Bengaluru: ಜಿಮ್‌ನಲ್ಲಿ ದಿಢೀರ್ ಕುಸಿದು ಮಹಿಳೆ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ
* ವರ್ಕೌಟ್ ವೇಳೆ ಕುಸಿದು ಮಹಿಳೆ ಸಾವು
* ಮಲ್ಲೇಶಪಾಳ್ಯದ ಜಿಮ್‌ನಲ್ಲಿ ಎಂದಿನಂತೆ ದೈಹಿಕ ಕಸರತ್ತು ಮಾಡುವಾಗ ಘಟನೆ
* ಹೃದಯಾಘಾತ ಶಂಕೆ
ಬೆಂಗಳೂರು(ಮಾ.27): ಜಿಮ್‌ನಲ್ಲಿ(Gym) ದೈಹಿಕ ಕಸರತ್ತು ಮಾಡುವಾಗ ದಿಢೀರ್ ಕುಸಿದು ಬಿದ್ದು ಮಹಿಳೆಯೊಬ್ಬರು(Women) ಮೃತಪಟ್ಟಿರುವ(Death) ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಿ.ಎಂ.ಪಾಳ್ಯ ನಿವಾಸಿ ವಿನಯಾ ವಿಠ್ಠಲ್(35) ಮೃತ ಮಹಿಳೆ. ಎಂದಿನಂತೆ ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶಪಾಳ್ಯದ ಚಾಲೆಂಜಿಂಗ್ ಹೆಲ್ತ್ ಕ್ಲಬ್ ಬಂದಿರುವ ವಿನಯಾ ದೈಹಿಕ ಕಸರತ್ತು ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಜಿಮ್ ಸಿಬ್ಬಂದಿ ಹಾಗೂ ದೈಹಿಕ ಕಸರತ್ತು(Physical Exercise) ಮಾಡುತ್ತಿದ್ದ ಕೆಲವರು ಕೂಡಲೇ ವಿನಯಾ ನೆರವಿಗೆ ಧಾವಿಸಿ ಆರೈಕೆ ಮಾಡಿದ್ದಾರೆ. ಬಳಿಕ ಅವರನ್ನು ಸಮೀಪದ ಸಿ.ವಿ.ರಾಮನ್ ಆಸ್ಪತ್ರೆಗೆ(Hospital) ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ವಿನಯಾ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದರು ಎಂದು ಪೊಲೀಸರು(Police) ತಿಳಿಸಿದ್ದಾರೆ.
Over Exercising Effect: ಜಿಮ್ ವರ್ಕೌಟ್ ಅತಿ ಬೇಡ, ಪುರುಷತ್ವವೇ ಹೋಗ್ಬೋದು!
ಮಂಗಳೂರು(Mangaluru) ಮೂಲದ ವಿನಯಾ ಐಡಿಸಿ ಕಂಪನಿಯಲ್ಲಿ ಬ್ಯಾಕ್‌ಗ್ರೌಂಡ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಜಿ.ಎಂ.ಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಒಬ್ಬರೇ ನೆಲೆಸಿದ್ದರು. ಶುಕ್ರವಾರ ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಶನಿವಾರ ಬೆಳಗ್ಗೆ ಎಂದಿನಂತೆ ಜಿಮ್‌ನಲ್ಲಿ ದೈಹಿಕ ಕಸರತ್ತು ಮಾಡುವಾಗ ಈ ದುರ್ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹೃದಯಾಘಾತದಿಂದ(Heart Attack) ವಿನಯಾ ಮೃತಪಟ್ಟಿರುವ ಸಾಧ್ಯತೆಯಿದೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನಯಾ ದೈಹಿಕ ಕಸರತ್ತು ನಡೆಸುವಾಗ ಕುಸಿದು ಬೀಳುವ ದೃಶ್ಯ ಜಿಮ್‌ನ ಸಿಸಿಟಿವಿ(CCTV) ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿನಯಾ ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಬಾಡಿಗೆ ಇದ್ದರು. ಪ್ರತಿದಿನ ಬೆಳಗ್ಗೆ ಜಿಮ್ ಹೋಗುತ್ತಿದ್ದರು. ಮನೆಯಲ್ಲಿ ವಿನಯಾ ಒಬ್ಬರೇ ಇರುತ್ತಿದ್ದರು. ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಜಿಮ್ ಹೋದಾಗ ವಿನಯಾ ಮೃತಪಟ್ಟಿರುವುದು ವಿಷಯ ಗೊತ್ತಾಯಿತು ಅಂತ ಬಾಡಿಗೆ ಮನೆ ಮಾಲೀಕರು ಜಯಮ್ಮ ತಿಳಿಸಿದ್ದಾರೆ.
ಜಿಮ್‌ನಲ್ಲಿ ಬೇರ್‌ಬೆಲ್ ಕುಸಿದು ಮಗಳ ಮುಂದೆಯೇ ಮಹಿಳೆ ಸಾವು
ಮೆಕ್ಸಿಕೋ: ಜಿಮ್‌ನಲ್ಲಿ ಬೇರ್‌ಬೆಲ್ ಕುಸಿದು ಮಗಳ ಮುಂದೆಯೇ ಮಹಿಳೆ ಸಾವಿಗೀಡಾದ ಘಟನೆ ಮೆಕ್ಸಿಕೋದಲ್ಲಿ ಫೆ.24 ರಂದು ನಡೆದಿತ್ತು. 180 ಕೆಜಿ ಭಾರದ ತೂಕ ಎತ್ತುವ ವೇಳೆ ಅದು ಮಹಿಳೆಯ ಕುತ್ತಿಗೆ ಮೇಲೆಯೇ ಬಿದ್ದು ಈ ಅನಾಹುತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ಮಹಿಳೆಯ ಪುಟ್ಟ ಮಗಳು ಇದ್ದಳು. ಈ ದುರಂತದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮೃತಪಟ್ಟವರು ಮೆಕ್ಸಿಕನ್ ಮಹಿಳೆಯಾಗಿದ್ದು, ಅವರ ಹೆಸರು ತಿಳಿದು ಬಂದಿಲ್ಲ. ತಮ್ಮ ಪುತ್ರಿಯೊಂದಿಗೆ ಜಿಮ್‌ಗೆ ಬಂದು ವ್ಯಾಯಾಮ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿತ್ತು. ಈ ದುರಂತ ಸಂಭವಿಸುತ್ತಿದ್ದಂತೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಇತರರೆಲ್ಲರೂ ಸ್ಥಳಕ್ಕೆ ಓಡಿ ಬಂದು ಮಹಿಳೆಯ ರಕ್ಷಣೆಗೆ ಯತ್ನಿಸುತ್ತಾರೆ. ಆದರೆ ಅಷ್ಟರಲ್ಲಾಗಲ್ಲೇ ಅತೀಯಾದ ಭಾರ ಆಕೆಯ ಕುತ್ತಿಗೆಯ ಮೇಲೆ ಬಿದ್ದು ಆಕೆ ಸಾವನ್ನಪ್ಪಿದ್ದರಿಂದ ಯಾರೂ ಏನೂ ಮಾಡಲಾಗಲಿಲ್ಲ. ಎಲ್ಲರೂ ಶಾಕ್‌ಗೆ ಒಳಗಾಗಿದ್ದರೆ ಓರ್ವ ವ್ಯಕ್ತಿ ಆಕೆಯನ್ನು ಎಳೆಯಲೂ ಪ್ರಯತ್ನಿಸುವುದನ್ನು ನೋಡಬಹುದು.
Health Tips: ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ?
ಫೆಬ್ರವರಿ 21ರಂದು ಮೆಕ್ಸಿಕೋ ನಗರದಲ್ಲಿರುವ (Mexico City) ಜಿಮ್ ಫಿಟ್‌ನೆಸ್ ಸ್ಪೋರ್ಟ್ಸ್ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ ಮೃತಪಟ್ಟ ಮಹಿಳೆಯನ್ನು ಅಂದಾಜು 35 ರಿಂದ 40 ವರ್ಷದ ಮಹಿಳೆ ಎಂದು ಅಂದಾಜಿಸಲಾಗಿದೆ.ಆಕೆ ಸಾವಿಗೀಡಾಗುವ ಮೊದಲು 180 ಕೆಜಿ ತೂಕ ಎತ್ತಲು ಆಕೆ ಮುಂದಾಗಿದ್ದು, ಇದಕ್ಕೂ ಮೊದಲು ಧಡೂತಿ ದೇಹದ ವ್ಯಕ್ತಿಯೊರ್ವ ಬೇರ್‌ಬೆಲ್‌ನ ತೂಕವನ್ನು ಸರಿ ಹೊಂದಿಸುತ್ತಿರುವುದು ವಿಡಿಯೋದಲ್ಲಿದೆ. ಆದರೆ ಮಹಿಳೆ ಭಾರ ಎತ್ತಲು ತನ್ನ ಕುತ್ತಿಗೆಯನ್ನು ಬೇರ್‌ಬೆಲ್ ಕೆಳಭಾಗದಲ್ಲಿ ನುಗ್ಗಿಸಿದ ಕೆಲ ಕ್ಷಣದಲ್ಲೇ ಅದು ಆಕೆಯ ಮೇಲೆ ಬೀಳುತ್ತದೆ.
ಈ ವೇಳೆ ವ್ಯಕ್ತಿ ಹಾಗೂ ಬಾಲಕಿ ಆಕೆಯ ಮೇಲೆ ಬಿದ್ದ ಬೇರ್‌ಬೆಲ್ ಅನ್ನು ಮೇಲೆ ಎತ್ತಲು ಪ್ರಯತ್ನಿಸುತ್ತಾರೆ. ಆದರೆ ಮೇಲೆತ್ತಲು ಅವರಿಗೆ ಸಾಧ್ಯವಾಗಿಲ್ಲ. ಘಟನೆಯ ಬಳಿಕ ಮಹಿಳೆಯ ಮಗಳು ಶಾಕ್‌ಗೆ ಒಳಗಾಗಿದ್ದು, ಆಕೆಗೆ ಮಾನಸಿಕ ಧೈರ್ಯ ತುಂಬಲಾಗುತ್ತಿದೆ ಎಂದು ತಿಳಿದು ಬಂದಿದೆ. ಮಹಿಳೆಯ ಸಾವು ಎಲ್ಲರಲ್ಲಿ ಧಿಗ್ಭ್ರಮೆ ಮೂಡಿಸಿತ್ತು.