Asianet Suvarna News Asianet Suvarna News

ಬೃಹತ್‌ ಗಾಂಜಾ ಕೇಸ್‌: ಸಿಪಿಐ, ಪಿಎಸ್‌ಐ ಸೇರಿ ಐವರು ಅಮಾನತು

ಕಲಬರುಗಿಯಲ್ಲಿ ಸಿಕ್ಕ ಭಾರೀ ಪ್ರಮಾಣದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 

Kalaburagi Ganja Case cpi SI Suspended
Author
Bengaluru, First Published Sep 13, 2020, 8:46 AM IST

ಕಲಬುರಗಿ (ಸೆ.13) : ಕಾಳಗಿ ಸಮೀಪದ ಲಚ್ಚು ನಾಯಾಕ ತಾಂಡಾದ ಕುರಿದೊಡ್ಡಿ ಮೇಲೆ ಬೆಂಗಳೂರು ಶೇಷಾದ್ರಿಪುರಂ ಪೊಲೀಸರು ದಾಳಿ 13 ಕ್ವಿಂಟಲ್‌ ಗಾಂಜಾ ಪತ್ತೆ ಹಚ್ಚಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್‌ ಇಲಾಖೆ ಬೃಹತ್‌ ಗಾಂಜಾ ದಾಸ್ತಾನಿದ್ದರೂ ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆಂದು ಕಾಳಗಿ ಸಿಪಿಐ ಸೇರಿದಂತೆ ನಾಲ್ವರನ್ನು ಅಮಾನತು ಮಾಡಿದೆ.

ಕಾಳಗಿ ಸಿಪಿಐ ಭೋಜರಾಜ ರಾಠೋಡ, ಪಿಎಸ್‌ಐ ಬಸವರಾಜ ಚಿತಕೋಟೆ, ಎಎಸ್‌ಐ ನೀಲಕಂಠಪ್ಪ ಹೆಬ್ಬಾಳ, ಪೇದೆಗಳಾದ ಶರಣಪ್ಪ ಹಾಗೂ ಅನಿಲ್‌ ಭಂಡಾರಿ ಅವರನ್ನು ಅಮಾನತು ಮಾಡಿ ಜಿಲ್ಲಾ ಎಸ್ಪಿ ಡಾ.ಸೀಮಿ ಮರಿಯಮ್‌ ಜಾಜ್‌ರ್‍ ಆದೇಶ ಹೊರಡಿಸಿದ್ದಾರೆ.

ಕುರಿದೊಡ್ಡಿಯಲ್ಲಿದ್ದ ಗಾಂಜಾ ಪತ್ತೆ ಹಚ್ಚಿದ ರೋಚಕ ಸ್ಟೋರಿ! .

ಜಿಲ್ಲೆಯ ಕಾಳಗಿ ಬಳಿಯ ಲಕ್ಷ್ಮಣನಾಯಕ ತಾಂಡಾದ ಕುರಿ ಫಾಮ್‌ರ್‍ ಹೌಸ್‌ಗೆ ಈಚೆಗೆ ರಾಜಧಾನಿ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಗಾಂಜಾ ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು.

Follow Us:
Download App:
  • android
  • ios