Asianet Suvarna News Asianet Suvarna News

ಕರ್ತವ್ಯದ ಸಂದರ್ಭ ಸೋಂಕಿತರಾಗಿದ್ದ 4 ಮಂದಿ ಪೊಲೀಸ್ ಡಿಸ್ಚಾರ್ಜ್

ಕೊರೋನಾ ವಾರಿಯರ್‌ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕೊರೋನಾ ಸೋಂಕಿತರಾಗಿದ್ದ 4 ಮಂದಿ ಪೊಲೀಸ್‌ ಸಿಬ್ಬಂದಿಗಳು ಇದೀಗ ಗುಣಮುಖರಾಗಿದ್ದು, ಅವರು ಶನಿವಾರ ಉಡುಪಿಯ ಕೊವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

4 Police men infected by covid19 during duty discharged from hospital in udupi
Author
Bangalore, First Published May 31, 2020, 7:24 AM IST
  • Facebook
  • Twitter
  • Whatsapp

ಉಡುಪಿ(ಮೇ 31): ಕೊರೋನಾ ವಾರಿಯರ್‌ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕೊರೋನಾ ಸೋಂಕಿತರಾಗಿದ್ದ 4 ಮಂದಿ ಪೊಲೀಸ್‌ ಸಿಬ್ಬಂದಿಗಳು ಇದೀಗ ಗುಣಮುಖರಾಗಿದ್ದು, ಅವರು ಶನಿವಾರ ಉಡುಪಿಯ ಕೊವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಪಶ್ಚಿಮ ವಲಯ ಪೊಲೀಸ್‌ ಮಹಾನಿರೀಕ್ಷಕ ದೇವಜ್ಯೋತಿ ರಾಯ್‌ ಅವರು ಆಗಮಿಸಿ ಬಿಡುಗಡೆಯಾದ ಪೊಲೀಸರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ನಂತರ ಬಿಡುಗಡೆಯಾದ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಬೇಗ ಗುಣಮುಖರಾಗಿರುವುದಕ್ಕೆ ಖುಷಿ ಇದೆ. ಅಪಾಯದ ನಡುವೆಯೇ ಕೆಲಸ ಮಾಡಿದ ತಮ್ಮ ಬಗ್ಗೆ ಇಲಾಖೆಗೆ ಹೆಮ್ಮೆ ಇದೆ. ಮತ್ತೆ ಇಲಾಖೆಗೆ ಬಂದು ಕರ್ತವ್ಯಕ್ಕೆ ಹಾಜರಾಗಿ, ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಹೇಳಿದರು.

ಮಂಗಳೂರಿನಲ್ಲಿ ಮಿಡತೆ ಹಿಂಡು ಪ್ರತ್ಯಕ್ಷ: ಹಸಿರೆಲೆಗಳು ಖಾಲಿ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌, ಎಎಸ್ಪಿ ಕುಮಾರಚಂದ್ರ, ಕೋವಿಡ್‌ ಆಸ್ಪತ್ರೆಯ ನೋಡಲ್‌ ಅಧಿಕಾರಿ ಡಾ. ಶಶಿಕಿರಣ್‌ ಉಮಾಕಾಂತ್‌ ಮುಂತಾದವರು ಮೊದಲಾದವರಿದ್ದರು.

ಏಳೇ ದಿನಗಳಲ್ಲಿ ಬಿಡುಗಡೆ: ಸರ್ಕಾರದ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ ಸೋಂಕಿತರನ್ನು 7 ದಿನಗಳೊಳಗೆ 2 ಬಾರಿ ಪರೀಕ್ಷೆಗೊಳಪಡಿಸಿ, ಸೋಂಕು ಇಲ್ಲ ಎಂದು ವರದಿ ಬಂದರೆ, ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗುತ್ತದೆ. ಅದರಂತೆ ಮೇ 23ರಂದು ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಿ ಸೋಂಕಿದೆ ಎಂದು ದೃಢವಾಗಿದ್ದ ಈ 4 ಮಂದಿ ಪೊಲೀಸರಿಗೆ ಇದೀಗ ಸೋಂಕು ಇಲ್ಲ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯಿಂದ 45 ಜನ ಬಿಡುಗಡೆ

ಈ ಪೊಲೀಸರು ವಾಸಿಸುತಿದ್ದ ಕೆಳಾರ್ಕಳಬೆಟ್ಟು, ವಡ್ಡರ್ಸೆ, ಕಾರ್ಕಳ ಮತ್ತು ಹೇರೂರುಗಳಲ್ಲಿ ಕಂಟೈನ್ಮೆಂಟ್‌ ವಲಯ ಮಾಡಲಾಗಿತ್ತು. ಈಗ ಈ ಪೊಲೀಸರು ಸೋಂಕುಮುಕ್ತರಾಗಿದ್ದರಿಂದ ಈ ಕಂಟೈನ್ಮೆಂಟ್‌ ವಲಯದ ನಿವಾಸಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

Follow Us:
Download App:
  • android
  • ios