ನಮಗೆ ಮನೋರಂಜನೆಗಿಂತ ಜನರ ಆರೋಗ್ಯ ಮುಖ್ಯ: ನಟರಿಗೆ ಸುಧಾಕರ್ ಟಾಂಗ್

ಚಿತ್ರಮಂದಿರ ಸಾಮರ್ಥ್ಯದ ಅರ್ಧದಷ್ಟು ಮಾತ್ರವೇ ಪ್ರೇಕ್ಷಕರಿಗೆ ಪ್ರವೇಶಾವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ನಿರ್ದೇಶನದ ಬಗ್ಗೆ ಸ್ಯಾಂಡಲ್‌ವುಡ್ ನಟರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Minister Dr K Sudhakar Reacts On Sandalwood actors theatre-seat rbj

ಬೆಂಗಳೂರು, (ಫೆ.03): ಥಿಯೇಟರ್​ ಭರ್ತಿಯಾಗುವಷ್ಟು ಪ್ರೇಕ್ಷಕರಿಗೆ ಪ್ರವೇಶ ಅವಕಾಶ ಸಿಗಬೇಕು ಎಂಬ ಕೂಗು ಜೋರಾಗುತ್ತಿದೆ. ಸ್ಯಾಂಡಲ್‌ವುಡ್ ಸ್ಟಾರ್ಸ್‌ಗಳು ಸರ್ಕಾರಕ್ಕೆ ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

"

ಚಿತ್ರ ಮಂದಿರಗಳಲ್ಲಿ ಶೇಕಡಾ 50 ರಷ್ಟು ವೀಕ್ಷಕರೊಂದಿಗೆ ಮಾತ್ರ ಸಿನಿಮಾ ಪ್ರದರ್ಶನ ಮಾಡಬೇಕು ಎನ್ನುವ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್​,  ಚಿತ್ರ ಮಂದಿರ ಅಂದ್ರೆ ಕ್ಲೋಸ್ಡ್​ ಎಸಿ ಇರುವ ಜಾಗ. ಇಲ್ಲಿ ಬೇಗನೆ ಕೊರೋನಾ ಸೋಂಕು ಹರಡಲಿದೆ ಎಂದು ಅಭಿಪ್ರಾಯಪಟ್ಟರು.

ಸಿಎಂ ಜೊತೆ ಮಾತನಾಡಿದ್ದೇನೆ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ: ಕುಮಾರ್ ಬಂಗಾರಪ್ಪ

ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸೂಚಿಸಿದೆ. ನಾವು ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪ್ರಕಾರ SOP ಬಿಡುಗಡೆ ಮಾಡಿದ್ದೇವೆ. ಅದರಂತೆ ಫೆಬ್ರವರಿ 28 ವರೆಗೂ ಶೇ.50 ರಷ್ಟು ತುಂಬಬಹುದು. ನೆರೆಯ ರಾಜ್ಯ ಕೇರಳದಲ್ಲಿ ಪ್ರತೀ ದಿನ 5 ಸಾವಿರ ಕೇಸ್​ ದಾಖಲಾಗುತ್ತಿದೆ. ಸದ್ಯ ನಮಗೆ ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ ಎಂದರು.

ಈ ಬಗ್ಗೆ ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡುತ್ತೇನೆ. ಅವರ ಸಲಹೆ ಮೇರೆಗೆ ಅಂತಿಮ ನಿರ್ಧಾರ ಮಾಡುತ್ತೇನೆ. ರಾಜಕಾರಣದ ಸಭೆ ಸರಿ ಎಂದು ನಾವು ಹೇಳಿಲ್ಲ, ಆದ್ರೆ ಹೊರಗಡೆ ಮಾಡ್ತಿದ್ದಾರೆ. ಆದ್ರೆ ಅದೂ ಸರಿ ಅಂತ ಹೇಳಲ್ಲ. ರೋಗ ನಿಯಂತ್ರಣ ಮಾಡೋದು ಸರ್ಕಾರದ ಜವಾಬ್ದಾರಿ. ನಾನು ಮಂತ್ರಿಯಾಗಿ ಏಕಾಏಕಿ ನಿರ್ಧಾರ ಮಾಡಲು ಸಾಧ್ಯವಾಗಲ್ಲ. ಸಿಎಂ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಮುಂದೆ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios