ಆನೇಕಲ್‌ [ಜ.04]:  ಹಣದ ವ್ಯವಹಾರ ಸಂಬಂಧ ವ್ಯಕ್ತಿಯೊಬ್ಬನ ಮೇಲೆ ಆ್ಯಸಿಡ್‌ ಎರಚಿ ನಂತರ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಎಚ್‌.ಹೊಸಳ್ಳಿಯಲ್ಲಿ ನಡೆದಿದೆ.

ಜ್ಯೋತಪ್ಪ (51) ತೀವ್ರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಜಿಗಣಿ ಎಪಿಸಿ ವೃತ್ತದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳ್ಳಾರಿ ಮೂಲದ ರದಿಯಾ ಎಂಬುವವನಿಗೆ ಜ್ಯೋತಪಪ್ಪ ಅವರು .35 ಸಾವಿರ ಸಾಲ ನೀಡಿದ್ದರು. ಆತ ಹಣ ಕೊಡುವುದಾಗಿ ಕರೆದಿದ್ದರಿಂದ ಬೈಕಿನಲ್ಲಿ ಹೊರಟು ಶ್ರೀರಾಮಪುರ ತಿರುವಿನಲ್ಲಿದ್ದಾಗ ಇದ್ದಕ್ಕಿದಂತೆ ಬೈಕಿನಲ್ಲಿ ಬಂದ ಇಬ್ಬರು ಜ್ಯೋತಪ್ಪ ಅವರ ಮೇಲೆ ಆ್ಯಸಿಡ್‌ ಎರಚಿದ್ದಾರೆ. ನೋವಿಗೆ ಕಿರುಚಿಕೊಂಡರೂ ಬಿಡದ ಇನ್ನೊಬ್ಬ ಪೆಟ್ರೋಲ್‌ ಸುರಿದಿದ್ದಾನೆ. 

ಕಾರಿನಲ್ಲಿ ಪತ್ತೆಯಾಯ್ತು ಕೊಳೆತು ಹೋದ ಮಹಿಳೆ ಶವ !

ಬೈಕಿನಿಂದ ಜ್ಯೋತಪ್ಪ ಕೆಳಗೆ ಬಿದ್ದಾಗ ಕಬ್ಬಿಣದ ಸಲಾಕೆಯಿಂದ ಬಡಿದಿದ್ದಾರೆ. ಬಳಿಕ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ. ದಾರಿ ಹೋಕರು ಜ್ಯೋತಪ್ಪ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪಿಎಸ್‌ಐ ಜಗದೀಶ್‌ ತಿಳಿಸಿದ್ದಾರೆ.