ಉಡುಪಿ ನಗರದ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯಿಂದ ಶನಿವಾರ 45 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡು, ಸಂತಸದಿಂದ ನಗುತ್ತಾ ಮನೆಗೆ ತೆರಳಿದರು.

ಉಡುಪಿ(ಮೇ 31): ನಗರದ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯಿಂದ ಶನಿವಾರ 45 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡು, ಸಂತಸದಿಂದ ನಗುತ್ತಾ ಮನೆಗೆ ತೆರಳಿದರು.

ಬಿಡುಗಡೆಗೊಂಡವರಲ್ಲಿ ಬಹುತೇಕ ಮಂದಿ ಮುಂಬೈ ಮತ್ತು ದುಬೈಯಿಂದ ವಾಪಸ್‌ ಬಂದವರಾಗಿದ್ದಾರೆ. ಅವರಲ್ಲಿ 1 ವರ್ಷದ ಪುಟಾಣಿ ಮಗುವೂ ಸೇರಿದಂತೆ 18 ಮಂದಿ ಮಕ್ಕಳೂ ಇದ್ದರು.

ಕರ್ತವ್ಯದ ಸಂದರ್ಭ ಸೋಂಕಿತರಾಗಿದ್ದ 4 ಮಂದಿ ಪೊಲೀಸ್ ಡಿಸ್ಚಾರ್ಜ್

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಮತ್ತು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್‌ ಶೆಟ್ಟಿಅವರು ಪುಟಾಣಿ ಮಕ್ಕಳಿಗೆ ಚಾಕೊಲೇಟ್‌ ಮತ್ತು ಉಡುಗೊರೆಗಳನ್ನು ನೀಡಿ ಅಭಿನಂದಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡಾ, ಕೋವಿಡ್‌ ನೋಡಲ್‌ ಅಧಿಕಾರಿ ಡಾ. ಪ್ರಶಾಂತ್‌ ಭಟ್‌, ತಹಸೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಶಿಕಿರಣ್‌ ಮುಂತಾದವರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಒಂದೇ ಕುಟುಂಬದ 11 ಮಂದಿಗೆ ಸೋಂಕು!

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್‌ ಅವರು ಇವರೆಲ್ಲರೂ ಕೊರೋನಾದ ವಿರುದ್ಧದ ಯುದ್ಧವನ್ನು ಜಯಸಿದರು. ಆದ್ದರಿಂದ ಅವರನ್ನು ಸಂತೋಷದಿಂದ ಅಭಿನಂದಿಸುತಿದ್ದೇವೆ ಎಂದರು. ಕುಂದಾಪುರದ ಕೋವಿಡ್‌ ಆಸ್ಪತ್ರೆಯಲ್ಲಿಯೂ ಸಾಕಷ್ಟುಮಂದಿ ಕೊರೋನಾಮುಕ್ತರಾಗಿದ್ದಾರೆ. ಅವರನ್ನು ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ ಎಂದವರು ಹೇಳಿದರು.