಕ್ಕೆ ಕೊಠಡಿಯೊಂದರಲ್ಲಿ ಇರಿಸಿದ್ದ ಕ್ಲೋರಿನ್‌ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆ. ಇದೇ ವೇಳೆಗೆ ಶಾಲೆ ಮುಗಿಸಿ ಆಟೋದಲ್ಲಿ ಮನೆಗೆ ಬಂದ ಮಕ್ಕಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.

ನಂತರ ಕ್ವಾಟ್ರಸ್‌ನಲ್ಲಿದ್ದ ಮಹಿಳೆಯರು(Women), ಪುರುಷರು ಸಹ ಅಸ್ವಸ್ಥರಾಗಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಅಗ್ನಿಶಾಮಕ ವಾಹನ ಬಳಸಿ ಅನಿಲ ಸೋರಿಕೆಯಾಗುತ್ತಿದ್ದ ಸ್ಥಳಕ್ಕೆ ನೀರನ್ನು ಪ್ರೋಕ್ಷಣೆ ಮಾಡಿದರು. ಈ ವೇಳೆ ಕೆಲವು ಅಗ್ನಿಶಾಮಕ ದಳದ ಸಿಬ್ಬಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಶಿರಾಡಿ ಘಾಟ್ ಬಳಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ; ಸಂಚಾರ ಮಾರ್ಗ ಬದಲು!

ಈ ವಿಚಾರ ತಿಳಿದು ಪೊಲೀಸರು(Police) ಕೆಆರ್‌ಎಸ್‌ ರಸ್ತೆಯನ್ನು ಬಂದ್‌ ಮಾಡಿ, ವಾಹನ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಿದ್ದಾರೆ. ಘಟನೆ ಸ್ಥಳದ ಸುತ್ತಮುತ್ತಾ ಸಾರ್ವಜನಿಕರು ಯಾರು ಹೋಗದಂತೆ ಪೊಲೀಸರು ತಡೆದಿದ್ದಾರೆ. ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತಂದಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ವಾತಾವರಣದಲ್ಲಿ ಕ್ಲೋರಿನ್‌ ಅಂಶ ಇರುವುದರಿಂದ ಆ ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮಂಗ್ಳೂರಿನ ಸೀ ಫುಡ್‌ ಘಟಕದಲ್ಲಿ ಅನಿಲ ಸೋರಿಕೆ: 26 ಮಂದಿ ಅಸ್ವಸ್ಥ

ಮಂಗಳೂರು: ಮಂಗಳೂರಿನ(Mangaluru) ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸೀ ಫುಡ್‌ ಸಂಸ್ಕರಣಾ ಘಟಕದಲ್ಲಿ(Sea Food Processing Plant) ಅಮೋನಿಯಾ ಸೋರಿಕೆಯಾದ(Ammonia Leakage) ಘಟನೆ ಜ.11 ರಂದು ಸಂಭವಿಸಿತ್ತು.. ಆದರೆ ಯಾರಿಗೂ ಪ್ರಾಣಾಪಾಯ ಸಂಭವಿಸಿರಲಿಲ್ಲ. 

ಎವರೆಸ್ಟ್‌ ಸೀಫುಡ್‌ ಫ್ಯಾಕ್ಟರಿಯಲ್ಲಿ(Everest Seafood Factory) ಬೆಳಗ್ಗೆ ಅಮೋನಿಯಾ ರಾಸಾಯನಿಕ ಸೋರಿಕೆಯಾಗಿತ್ತು. ತಕ್ಷಣ ಫ್ಯಾಕ್ಟರಿಯಲ್ಲಿ ಸೈರನ್‌ ಮೊಳಗಿಸಿ ಅಲರ್ಟ್‌ ಮಾಡಲಾಯಿತು. ಇದರಿಂದಾಗಿ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದ(Employees) ನೌಕರರು ತುರ್ತಾಗಿ ಹೊರಗೆ ಬಂದಿದ್ದರು. ಈ ಫ್ಯಾಕ್ಟರಿಯಲ್ಲಿ ಸುಮಾರು 80 ಮಂದಿ ಉದ್ಯೋಗಿಗಳಿದ್ದು, ಇದರಲ್ಲಿ 26 ಮಂದಿ ಅಸ್ವಸ್ಥಗೊಂಡಿದ್ದಾರೆ(Unwell). ಅವರನ್ನು ಸ್ಥಳೀಯ ಮುಕ್ಕ ಖಾಸಗಿ ಆಸ್ಪತ್ರೆಗೆ(Hospital) ಸೇರಿಸಲಾಗಿತ್ತು. ಇವರಲ್ಲಿ 10 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದರು. 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಅಸ್ವಸ್ಥಗೊಂಡವರಲ್ಲಿ ಕರ್ನಾಟಕ(Karnataka) ಸೇರಿದಂತೆ ವಿವಿಧ ರಾಜ್ಯದವರಿದ್ದರು.
 

Latest Videos
Follow Us:
Download App:
  • android
  • ios