Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಭಾರೀ ಪ್ರಮಾಣದ ಗಾಂಜಾ ಸೀಜ್ : ಗುತ್ತಿಗೆ ಪಡೆದು 4 ಎಕರೆಯಲ್ಲಿ ಬೆಳೆ

ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಡ್ರಗ್ ಮಾಫಿಯಾ ಸದ್ದು ಮಾಡುತ್ತಿದ್ದು,  ಚಿತ್ರದುರ್ಗದಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಸೀಜ್ ಮಾಡಲಾಗಿದೆ. 

4 crore worth ganja seized in chitradurga
Author
Bengaluru, First Published Sep 16, 2020, 11:38 AM IST

ಚಿತ್ರದುರ್ಗ (ಸೆ.16): ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿ ಗ್ರಾಮದ ಜಮೀನೊಂದರಲ್ಲಿ ಕಳೆದ ಸೆ.4ರಂದು ದಾಳಿ ನಡೆಸಿ ವಶಪಡಿಸಿಕೊಳ್ಳಲಾದ ಗಾಂಜಾ ಗಿಡಗಳ ಮೊತ್ತ .4 ಕೋಟಿಯಷ್ಟೆಂದು ಅಂದಾಜಿಸಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಗಾಂಜಾ ಗಿಡಗಳು ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ರಾಧಿಕಾ, ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದ ರುದ್ರೇಶ್‌ 36 ಎಕರೆ ಜಮೀನು ಗುತ್ತಿಗೆ ಪಡೆದು ಅದರಲ್ಲಿ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಗಾಂಜಾ ಬೆಳೆದಿದ್ದ. ಒಟ್ಟು 8750 ಗಿಡಗಳಿದ್ದು, ಎಲ್ಲವನ್ನೂ ಕಿತ್ತು ತೂಕ ಮಾಡಲಾಗಿದೆ.

ಬೃಹತ್‌ ಗಾಂಜಾ ಕೇಸ್‌: ಸಿಪಿಐ, ಪಿಎಸ್‌ಐ ಸೇರಿ ಐವರು ಅಮಾನತು ..

 9850 ಕೆ.ಜಿಯಷ್ಟುಗಾಂಜಾ ಲಭ್ಯವಾಗಿದೆ. ಗಾಂಜಾದ ಜೊತೆಗೆ ಜಮೀನಿನಲ್ಲಿ ಮೆಕ್ಕೆಜೋಳ, ಗೊಬ್ಬರದ ಸಸಿ ಬೆಳೆಸಿದ್ದ. ಅಬಕಾರಿ ಇಲಾಖೆ ಸಹಕಾರದೊಂದಿಗೆ ಅಂದಾಜು ಮಾಡಲಾಗಿದೆ ಎಂದು ಎಸ್ಪಿ ರಾಧಿಕಾ ಮಾಹಿತಿ ನೀಡಿದರು.

ಗಾಂಜಾ ಮಾರುತ್ತಿದ್ದ ಮಾಜಿ ಕಾನ್‌ಸ್ಟೇಬಲ್‌ ಬಂಧನ

ಡ್ರಗ್ಸ್‌ ಮಾಫಿಯಾ ಭೇದಿಸುವ ಸಲುವಾಗಿ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ರಾಜ್ಯ ಪೊಲೀಸರು ಮಂಗಳವಾರವೂ ರಾಜ್ಯದ ವಿವಿಧೆಡೆ ದಾಳಿ ನಡೆಸಿ 38 ಕೆ.ಜಿ.ಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಹಿಂದೊಮ್ಮೆ ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಸಿಕ್ಕು ಬಿದ್ದು ಸೇವೆಯಿಂದ ವಜಾ ಆಗಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಸಂಜೀವ ಪಾಟೀಲ್‌ ಮತ್ತೆ ಅದೇ ವ್ಯವಹಾರದಲ್ಲಿ ತೊಡಗಿದ್ದಾಗ ಉಪನಗರ ಪೊಲೀಸ್‌ರ ಕೈಗೆ ಸಿಕ್ಕು ಬಿದ್ದಿದ್ದಾನೆ. ಆತನಿಂದ 283 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ನಗರದಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದು 1.75 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.

ಗಾಂಜಾದ ಕಾಂಪೋನೆಂಟ್‌ ತಾಯಿ ಎದೆ ಹಾಲಲ್ಲಿದೆ: ನಿವೇದಿತಾ ಶಾಕಿಂಗ್ ಹೇಳಿಕೆ!

ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಬಳಿ ಜಮೀನೊಂದರಲ್ಲಿ ಬೆಳೆದಿದ್ದ 20 ಕಿ.ಗ್ರಾಂ. ತೂಕದ 8 ಗಾಂಜಾ ಗಿಡಗಳನ್ನು ವಶಪಡಿಸಿರುವ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಅದೇರೀತಿಯಲ್ಲಿ ಹರಪನಹಳ್ಳಿ ಪಟ್ಟಣದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 215 ಗ್ರಾಂ ಒಣಗಿದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ. ಕೆ.ಆರ್‌.ಪೇಟೆ ತಾಲೂಕಿನ ನಾಟನಹಳ್ಳಿಯಲ್ಲಿ ಅಕ್ರಮವಾಗಿ ಬೆಳೆದಿದ್ದ 16.25 ಕೆ.ಜಿ. ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಹಾಸನ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಶುಂಠಿ ತೋಟದಲ್ಲಿ ಬೆಳೆಯಲಾಗಿದ್ದ 10 ಸಾವಿರ ಮೌಲ್ಯದ 1 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios