ಬೆಂಗ್ಳೂರಲ್ಲಿ 4 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ಶುಕ್ರವಾರ ಬೆಂಗಳೂರಲ್ಲಿ 531 ಹೊಸ ಕೇಸ್ ಪತ್ತೆ| 434 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್| ರಾಜ್ಯದಲ್ಲಿ 9,42,031ಕ್ಕೆ ತಲುಪಿದೆ| ಚೇತರಿಸಿಕೊಂಡವರ ಒಟ್ಟು ಸಂಖ್ಯೆ 9,23,811 ಹಾಗೂ ಚಿಕಿತ್ಸೆ ಫಲಿಸದೆ ಮೃತಪಟ್ಟವರ ಸಂಖ್ಯೆ 12,233|
ಬೆಂಗಳೂರು(ಫೆ.07): ರಾಜ್ಯದಲ್ಲಿ ಶನಿವಾರ ಹೊಸದಾಗಿ 531 ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಗುಣಮುಖರಾದ 434 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶನಿವಾರದ 531 ಪ್ರಕರಣಗಳ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 318 ಪ್ರಕರಣಗಳು ದೃಢಪಟ್ಟಿದ್ದು, ಇದರಿಂದ ನಗರದ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 4 ಲಕ್ಷ ದಾಟಿದೆ. ರಾಜ್ಯದಲ್ಲಿ 9,42,031ಕ್ಕೆ ತಲುಪಿದೆ. ಇದರಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 9,23,811 ಹಾಗೂ ಚಿಕಿತ್ಸೆ ಫಲಿಸದೆ ಮೃತಪಟ್ಟವರ ಸಂಖ್ಯೆ 12,233 ಆಗಿದೆ. ಉಳಿದ 5968 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 144 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಮಗೆ ಮನೋರಂಜನೆಗಿಂತ ಜನರ ಆರೋಗ್ಯ ಮುಖ್ಯ: ನಟರಿಗೆ ಸುಧಾಕರ್ ಟಾಂಗ್
ಇನ್ನು ಜಿಲ್ಲಾವಾರು ಬೆಂಗಳೂರಿನಲ್ಲಿ 318, ದಕ್ಷಿಣ ಕನ್ನಡ 28, ಮೈಸೂರು 25, ತುಮಕೂರು 22, ಹಾಸನ 16, ಧಾರವಾಡ 15, ಕಲಬುರಗಿ 14, ಉತ್ತರ ಕನ್ನಡ 12, ಚಿತ್ರದುರ್ಗ 10, ಕೊಡಗು, ಚಿಕ್ಕಬಳ್ಳಾಪುರ, ಬೀದರ್ ತಲಾ 9, ಬೆಳಗಾವಿ, ಉಡುಪಿ ತಲಾ 7, ದಾವಣಗೆರೆ 5, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ತಲಾ 4, ಮಂಡ್ಯ, ಶಿವಮೊಗ್ಗ ತಲಾ 3, ಚಿಕ್ಕಮಗಳೂರು, ಗದಗ, ರಾಯಚೂರು, ಯಾದಗಿರಿ, ಬಳ್ಳಾರಿಯಲ್ಲಿ ತಲಾ 2, ಕೋಲಾರದಲ್ಲಿ ಒಂದು ಪ್ರಕರಣ ದೃಢಪಟ್ಟಿವೆ. ಮೂರು ಸಾವು ಪ್ರಕರಣಗಳು ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ಚಾಮರಾಜನಗರದಲ್ಲಿ ವರದಿಯಾಗಿವೆ.