Rain Effect: ಕೇಜಿಗೆ 360 ರೂ.: ನುಗ್ಗೆಕಾಯಿ ಬೆಲೆ ಕೇಳಿ ಸುಸ್ತಾದ ಗ್ರಾಹಕ..!

*  ಬೀದಿ ಬದಿ ಮಳಿಗೆಯಲ್ಲೇ 260
*  ಮಳೆಯಿಂದ ಬೆಳೆ ನಾಶ
*  ಬೆಂಗಳೂರು ನಗರಕ್ಕೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯ
 

360 Per kg of Drumstick in Bengaluru Due to Rain grg

ಬೆಂಗಳೂರು(ಡಿ.05): ಮಳೆಯಿಂದಾಗಿ(Rain) ತರಕಾರಿ ಬೆಳೆ ನಾಶವಾಗಿದ್ದರಿಂದ ನಗರದ ಮಾರುಕಟ್ಟೆಗಳಿಗೆ ಸದ್ಯಕ್ಕೆ ಸಮರ್ಪಕವಾಗಿ ತರಕಾರಿ(Vegetable) ಉತ್ಪನ್ನ ಪೂರೈಕೆ ಆಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನುಗ್ಗೆಕಾಯಿ(Drumstick), ಟೊಮೆಟೋ(Tomoto), ಬೀನ್ಸ್‌(Beans) ಮತ್ತಿತರ ತರಕಾರಿಗಳು ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ದರ ಏರಿಕೆ ಪೈಪೋಟಿಯಲ್ಲಿ ಸರದಿಯಲ್ಲಿರುವ ನುಗ್ಗೆಕಾಯಿ ಕೇಜಿಗೆ ಬರೊಬ್ಬರಿ 200 ಗಡಿ ದಾಟಿದೆ. ಮಾರುಕಟ್ಟೆ, ರಸ್ತೆ ಪಕ್ಕದ ಮಳಿಗೆಗಳಲ್ಲೇ ಕೇಜಿ ನುಗ್ಗೇಕಾಯಿ ದರ 260 ಆಸುಪಾಸಿನಲ್ಲಿದೆ. ಹಾಪ್‌ಕಾಮ್ಸ್‌ನಲ್ಲಿ 360 ರಷ್ಟಿದೆ. ಕ್ಯಾಪ್ಸಿಕಂ 120ಕ್ಕೆ ಮಾರಾಟವಾಗಿದೆ. ಎಲ್ಲ ಅಗತ್ಯ ತರಕಾರಿಗಳ ನಿರಂತರ ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬಿದ್ದಿದೆ.

ಮಳೆಯಿಂದಾಗಿ ತರಕಾರಿ ಬೆಳೆ(vegetable Crop Damage) ನಾಶವಾಗಿದ್ದರಿಂದ ಬೇಡಿಕೆಯಷ್ಟು ತರಕಾರಿ ದಿಢೀರನೇ ಲಭ್ಯವಾಗುವುದಿಲ್ಲ. ಸದ್ಯ ಮಳೆ ಕಡಿಮೆಯಾದರೂ ಸಹ ಅಗತ್ಯದಷ್ಟು ತರಕಾರಿ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ತರಕಾರಿಗಳ ಬೆಲೆ ಯಥಾ ಸ್ಥಿತಿಯಲ್ಲಿರಲಿದೆ. ಇನ್ನು ಮಹಾರಾಷ್ಟ್ರ(Maharashtra) ಭಾಗದಿಂದ ನಗರಕ್ಕೆ ಟೊಮೆಟೋ ಆಮದಾಗಿದ್ದರಿಂದ ದರ ತುಸು ಕಡಿಮೆ ಆಯಿತು. ಉಳಿದ ತರಕಾರಿಗಳ ಸಗಟು ಬೆಲೆ ಸಹ ಇಳಿಕೆಯಾಗಿಲ್ಲ ಎಂದು ಕಲಾಸಿಪಾಳ್ಯ ಸಗಟು ತರಕಾರಿ ವರ್ತಕ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ಮಾಹಿತಿ ನೀಡಿದರು.

Karnataka Rains: ಅಕಾಲಿಕ ಮಳೆಗೆ ತರಕಾರಿ ಬೆಳೆ ನಾಶ, ಗ್ರಾಹಕರ ಜೇಬಿಗೆ ಕತ್ತರಿ..!

ಕಳೆದ ತಿಂಗಳು .20-30 ಇದ್ದ ಕೇಜಿ ತೊಂಡೆಕಾಯಿ ಇಂದು 160ಕ್ಕೆ, 40-50 ಇದ್ದ ಕ್ಯಾರೆಟ್‌ ಸದ್ಯ 100ಕ್ಕೆ ಮಾರಾಟವಾಗುತ್ತಿದೆ. ಬೆಂಡೆಕಾಯಿ 20ರಿಂದ 100, ಕೇಜಿ ಟೊಮೆಟೋ 40ರಿಂದ 80ಕ್ಕೆ ಜಿಗಿದಿದೆ. ತಲಾ 30 ಕೇಜಿ ಮೂಲಂಗಿ ಮತ್ತು ಹಿರೇಕಾಯಿ ಇಂದು ತಲಾ 80 ಕೊಟ್ಟು ಕೊಳ್ಳುವಂತಾಗಿದೆ. ಕ್ಯಾಪ್ಸಿಕಂ 40ರಿಂದ 120ಕ್ಕೆ ಹೆಚ್ಚಾದರೆ, 40-50 ಕೇಜಿ ಬೀನ್ಸ್‌ ಮತ್ತು 20 ಇದ್ದ ಕೇಜಿ ಬದನೆಕಾಯಿ ಸದ್ಯ ತಲಾ 100ಕ್ಕೆ ಏರಿಕೆಯಾಗಿದೆ.

ತಿಂಗಳ ಹಿಂದೆ ಕೇಜಿ ನುಗ್ಗೆಕಾಯಿಗೆ 25-30 ಇತ್ತು, ಆಗ 10ಕ್ಕೆ ನಾಲ್ಕಾರು ನುಗ್ಗೆಕಾಯಿಗಳು ಸಿಗುತ್ತಿದ್ದವು. ಸದ್ಯ 100 ಕೊಟ್ಟರೂ ನಾಲ್ಕು ನುಗ್ಗೆಕಾಯಿ ಬಾರದ ಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ಮತ್ತು ಆಲೂಗಡ್ಡೆ ದರ ಸಾಮಾನ್ಯವಾಗಿದ್ದು, ಕೇಜಿಗೆ ತಲಾ 35-40, ಕಟ್ಟು ಕೊತ್ತಂಬರಿ 15-20, ಪುದೀನ 10-15ಕ್ಕೆ ಮಾರಾಟವಾಗಿದೆ. ಇತ್ತೀಚೆಗಷ್ಟೇ 100 ಗಡಿ ದಾಟಿದ್ದ ಕೇಜಿ ಟೊಮೆಟೋ ದರದಲ್ಲಿ ಕೊಂಚ ಇಳಿಕೆಯಾಗಿದ್ದು, 80ಕ್ಕೆ ಸಿಗುತ್ತಿದೆ.

karnataka Rain : ಸಾಮಾನ್ಯರಿಗೆ ತರಕಾರಿ ಗಗನ ಕುಸುಮ : ಮತ್ತೆ ಏರುತ್ತಲೇ ಇರುವ ಬೆಲೆ

ಹಾಪ್‌ಕಾಮ್ಸ್‌ ದರಪಟ್ಟಿ ತರಕಾರಿಗಳು ಬೆಲೆ(ಕೇಜಿಗೆ)

ನುಗ್ಗೇಕಾಯಿ 360
ಬದನೆ 94
ಬೀನ್ಸ್‌ 99
ಕ್ಯಾರೆಟ್‌ 84
ಟೊಮೆಟೋ 108
ಕ್ಯಾಪ್ಸಿಕಂ 120
ಆಲೂಗಡ್ಡೆ 42
ಈರುಳ್ಳಿ 35
ಮೂಲಂಗಿ 80
ಕೊತ್ತಂಬರಿ 90
ಪುದೀನ 94

ದಿನಸಿ, ತರಕಾರಿ, ಗ್ಯಾಸ್‌ ಎಲ್ಲವೂ ದುಬಾರಿ: ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟ

ನಿರಂತರ ಮಳೆ ಹಾಗೂ ಇಂಧನ(Fuel), ದಿನಸಿ(Groceries) ವಸ್ತು ಹಾಗೂ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಬೀದಿ ಬದಿಯ ಸಣ್ಣ ಸಣ್ಣ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪಾರಿಗಳು ತೀವ್ರ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.
ನಿತ್ಯ ಸಗಟು ಮಾರುಕಟ್ಟೆಯಿಂದ ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಖರೀದಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಸಣ್ಣ ವ್ಯಾಪಾರಿಗಳು ದುಬಾರಿ ದರದಲ್ಲಿ ತಂದ ತರಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಖರೀದಿಯಾಗದೇ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಮಳೆಗೆ ತೊಯ್ದ ಸೊಪ್ಪುಗಳು ಬೇಗ ಹಾಳಾಗುತ್ತಿರುವುದರಿಂದ ಹಾಕಿದ ಬಂಡವಾಳ ಮರಳಿ ಸಿಗದಂತಾಗಿದೆ.
 

Latest Videos
Follow Us:
Download App:
  • android
  • ios