ಮಂಗಳೂರು(ಮೇ 31): ಉಪ್ಪಿನಂಗಡಿ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಏರ ಎಂಬಲ್ಲಿ ಕೃಷಿಕರೊಬ್ಬರ ಜಾಗದಲ್ಲಿ ಹಸಿರು, ಕೆಂಪು, ಬಿಳಿ, ಕಪ್ಪು ಬಣ್ಣ ಮಿಶ್ರಿತವಾದ ಮಿಡತೆಯ ಗುಂಪೊಂದು ಶುಕ್ರವಾರ ಸಾಯಂಕಾಲ ಕಾಣಿಸಿಕೊಂಡಿದ್ದು ಹಸಿರೆಲೆಗಳನ್ನು ತಿಂದಿವೆ. ಮಿಡತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊಣಾಜೆ ಕಾಡಂಚಿನ ಪ್ರದೇಶದ ಏರ ಪ್ರದೇಶದ ರೈತ ವಿಶ್ವನಾಥ್‌ ಎಂಬವರ ತೋಟದ ಮರವೊಂದರಲ್ಲಿ ಶುಕ್ರವಾರ ಸಾಯಂಕಾಲ ಈ ಮಿಡತೆಯ ಹಿಂಡು ಕಾಣಿಸಿಕೊಂಡಿದೆ. ಶನಿವಾರ ಬೆಳಗ್ಗೆ ಇದೇ ಮರದಲ್ಲಿ ಹಕ್ಕಿಗಳು ಹಾರಾಡುತ್ತಿತ್ತು. ಆದರೆ ಮಿಡತೆಗಳು ಕಾಣಿಸಿಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯ ಹಾಗೂ ಕರ್ನಾಟಕದ ಗಡಿ ಭಾಗದ ಬೀದರ್‌ ಜಿಲ್ಲೆ ಮೊದಲಾದೆಡೆ ಕಾಣಿಸಿಕೊಂಡ ಮಿಡತೆಯ ಗಾತ್ರವನ್ನು ಇವುಗಳು ಹೋಲುತ್ತಿದ್ದು ಇದರಿಂದಾಗಿ ಈ ಭಾಗಕ್ಕೂ ಬೆಳೆಹಾನಿ ಮಾಡುವ ಮಿಡತೆಗಳು ದಾಳಿಗೈದಿವೆ ಎನ್ನುವ ಆತಂಕ ಈ ಭಾಗದ ರೈತರಲ್ಲಿ ಮನೆಮಾಡಿದೆ.

ಹಕ್ಕಿಗಳಿಂದ ಸಂಹರಿಸಲ್ಪಟ್ಟಿತೇ?:

ಶುಕ್ರವಾರ ಕಾಣಿಸಿದ ಮಿಡತೆಗಳ ಹಿಂಡು ಶನಿವಾರ ಬೆಳಗ್ಗೆ ವೇಳೆಗೆ ಕಣ್ಮರೆಯಾಗಿದ್ದು, ಸ್ಥಳದಲ್ಲಿ ಗಣನೀಯ ಸಂಖ್ಯೆಯ ಹಕ್ಕಿಗಳು ಕಾಣಿಸಿವೆ. ಮಿಡತೆಗಳನ್ನು ಹಕ್ಕಿಗಳು ಸಂಹರಿಸಿರುವ ಸಾಧ್ಯತೆ ಕಂಡುಬಂದಿದೆ. ಇದು ಕೃಷಿಕರ ಪಾಲಿಗೆ ಸ್ನೇಹಿಯಾಗಿರುವ ಸಾಧ್ಯತೆ ಕಂಡುಬಂದಿದೆ.

ಕರ್ತವ್ಯದ ಸಂದರ್ಭ ಸೋಂಕಿತರಾಗಿದ್ದ 4 ಮಂದಿ ಪೊಲೀಸ್ ಡಿಸ್ಚಾರ್ಜ್

‘ಮಿಡತೆಗಳ ಗುಂಪು ನಮ್ಮ ಜಾಗದ ಮರವೊಂದರಲ್ಲಿ ಇರುವುದು ಶುಕ್ರವಾರ ಸಾಯಂಕಾಲ ಗಮನಕ್ಕ ಬಂತು. ಶನಿವಾರ ಬೆಳಗ್ಗೆ ಈ ಮರದ ಸುತ್ತ ಸ್ಥಳಿಯವಾಗಿ ಕಾಣಿಸುವ ವಿವಿಧ ಜಾತಿಯ ಹಕ್ಕಿಗಳು ಹಾರಾಡುತ್ತಿತ್ತು. ಮಿಡತೆಗಳು ಇರಲಿಲ್ಲ. ಹಕ್ಕಿಗಳು ತಿಂದಿರುವ ಸಂಶಯವಿದೆ. ಮತ್ತೆ ಮಿಡತೆಗಳು ಬರಬಹುದು ಎಂಬ ಆತಂಕವಿದೆ’ ಎಂದು ಎಂದು ರೈತ ವಿಶ್ವನಾಥ್‌ ತಿಳಿಸಿದ್ದಾರೆ.