ಬೀದರ್[ಮೇ.19]: ತಡ ರಾತ್ರಿ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಿಸಲು ಹೋದ ನಾಲ್ವರು ಯುವಕರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಬೀದರ್ ಜಿಲ್ಲೆ  ಹುಮನಾಬಾದ ತಾಲೂಕಿನ ಮಂಗಲಗಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಚಿನ ಹಣಮಂತ, ಅರುಣಕುಮಾರ ಕಾಶಿನಾಥ, ಗುರುನಾಥ  ವಿಠಲ,  ರಘುವೂರ ಭೀಮಶ್ಯಾ ಎಂಬ ನಾಲ್ವರು ಯುವಕರು ಕೊನೆಯುಸಿರೆಳೆದಿದ್ದಾರೆ.  ಮೃತ ಯುವಕರೆಲ್ಲರೂ 18ರಿಂದ 19 ವರ್ಷ ವಯಸ್ಸಿನವರು. 

ಹುಟ್ಟು ಹಬ್ಬ ಆಚರಿಸಲು ಇವರೆಲ್ಲರೂ ತಡರಾತ್ರಿ ಹೆದ್ದಾರಿ ಪಕ್ಕಕ್ಕೆ ಬಂದ ಸಂದರ್ಭದಲ್ಲಿ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.  ಮನ್ನಾಖೇಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.