ಚಿಕ್ಕಮಗಳೂರು [ಜ.05]:  ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿದ್ದ ಮಹಿಳೆಯನ್ನು ಪೊಲೀಸರು ಭಾನುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಂಜಮ್ಮ (ಹೆಸರು ಬದಲಿಸಲಾಗಿದೆ) ಕಳೆದ ಮೂರು ದಿನಗಳಿಂದ ಹೊಂಚು ಹಾಕಿ ಶನಿವಾರ ಮಧ್ಯಾಹ್ನ ಗಂಡುಮಗುವನ್ನು ಅಪಹರಿಸಿದ್ದರು. ಭಾನುವಾರ ಬೆಳಗ್ಗೆ ಪೊಲೀಸರು ಮಗು ಹಾಗೂ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಸ್ಸಾಂನಿಂದ ಕೆಲಸಕ್ಕಾಗಿ ಚಿಕ್ಕಮಗಳೂರಿಗೆ ರುಸು ಮತ್ತು ಆತನ ಪತ್ನಿ ಅಂಜಲಿ ಬಂದಿದ್ದರು. ಗೌಡನಹಳ್ಳಿಯ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ವರ್ಷದಂದು ಅಂಜಲಿಗೆ ಗಂಡುಮಗುವಾಗಿತ್ತು. ಜ್ವರ ಇದ್ದರಿಂದ ಇಲ್ಲಿನ ಕೆಎಂಸಿ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಪಿ ಮಹಿಳೆಯು ಮೂರು ದಿನಗಳಿಂದ ಆಸ್ಪತ್ರೆಗೆ ಬಂದು ಹೋಗುತ್ತಿದ್ದಳು. ಅಸ್ಸಾಂ ಮೂಲದ ದಂಪತಿಗೆ ಕನ್ನಡ ಭಾಷೆ ಬರುವುದಿಲ್ಲ. ಆದ್ದರಿಂದ ಆ ಮಹಿಳೆ ಪರಿಚಯಸ್ಥ ಮಹಿಳೆ ಇರಬಹುದು ಎಂದು ಆಸುಪಾಸಿನವರು ಭಾವಿಸಿದ್ದರು.

ಆ್ಯಸಿಡ್‌ ಎರಚಿ, ಬೆಂಕಿ ಹಚ್ಚಿ ಪರಾರಿ : ಬೆಂಗಳೂರಲ್ಲೊಂದು ಭೀಕರ ಕೃತ್ಯ...

ಶುಕ್ರವಾರ ಮಧ್ಯಾಹ್ನ ಮಗು ತುಂಬಾ ಅಳುತ್ತಿತ್ತು. ಮಗುವಿನ ತಂದೆಗೆ ಊಟ ತರಲೆಂದು ಹೊರಗೆ ಕಳುಹಿಸಿ, ಸಂತೈಸುವ ನೆಪದಲ್ಲಿ ಮಹಿಳೆ ಗಂಡುಮಗುವನ್ನು ಹಾಗೆಯೇ ಹೊರಗೆ ತೆಗೆದುಕೊಂಡು ಹೋಗಿದ್ದಾಳೆ. ಮಗುವಿನ ತಂದೆ ರುಸು ಅವರು ಬಂದು ನೋಡಿದಾಗ ಮಗು ಇರಲಿಲ್ಲ. ಸಂತೈಸುತ್ತಿದ್ದ ಮಹಿಳೆಯೂ ಇರಲಿಲ್ಲ. ಆಗ ಎಲ್ಲ ಕಡೆಯಲ್ಲೂ ಮಗುವಿಗಾಗಿ ಹುಡುಕಾಡಿದ್ದಾರೆ. ಅನಂತರ ನಗರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿಗಳು ಎರಡು ತಂಡಗಳನ್ನು ರಚನೆ ಮಾಡಿದ್ದರು.

ಬಣ್ಣದ ಮಾತಿಗೆ ಮರಳು: ಆಂಟಿಯನ್ನ ಅನುಭವಿಸಿ ಪರಾರಿಯಾದ ಯುವಕ...

ಮಗುವನ್ನು ಅಪಹರಿಸುವ ವೇಳೆಯಲ್ಲಿ ಮಹಿಳೆ ತಾನು ತಂದಿದ್ದ ವ್ಯಾನಿಟಿ ಬ್ಯಾಗ್‌ ಸ್ಥಳದಲ್ಲೇ ಬಿಟ್ಟುಹೋಗಿದ್ದಳು. ಇದರಲ್ಲಿ ಆಕೆಯ ವಿಳಾಸ ಹಾಗೂ ಮೊಬೈಲ್‌ ನಂಬರ್‌ ಸಿಕ್ಕಿದೆ. ನಗರದ ರಾಮನಹಳ್ಳಿಯಲ್ಲಿ ವಾಸ ಮಾಡುತ್ತಿರುವುದು ಪೊಲೀಸರಿಗೆ ಗೊತ್ತಾಯಿತು. ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಮನೆಯಲ್ಲೇ ಇತ್ತು. ಕೂಡಲೇ ಮಹಿಳೆಯವನ್ನು ವಶಕ್ಕೆ ತೆಗೆದುಕೊಂಡು, ಮಗುವನ್ನು ತಾಯಿಗೆ ನೀಡಲಾಗಿದೆ. ಮಗು ಆರೋಗ್ಯವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ತಿಳಿಸಿದ್ದಾರೆ.